ಶಾಲೆಯಲ್ಲಿ ಹಾಗೂ ನಿಮ್ಮ ಮನೆಗಳ ಹತ್ತಿರ ಮಕ್ಕಳು ಮನೆಗೊಂದು ಗಿಡ ಬೆಳೆಸಬೇಕು ಬಿಟಿ ಪುಟ್ಟಪ್ಪ ಅಧ್ಯಕ್ಷರು.

ಪೋಟೋ ಮತ್ತು ವರದಿ ವೇದಮೂರ್ತಿ ಭೀಮ ಸಮುದ್ರ.

ಭೀಮಸಮುದ್ರ.ಶ್ರೀ ಭೀಮೇಶ್ವರ ಗ್ರಾಮಾಂತರ ಪ್ರೌಢಶಾಲೆ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮ

ಶಾಲಾ ಅಧ್ಯಕ್ಷರಾದ ಬಿ ಟಿ ಪುಟ್ಟಪ್ಪ ಮಾತನಾಡಿ ಇತ್ತೀಚಿನ ದಿನಗಳಲ್ಲಿ ಪರಿಸರ ಹಾಳಾಗಲು ಕಾರಣ ವಾಯುಮಾಲಿನ್ಯ ಹಾಗೂ ಪ್ಲಾಸ್ಟಿಕ್ ಬಳಕೆ ಆದ್ದರಿಂದ ಮಕ್ಕಳು ಪರಿಸರದ ಬಗ್ಗೆ ಜಾಗೃತರಾಗಬೇಕು ಮನೆಗಳ ಸುತ್ತಮುತ್ತ ಗಿಡಮರಗಳನ್ನು ಬೆಳೆಸಿದರೆ ಒಳ್ಳೆಯ ಗಾಳಿ ಸಿಗುತ್ತದೆ ಎಂದು ಹೇಳಿದ

ಸಲಹಾ ಸಮಿತಿ ಸದಸ್ಯರಾದ ಬಿ ಕೆ ಕಲ್ಲಪ್ಪ ಮಾತನಾಡಿ
ಮನುಷ್ಯರಿಗೆ ಆರೋಗ್ಯವಾಗಿ ಇರಬೇಕು ಆದರೆ ಆಹಾರ ಗಾಳಿ ನೀರು ಬೇಕು ಆದರೆ ಇದನ್ನು ಕಾಪಾಡಲು ಗಿಡಮರಗಳ ಅವಶ್ಯಕತೆ ಇದೆ ಆದ್ದರಿಂದ ಮಕ್ಕಳು ಪರಿಸರವನ್ನು ಕಾಪಾಡಬೇಕು ಎಂದು ತಿಳಿಸಿದರು

ಶಾಲೆಯ ಮುಖ್ಯ ಉಪಾಧ್ಯಾಯರಾದ ಶ್ರೀಮತಿ ಸುಮಾ ಎಲ್ ಕೆ ಮಾತನಾಡಿ.ಪರಿಸರ ದಿನಾಚರಣೆಯ ಶುಭಾಶಯಗಳು ಈ ದಿನ ಪರಿಸರ ನಮ್ಮೆಲ್ಲರ ಹೊಣೆ ಪರಿಸರವನ್ನು ಸ್ವಚ್ಛವಾಗಿ ಇಟ್ಟುಕೊಂಡರೆ ಆರೋಗ್ಯ ಸ್ವಚ್ಛವಾಗಿರುತ್ತದೆ ಎಂದು ತಿಳಿಸಿದರು
ಕಾರ್ಯಕ್ರಮದ ಸ್ವಾಗತವನ್ನು
ಪ್ರದೀಪ್ ನಿರೂಪಣೆ ಮಾಡಿದರು ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಕರಾದ ಕೋಮಲ ರೇಖಾ ಶಾಲಾ ಮಕ್ಕಳು ಪೋಷಕರು ಉಪಸ್ಥಿತರಿದ್ದರು

Leave a Reply

Your email address will not be published. Required fields are marked *