ಬುಮ್‌ ಬುಮ್‌ ಬುಮ್ರಾ ಜೊತೆ ಬೌಲರ್ಸ್‌ ಮ್ಯಾಜಿಕ್‌! ಅಫ್ಘಾನ್‌ ವಿರುದ್ಧ ಭಾರತಕ್ಕೆ ಜಯ!

2024ರ ಟಿ20 ವಿಶ್ವಕಪ್‌ನಲ್ಲಿ (T20 World Cup) ಸೂಪರ್ 8 (Super 8) ಪಂದ್ಯಗಳಿಗೆ ಟೀಂ ಇಂಡಿಯಾ (Team India) ಸಿದ್ಧವಾಗಿತ್ತು. ಸೂಪರ್-8 ಪಂದ್ಯಗಳು ವೆಸ್ಟ್ ಇಂಡೀಸ್ (West Indies) ನಿಧಾನಗತಿಯ ಪಿಚ್‌ಗಳಲ್ಲಿ ನಡೆಯುತ್ತಿದೆ. ಆದರೆ ಟೂರ್ನಿಯಲ್ಲಿ ಮೊದಲ ಬಾರಿಗೆ ವೆಸ್ಟ್ ಇಂಡೀಸ್ ನಲ್ಲಿ ಆಡುವುದರ ಜೊತೆಗೆ ಇನ್ನು ಕೆಲವು ಅಂಶಗಳು ಟೀಂ ಇಂಡಿಯಾವನ್ನು ಕಾಡುತ್ತಿತ್ತು. ಗ್ರೂಪ್ ಹಂತದಲ್ಲಿ ನ್ಯೂಜಿಲೆಂಡ್ ಅನ್ನು ಸೋಲಿಸಿ ಸೂಪರ್ 8 ತಲುಪಿದ್ದ ಅಫ್ಘಾನಿಸ್ತಾನವನ್ನು (Afghanistan) ಟೀಂ ಇಂಡಿಯಾ ಎದುರಿಸಿತು. ಈ ಪಂದ್ಯಕ್ಕೆ ಬಾರ್ಬಡೋಸ್‌ನ ಬ್ರಿಡ್ಜ್‌ಟೌನ್‌ ಕ್ರೀಡಾಂಗಣ ಆತಿಥ್ಯವಹಿಸಿತ್ತು. ಟಾಸ್‌‌ ಗೆದ್ದ ಟೀಂ ಇಂಡಿಯಾ ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡಿತ್ತು.  20 ಓವರ್‌‌ಗಳಲ್ಲಿ ಟೀಂ ಇಂಡಿಯಾ 7 ವಿಕೆಟ್‌ ಕಳೆದುಕೊಂಡು 181 ರನ್‌‌ಗಳಿಸಿತು. ಈ ಗುರಿ ಬೆನ್ನತ್ತುವಲ್ಲಿ ಅಫ್ಘಾನಿಸ್ತಾನ ವಿಫಲವಾಯ್ತು. ಅಫ್ಘಾನಿಸ್ತಾನ 20 ಓವರ್‌‌ಗಳಲ್ಲಿ 10 ವಿಕೆಟ್‌ ಕಳೆದುಕೊಂಡು  134 ರನ್‌‌‌ಗಳಿಸಿತು.

ಅಫ್ಘಾನಿಸ್ತಾನಕ್ಕೆ ಆರಂಭಿಕ ಆಘಾತ!

ವೇಗಿ ಜಸ್ಪ್ರೀತ್ ಬುಮ್ರಾ ರಹಮಾನುಲ್ಲಾ ಗುರ್ಬಾಜ್ ಅವರನ್ನು ಔಟ್ ಮಾಡುವ ಮೂಲಕ ಅಫ್ಘಾನಿಸ್ತಾನಕ್ಕೆ ಮೊದಲ ಹೊಡೆತ ನೀಡಿದರು. ಎಂಟು ಎಸೆತಗಳಲ್ಲಿ 11 ರನ್ ಗಳಿಸಿ ಗುರ್ಬಾಜ್ ಔಟಾದರು. ಅಕ್ಷರ್ ಪಟೇಲ್ ಇಬ್ರಾಹಿಂ ಜದ್ರಾನ್ ಅವರನ್ನು ಔಟ್‌ ಮಾಡಿದ್ರು. ಇನ್ನೂ ಜಸ್ಪ್ರೀತ್ ಬುಮ್ರಾ ಅದ್ಭುತ ಬೌಲಿಂಗ್ ಮಾಡಿ ಹಜರತುಲ್ಲಾ ಝಜೈ ಅವರನ್ನು ಔಟ್ ಮಾಡಿದ್ರು.

