ನಾವಿಂದು ನಿಮಗೆ ಹೊಸ ಮೊಟ್ಟೆ ದೋಸೆ ರೆಸಿಪಿ ಮಾಡುವುದು ಹೇಗೆ ಎಂದು ತಿಳಿಸುತ್ತೇವೆ. ಈ ದೋಸೆಯನ್ನು ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಎಲ್ಲರೂ ಇಷ್ಟಪಟ್ಟು ಬಾಯಿ ಚಪ್ಪರಿಸಿಕೊಂಡು ತಿನ್ನುತ್ತಾರೆ ಎಂದೇ ಹೇಳಬಹುದು. ಬನ್ನಿ ಹಾಗಾದ್ರೆ ಮೊಟ್ಟೆ ದೋಸೆ ಮಾಡುವುದು ಹೇಗೆ ಎಂದು ತಿಳಿಯೋಣ.

ಸಾಮಾನ್ಯವಾಗಿ ಬೆಳಗ್ಗೆ ಹೊತ್ತು ಬ್ರೇಕ್ಫಾಸ್ಟ್ಗೆ ಬಹುತೇಕ ಮನೆಗಳಲ್ಲಿ ದೋಸೆ ಮಾಡುವುದನ್ನು ನೀವು ನೋಡಿರಬಹುದು. ಈಗಂತೂ ಮಸಾಲೆ, ದೋಸೆ, ಸೆಟ್ ದೋಸೆ, ಖಾಲಿ ದೋಸೆ, ಈರುಳ್ಳಿ ದೋಸೆ, ರಾಗಿ ದೋಸೆ, ರವೆ ದೋಸೆ, ಗೋಧಿ ದೋಸೆ, ಹೀಗೆ ವೆರೈಟಿ ದೋಸೆಗಳಿದೆ.

ಇವುಗಳನ್ನು ತಿಂದೂ ಕೂಡ ಬೇಜಾರಾಗಿದ್ರೆ ನಾವಿಂದು ನಿಮಗೆ ಹೊಸ ಮೊಟ್ಟೆ ದೋಸೆ ರೆಸಿಪಿ ಮಾಡುವುದು ಹೇಗೆ ಎಂದು ತಿಳಿಸುತ್ತೇವೆ. ಈ ದೋಸೆಯನ್ನು ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಎಲ್ಲರೂ ಇಷ್ಟಪಟ್ಟು ಬಾಯಿ ಚಪ್ಪರಿಸಿಕೊಂಡು ತಿನ್ನುತ್ತಾರೆ ಎಂದೇ ಹೇಳಬಹುದು. ಬನ್ನಿ ಹಾಗಾದ್ರೆ ಮೊಟ್ಟೆ ದೋಸೆ ಮಾಡುವುದು ಹೇಗೆ ಎಂದು ತಿಳಿಯೋಣ.

ಮೊಟ್ಟೆ ದೋಸೆ ಮಾಡಲು ಬೇಕಾದ ಸಾಮಾಗ್ರಿಗಳು: ದೋಸೆ ಹಿಟ್ಟು, ಕೋಳಿ ಮೊಟ್ಟೆ- 2, ಈರುಳ್ಳಿ- 1, ಹಸಿ ಮೆಣಸಿನ ಕಾಯಿ – 2, ಕಾಳುಮೆಣಸಿನ ಪುಡಿ – ಸ್ವಲ್ಪ, ಎಣ್ಣೆ- ಅಗತ್ಯಕ್ಕೆ ತಕ್ಕಷ್ಟು, ಕೊತ್ತಂಬರಿ ಸೊಪ್ಪು- ಸ್ವಲ್ಪ, ಉಪ್ಪು-ರುಚಿಗೆ ತಕ್ಕಷ್ಟು.

ಮೊಟ್ಟೆ ದೋಸೆ ಮಾಡುವ ವಿಧಾನ: ಮೊದಲು ಒಂದು ಈರುಳ್ಳಿ, ಕೊತ್ತಂಬರಿ ಸೊಪ್ಪು ಹಾಗೂ ಹಸಿಮೆಣಸಿನ ಕಾಯಿಯನ್ನು ತೆಗೆದುಕೊಂಡು ಸಣ್ಣದಾಗಿ ಕತ್ತರಿಸಿ. ಬಳಿಕ ಸ್ಟವ್ ಮೇಲೆ ಒಂದು ಬಾಣಲೆಯನ್ನು ಇಟ್ಟು. ಅದಕ್ಕೆ 3 ರಿಂದ 4 ಚಮಚ ಎಣ್ಣೆಯನ್ನು ಹಾಕಿ. ಎಣ್ಣೆ ಕಾದ ಬಳಿಕ ಈರುಳ್ಳಿ ಹಾಗೂ ಹಸಿಮೆಣಸಿನ ಕಾಯಿಯನ್ನು ಹಾಕಿ ಕೆಂಪಗೆ ಹುರಿದುಕೊಳ್ಳಿ.

ಇದರೊಂದಿಗೆ ಕೊತ್ತಂಬರಿ ಸೊಪ್ಪು, ಉಪ್ಪು, ಕಾಳು ಮೆಣಸಿನ ಪುಡಿನ್ನು ಹಾಕಿ ಮಿಕ್ಸ್ ಮಾಡಿ ಸ್ಟವ್ ಆಫ್ ಮಾಡಿ. ನಂತರ ಸ್ವಲ್ಪ ತಣ್ಣಗಾಗಲು ಬಿಡಿ. ಮೊಟ್ಟೆಯನ್ನು ಇದಕ್ಕೆ ಒಡೆದು ಎಲ್ಲವನ್ನು ಚೆನ್ನಾಗಿ ಮಿಶ್ರಣ ಮಾಡಿ.

ಇದೇ ಸಮಯದಲ್ಲಿ ಒಲೆಯ ಮೇಲೆ ತವಾ ಇಡಿ. ನಂತರ ತವಾದ ಮೇಲೆ ಒಂದು ಚಮಚ ಎಣ್ಣೆಯನ್ನು ಹಾಕಿ ತವಾದ ಸುತ್ತಲು ಹರಡಿ. ಈಗ ದೋಸೆ ಹಿಟ್ಟನ್ನು ಹುಯ್ದು, ಮಸಾಲೆ ಮಿಶ್ರಿತ ಮೊಟ್ಟೆಯನ್ನು ಅದರ ಮೇಲೆ ಹಾಕಿ ಬೇಯಿಸಿ.

ಮೊಟ್ಟೆ ಬೇಯುತ್ತಿದ್ದಂತೆ ಅದನ್ನು ದೋಸೆ ಅಳ್ಳೆಯಿಂದ ತೆಗೆದು ಪ್ಲೇಟ್ಗೆ ಸರ್ವ್ ಮಾಡಿದರೆ ರುಚಿಕರವಾದ ಮೊಟ್ಟೆ ದೋಸೆ ಸವಿಯಲು ಸಿದ್ಧ. (Disclaimer: ಈ ಲೇಖನವು ಅಂತರ್ಜಾಲದಲ್ಲಿ ಲಭ್ಯವಿರುವ ವರದಿಗಳು, ಮಾಹಿತಿಯನ್ನು ಆಧರಿಸಿದೆ. news18ಗೂ ಇದಕ್ಕೂ ಸಂಬಂಧವಿಲ್ಲ ಮತ್ತು ನ್ಯೂಸ್ 18 ಇದಕ್ಕೆ ಜವಾಬ್ದಾರಿಯಲ್ಲ)
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
WhatsApp Group : https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharechat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1