ನಮ್ಮ ಜನಾಂಗದಿಂದಲೇ ಸರ್ವೆಯನ್ನು ಮಾಡಿಸುವುದರ ಮೂಲಕ ಮುಂದಿನ ಮೂರು ತಿಂಗಳಲ್ಲಿ ಸರ್ಕಾರಕ್ಕೆ ವರದಿಯನ್ನು ನೀಡಲಾಗುವುದು: ಬಿ.ಎಸ್.ಸೋಮಶೇಖರ್.

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಚಿತ್ರದುರ್ಗ ಜು. 06 ಸರ್ಕಾರ ನಮ್ಮ ಜಾತಿಯ ಸಂಖ್ಯೆಯನ್ನು ಕಡಿಮೆ ನೀಡಿದೆ ರಾಜ್ಯದಲ್ಲಿ ನಮ್ಮ ಸಮುದಾಯ 50 ಲಕ್ಷ ಜನರಿದ್ದಾರೆ ಆದರೆ ರಾಜ್ಯ ಸರ್ಕಾರ ನೀಡಿದ ಸಂಖ್ಯೆಯಲ್ಲಿ ಕೇವಲ 9 ಲಕ್ಷ ಜನರಿದ್ದಾರೆ ಎಂದು ತಿಳಿಸಿದೆ ಇದರಿಂದ ನಮ್ಮ ಜನಾಂಗದಿಂದಲೇ ಸರ್ವೆಯನ್ನು
ಮಾಡಿಸುವುದರ ಮೂಲಕ ಮುಂದಿನ ಮೂರು ತಿಂಗಳಲ್ಲಿ ಸರ್ಕಾರಕ್ಕೆ ವರದಿಯನ್ನು ನೀಡಲಾಗುವುದೆಂದು ಕರ್ನಾಟಕ ರಾಜ್ಯ
ನೇಕಾರ ಸಮುದಾಯಗಳ ಒಕ್ಕೂಟದ ರಾಜ್ಯಾಧ್ಯಕ್ಷರಾದ ಬಿ.ಎಸ್.ಸೋಮಶೇಖರ್ ತಿಳಿಸಿದ್ದಾರೆ.


ಚಿತ್ರದುರ್ಗ ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ
ಶಾಶ್ವತ ಆಯೋಗವು ಸಿದ್ದಪಡಿಸಿ ರಾಜ್ಯ ಸರ್ಕಾರಕ್ಕೆ ಸಲ್ಲಿಸಿರುವ ಜಾತಿಗಣತಿ ವರದಿಯನ್ನು ನೇಕಾರ ಸಮುದಾಯವು ವಿರೋದಿಸುತ್ತದೆ. ರಾಜ್ಯದಲ್ಲಿರುವ ನೇಕಾರ ಸಮುದಾಯಗಳ ಜನಸಂಖ್ಯೆಯನ್ನು ದಾಖಲಿಸುವಲ್ಲಿ ಆಯೋಗವು ಕೈಗೊಂಡಿರುವ ಕ್ರಮವು ಅವೈಜ್ಞಾನಿಕವಾಗಿದೆ. ಆಯೋಗವು ಸರ್ಕಾರಕ್ಕೆ ಸಲ್ಲಿಸಿರುವ ವರದಿಯಲ್ಲಿನ ಅಂಕಿ-ಅಂಶಗಳು ಸಮುದಾಯಕ್ಕೆ ದೊಡ್ಡ ಆಘಾತವನ್ನು ತಂದೊಡ್ಡಿದೆ. ರಾಜ್ಯದ ನೇಕಾರ ಸಮುದಾಯವು ವರದಿಯ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ನೇಕಾರ ಸಮುದಾಯದಿಂದ ಕರ್ನಾಟಕ ರಾಜ್ಯದ ಜಿಲ್ಲಾವಾರು ಎಲ್ಲಾ 224 ಕ್ಷೇತ್ರಗಳಲ್ಲಿ ಜಾತಿ ಗಣತಿ ಸಮೀಕ್ಷೆಯನ್ನು ನಡೆಸಲಾಗುವುದು. ನೇಕಾರ ಸಮುದಾಯಗಳ ಮಠಾದೀಶರು, ರಾಜಕೀಯ ಮುಖಂಡರು, ಸಮಾಜದ ಗಣ್ಯರುಗಳು ಸುಮಾರು ಐದಾರು ಸಭೆಗಳನ್ನು ನಡೆಸಿ ಮರು ಸಮೀಕ್ಷೆಗಾಗಿ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದು, ಹಿಂದುಳಿದ ವರ್ಗಕ್ಕೆ ಸೇರಿದ ನೇಕಾರ ಸಮುದಾಯದ ನಿಖರ ಜನಸಂಖ್ಯೆಯನ್ನು ಸರ್ಕಾರದ ಗಮನಕ್ಕೆ ತರುವ ನಿಟ್ಟಿನಲ್ಲಿ ತನ್ನದೇ ಆದಆಪ್” ಅನ್ನು ಸಿದ್ದಪಡಿಸಿದೆ. ಈ
ಆಪ್ ಮೂಲಕ ರಾಜ್ಯದಲ್ಲಿರುವ ನೇಕಾರರು ತಮ್ಮ ಹಾಗೂ ತಮ್ಮ ಕುಟುಂಬ ಸದಸ್ಯರುಗಳ ಮಾಹಿತಿಯನ್ನು ಒದಗಿಸಲು ಅನುಕೂಲ
ಕಲ್ಪಿಸಲಾಗಿದೆ. ಕರ್ನಾಟಕ ರಾಜ್ಯ ನೇಕಾರ ಸಮುದಾಯಗಳ ಒಕ್ಕೂಟವು ರಾಜ್ಯಾದ್ಯಂತ ಜಿಲ್ಲಾವಾರು ಎಲ್ಲ 224 ವಿಧಾನಸಭಾ
ಕ್ಷೇತ್ರಗಳಲ್ಲೂ ಸಮುದಾಯದವರ ಜಾತಿಗಣತಿ ಸಮೀಕ್ಷೆಯನ್ನು ನಡೆಸಲಿದ್ದು, ಸ್ಥಳೀಯ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ಮೂಲಕ
ನೇಕಾರರನ್ನು ಸಂಪರ್ಕಿಸಿ ಕುಟುಂಬ ಸದಸ್ಯರುಗಳ ಅಂಕಿ ಅಂಶಗಳನ್ನು ಸಂಗ್ರಹಿಸಿ ಆಪ್‍ನಲ್ಲಿ ಅವುಗಳನ್ನು ದಾಖಲಿಸಲಾಗುವುದು
ಎಂದರು.


