ಆಸ್ಪತ್ರೆಗಳ ಬಿಲ್ ದರೋಡೆಗೆ ಬ್ರೇಕ್? – ಕೇಂದ್ರದಿಂದ ನಿಖರ ಕ್ರಮಗಳು ಪ್ರಾರಂಭ.

ವೈದ್ಯಕೀಯ ವೆಚ್ಚ ಕಡಿತಗೊಳಿಸಿ, ಆರೋಗ್ಯ ವಿಮೆ ಜನಸಾಮಾನ್ಯರಿಗೆ ಸುಲಭಗೊಳಿಸಲು ಉದ್ದೇಶ

ಸಂಗ್ರಹ: ಸಮಗ್ರ ಸುದ್ದಿ

ಹೊಸದಿಲ್ಲಿ | ಜುಲೈ 11
ಚಿಕಿತ್ಸೆಯ ಹೆಸರಿನಲ್ಲಿ ಅತಿ ದರದ ಬಿಲ್‌ಗಳ ಮೂಲಕ ಆಸ್ಪತ್ರೆಗಳ ಸುಲಿಗೆ ಮತ್ತು ವಿಮಾ ಕಂಪನಿಗಳ ಮೇಲೆ ಹೊರೆಯಾಗುತ್ತಿರುವ ದಾಳಿಗೆ ತಡೆ ನೀಡಲು ಕೇಂದ್ರ ಸರ್ಕಾರ ಮುಂದಾಗಿದೆ. ವೈದ್ಯಕೀಯ ವೆಚ್ಚದ ಪಾರದರ್ಶಕತೆ ಹೆಚ್ಚಿಸುವುದು, ಆರೋಗ್ಯ ವಿಮೆಯನ್ನು ಹೆಚ್ಚು ಜನರಿಗೆ ಕೈಗೆಟುಕುವಂತೆ ಮಾಡುವುದು ಈ ಕ್ರಮದ ಉದ್ದೇಶವಾಗಿದೆ.


ಬಿಲ್ಲಿಂಗ್ ಅತಿರೇಕ – ಸರ್ಕಾರದ ಕಣ್ಣಿಗೆ ಬಿದ್ದ ಕಳ್ಳಾಟ

ಆಸ್ಪತ್ರೆಗಳು ಐಷಾರಾಮಿ ಸೇವೆಗಳ ಹೆಸರಿನಲ್ಲಿ ಮನಬಂದಂತೆ ಉನ್ನತ ಬಿಲ್ಲಿಂಗ್, ಹಾಗು ಆರೋಗ್ಯ ವಿಮೆ ಹೊಂದಿರುವ ವ್ಯಕ್ತಿಗಳಿಗೆ ಎರಡರಷ್ಟು ಬಿಲ್ ಹಾಕಿ ವಿಮೆ ಕಂಪನಿಗಳಿಂದ ಹೆಚ್ಚು ಮೊತ್ತ ವಸೂಲಿ ಮಾಡುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆ. ಈ ದುರುಪಯೋಗದಿಂದ ವಿಮಾ ಸಂಸ್ಥೆಗಳು ತಮ್ಮ ಪ್ರೀಮಿಯಂ ದರವನ್ನು ಹೆಚ್ಚಿಸುತ್ತಿದ್ದು, ಸಾಮಾನ್ಯ ನಾಗರಿಕರಿಗಾಗಿ ಆರೋಗ್ಯ ವಿಮೆ ಗಗನಕುಸುಮವಾಗಿದೆ.


ವೈದ್ಯ ಬಿಲ್‌ಗೆ ಲಗಾಮು ಹಾಕುವ ಕೇಂದ್ರದ ಯತ್ನಗಳು:

📌 ವಿಮಾನ ಬಿಲ್ ನಿಯಂತ್ರಣ:
ಆಸ್ಪತ್ರೆಗಳ ಬಿಲ್ಲಿಂಗ್ ವ್ಯವಸ್ಥೆಯ ಮೇಲೆ ನಿಯಂತ್ರಣ ಸಾಧಿಸುವ ನಿಟ್ಟಿನಲ್ಲಿ ‘ನ್ಯಾಷನಲ್ ಹೆಲ್ತ್ ಕ್ಲೇಮ್ ಎಕ್ಸ್‌ಚೇಂಜ್’ (NHCE) ಪೋರ್ಟಲ್ ಅನ್ನು ಪುನ್ರಾಯೋಜನೆ ಮಾಡಲಾಗುತ್ತಿದೆ.