ನಮ್ಮ ಜನಾಂಗದಿಂದಲೇ ಸರ್ವೆಯನ್ನು ಮಾಡಿಸುವುದರ ಮೂಲಕ ಮುಂದಿನ ಮೂರು ತಿಂಗಳಲ್ಲಿ ಸರ್ಕಾರಕ್ಕೆ ವರದಿಯನ್ನು
ನೀಡಲಾಗುವುದು ಇದರಿಂದ ಮುಂದಿನ ದಿನಮಾನದಲ್ಲಿ ನಮ್ಮ ಸಮುದಾಯಕ್ಕೆ ಸರ್ಕಾರದಿಂದ ಸಿಗಬೇಕಾದ ವಿವಿಧ ರೀತರಿಯ
ಸೌಲಭ್ಯಗಳಿಗೆ ನೆರವಾಗಲಿದೆ. ಅಲ್ಲದೆ ಚುನಾವಣೆ ಸಮಯದಲ್ಲಿಯೂ ಸಹಾ ಈ ಗಣತಿ ನೆರವಾಗಲಿದೆ. ಇದರಿಂದ ನಮ್ಮ
ಸಮುದಾಯದವರು ಇದನ್ನು ನಿರ್ಲಕ್ಷ್ಯ ಮಾಡದೇ ಆಪ್‍ನಲ್ಲಿ ನಮೂದಿಸುವಂತೆ ಮನವಿ ಮಾಡಿದರು.


ಕರ್ನಾಟಕ ರಾಜ್ಯ ನೇಕಾರ ಸಮುದಾಯಗಳ ಒಕ್ಕೂಟದ ರಾಜ್ಯ ಉಪಾಧ್ಯಕ್ಷರಾದ ತಿಪ್ಪೇಸ್ವಾಮಿ ಮಾತನಾಡಿ, ನಮ್ಮ
ಸಮುದಾಯದಲ್ಲಿ 29 ಒಳ ಪಂಗಡಗಳಿವೆ, ಇದರಲ್ಲಿ ಸುಮಾರು ಜಿಲ್ಲೆ ತಾಲ್ಲೂಕು ಹೋಬಳಿಗಳಲ್ಲಿ ವಾಸ ಮಾಡುತ್ತಿದ್ದಾರೆ ಇವರ
ಸಂಖ್ಯೆ 50 ಲಕ್ಷ ದಾಟುತ್ತದೆ ಆದರೆ ಸರ್ಕಾರ ನೀಡಿದ ಮಾಹಿತಿಯಲ್ಲಿ ಕೇವಲ 9 ಲಕ್ಷ ಮಾತ್ರ ತೋರಿಸುತ್ತಿದೆ ಇದು ತಪ್ಪಾದ
ಮಾಹಿತಿಯಾಗಿದೆ. ಅಲ್ಲದೆ ಇದು ಅವೈಜ್ಞಾನಿಕವಾದ ಮಾಹಿತಿಯಾಗಿದೆ. ಮೂಲ ಭೂತ ಸೌಕರ್ಯಗಳಿಂದ ನೇಕಾರ ಸಮುದಾಯ
ಅಳಿವಿನ ಅಂಚಿನಲ್ಲಿದೆ. ರಾಜಕೀಯ, ಆರ್ಥಿಕ ಸಮಾಜಿಕವಾಗಿ ಹಿನ್ನಡೆಯಾಗಿದೆ. ನಮ್ಮ ಸಮುದಾಯ ರಾಜ್ಯದಲ್ಲಿ 4ನೇ ಸ್ಥಾನವನ್ನು
ಪಡೆಯುವ ಅರ್ಹತೆಯನ್ನು ಹೊಂದಿದೆ. ಅದರೆ ಇದಕ್ಕೆ ತಕ್ಕ ದಾಖಲೆಯನ್ನು ನೀಡಬೇಕಿದೆ ಈ ಹಿನ್ನಲೆಯಲ್ಲಿ ಎಲ್ಲರು ಸಹಾ ನಮ್ಮ ಆಪ್‍ನಲ್ಲಿ ಕಟುಂಬದ ಸದಸ್ಯರ ಸಂಖ್ಯೆಯನ್ನು ನಮೂದಿಸುವಂತೆ ಮನವಿ ಮಾಡಿ, ಸರ್ಕಾರದ ಜನಗಣತಿಯಲ್ಲಿ ನಮ್ಮ ಸಮುದಾಯಕ್ಕೆ ಆದ ಅನ್ಯಾಯವನ್ನು ಸರಿಪಡಿಸಲು ಅನುಕೂಲವಾಗುತ್ತದೆ ಎಂದರು.


ಕರ್ನಾಟಕ ರಾಜ್ಯ ನೇಕಾರ ಸಮುದಾಯಗಳ ಒಕ್ಕೂಟದ ಜಿಲ್ಲಾಧಕ್ಷರಾದ ಗೋವಿಂದಪ್ಪ ಮಾತನಾಡಿ, ಸರ್ಕಾರ ಮಾಡಿದ ಜಾತಿ
ಗಣತಿಯಲ್ಲಿ ನಮ್ಮ ಸಮುದಾಯಕ್ಕೆ ಅನ್ಯಾಯವಾಗಿದೆ, ಅದನ್ನು ಸರಿಪಡಿಸುವ ಹೊಣೆಗಾರಿಕೆ ನಮ್ಮ ಮೇಲಿದೆ ಈ ಹಿನ್ನಲೆಯಲ್ಲಿ
ಆಪ್‍ನ್ನು ಬಿಡುಗಡೆ ಮಾಡಲಾಗಿದೆ, ಚಿತ್ರದುರ್ಗ ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿ ಪ್ರವಾಸವನ್ನು ಮಾಡುವುದರ ಮೂಲಕ ನಮ್ಮ
ಒಕ್ಕೂಟಕ್ಕೆ ಪ್ರಥಮವಾಗಿ ಜಾತಿ ಗಣಿತಿಯ ವರದಿಯನ್ನು ನೀಡುವಂತಾಗಬೇಕಿದೆ ಎಂದರು.


ಗೋಷ್ಟಿಯಲ್ಲಿ ನೇಕಾರ ಸಮುದಾಯದ ಮುಖಂಡರಾದ ನಾಗರಾಜ್, ಶಿವಪ್ರಕಾಶ್, ಜಗದೀಶ್ ಸೇರಿದಂತೆ ಇತರರು
ಭಾಗವಹಿಸಿದ್ದರು, ಇದೆ ಸಂದರ್ಭದಲ್ಲಿ ಸಮುದಾಯದ ಜಾತಿ ಗಣತಿಗೆ ಸಂಬಂಧಪಟ್ಟ ಫಾರಂನ್ನು ಬಿಡುಗಡೆ ಮಾಡಲಾಯಿತು.

Leave a Reply

Your email address will not be published. Required fields are marked *