📌 ಪೋರ್ಟಲ್‌ಗೆ ಜಂಟಿ ಉಸ್ತುವಾರಿ:
ಈ ಪೋರ್ಟಲ್‌ನ ನಿರ್ವಹಣೆಯನ್ನು ಈಗಿನಿಂದ ಹಣಕಾಸು ಸಚಿವಾಲಯ ಮತ್ತು ಭಾರತೀಯ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (IRDAI) ಜಂಟಿಯಾಗಿ ನಡೆಸಲಿದ್ದು, ಅದುವರೆಗೂ ಇದು ಆರೋಗ್ಯ ಸಚಿವಾಲಯದ ಅಧೀನದಲ್ಲಿತ್ತು.

📌 ಹಾಗೆಯೇ, ಆಸ್ಪತ್ರೆಗಳ ಬಿಲ್ಲಿಂಗ್ ಮೇಲೆ ನೇರ ನಿಗಾ ಇರಿಸಲು ಹೊಸ ನಿಯಂತ್ರಣ ವ್ಯವಸ್ಥೆ ರೂಪುಗೊಳ್ಳಲಿದೆ.


ಪ್ರೀಮಿಯಂ ಏರಿಕೆಗೆ ಕಾರಣ – ಜಿಎಸ್‌ಟಿ ವಿನಾಯಿತಿಗೆ ಒತ್ತಾಯ

🎯 ಆರೋಗ್ಯ ವಿಮೆಗಳ ಪ್ರೀಮಿಯಂ ನಿರಂತರವಾಗಿ ಏರುತ್ತಿರುವ ಹಿನ್ನೆಲೆಯಲ್ಲಿ, ಈ ಕ್ಷೇತ್ರದ ಮೇಲೆ ವಿಧಿಸಲಾಗುತ್ತಿರುವ 18% ಜಿಎಸ್‌ಟಿ ರದ್ದುಗೊಳಿಸಬೇಕು ಎಂಬ ಸಾರ್ವಜನಿಕ ಒತ್ತಾಯ ಜೋರಾಗಿದೆ.
🎯 ಜಿಎಸ್‌ಟಿ ರದ್ದಾದರೆ ವಿಮೆಗಳ ಖರ್ಚು ಕಡಿಮೆಯಾಗಲಿದ್ದು, ಸಾಮಾನ್ಯ ಜನರು ಹೆಚ್ಚಿನ ಸಂಖ್ಯೆಯಲ್ಲಿ ಆರೋಗ್ಯ ವಿಮೆ ಪಡೆಯಲು ಮುಂದಾಗಬಹುದಾಗಿದೆ.


ಉದ್ದೇಶ: ಸಾಮಾನ್ಯ ಜನರಿಗೂ ಸೌಲಭ್ಯದ ಆರೋಗ್ಯ ವಿಮೆ

ಸರ್ಕಾರದ ಈ ಹೊಸ ನೀತಿ ಚಟುವಟಿಕೆಗಳು ಚಿಕಿತ್ಸಾ ಬಿಲ್‌ಗಳಲ್ಲಿ ನಿಯಂತ್ರಣ, ವಿಮಾನ ಖಾತಾ ವ್ಯವಸ್ಥೆಯ ಪಾರದರ್ಶಕತೆ, ಮತ್ತು ವಿಮೆ ಕಂಪನಿಗಳ ಮೇಲಿನ ಹೊರೆ ನಿವಾರಣೆ ಎಂಬ ಪ್ರಮುಖ ಗುರಿಗಳನ್ನು ಹೊಂದಿವೆ. ಇದರ ಜೊತೆಗೆ, ಆರೋಗ್ಯ ಸೇವೆಗಳನ್ನು ವ್ಯಾಪಕವಾಗಿ ಜನರಿಗೆ ಮುಟ್ಟಿಸಲು ಇದು ದಾರಿದೀಪವಾಗಲಿದೆ.

Leave a Reply

Your email address will not be published. Required fields are marked *