ಟೀ ಇಂಡಿಯಾ ಬೌಲರ್ಸ್‌ ಮ್ಯಾಜಿಕ್‌!

ಸ್ಪಿನ್ನರ್ ಕುಲದೀಪ್ ಯಾದವ್ ಅದ್ಭುತ ಬೌಲಿಂಗ್ ಮಾಡಿ ಗುಲ್ಬದಿನ್ ನೈಬ್ ಅವರನ್ನು ಔಟ್ ಮಾಡಿದ್ರು. ರವೀಂದ್ರ ಜಡೇಜಾ ಬೌಲಿಂಗ್‌‌ಗೆ ಅಜ್ಮತುಲ್ಲಾ ಔಟಾದ್ರು. 19 ರನ್‌ಗಳಿಸಿದ್ದ ಜದ್ರಾನ್  ಬುಮ್ರಾ ಬೌಲಿಂಗ್‌ಗೆ ಅರ್ಶದೀಪ್‌ಗೆ ಕ್ಯಾಚ್‌ ನೀಡಿ ಇನ್ನಿಂಗ್ಸ್‌ ಮುಗಿಸಿದ್ರು. 8 ರನ್‌ಗಳಿಸಿದ್ದ ನಬಿ ಕುಲದೀಪ್‌ ಬೌಲಿಂಗ್‌ಗೆ ಜಡೇಜಾಗೆ ಕ್ಯಾಚ್‌ ನೀಡಿ ಔಟಾದ್ರು. 2 ರನ್‌ಗಳಿಸಿದ್ದ ರಶೀದ್‌ ಖಾನ್‌ ಅರ್ಶ್‌ದೀಪ್‌ಗೆ ವಿಕೆಟ್ ಒಪ್ಪಿಸಿದ್ರು. ಅದೇ ಓವರ್‌‌ನಲ್ಲಿ ನವೀನ್‌ ಉಲ್‌ ಹಕ್‌ ಡಕೌಟ್‌ ಆದ್ರು.

ವಿರಾಟ್‌ ಬದಲು ರೋಹಿತ್ ಬೇಗ ಔಟ್‌!

ಇಲ್ಲಿಯವರೆಗೆ ಕೆಟ್ಟ ಆರಂಭದ ಹೊರತಾಗಿಯೂ, ಈ ಪಂದ್ಯದಲ್ಲೂ ರೋಹಿತ್ ಮತ್ತು ವಿರಾಟ್ ತಂಡಕ್ಕೆ ಆರಂಭಿಕರಾಗಿ ಬಂದ್ರು. ಮೊದಲ ಮೂರು ಪಂದ್ಯಗಳಲ್ಲಿ ವಿರಾಟ್‌ ಕೊಹ್ಲಿ ಬೇಗ ಔಟಾಗ್ತಿದ್ರು. ಆದರೆ ಈ ಪಂದ್ಯದಲ್ಲಿ ರೋಹಿತ್‌ ಶರ್ಮಾ ದೊಡ್ಡ ಹೊಡೆತಕ್ಕೆ ಯತ್ನಿಸಿ ಔಟಾದ್ರು. ಭಾರತ ತಂಡ 11 ರನ್‌ಗಳಿಸಿದ್ದಾಗ ನಾಯಕ ರೋಹಿತ್ ಶರ್ಮಾ 8 ರನ್​​ಗಳಿಸಿ ತಮ್ಮ ಇನ್ನಿಂಗ್ಸ್ ಮುಗಿಸಿದ್ರು.

ಟೀಂ ಇಂಡಿಯಾ 7ನೇ ಓವರ್​ನಲ್ಲಿ ಎರಡನೇ ವಿಕೆಟ್ ಕಳೆದುಕೊಳ್ತು. ರಿಷಬ್ ಪಂತ್ 20 ರನ್ ಬಾರಿಸಿ ಎಲ್​ಬಿಡಬ್ಲ್ಯೂ ಆದರು. ವಿರಾಟ್ ಕೊಹ್ಲಿ ಕೂಡ 24 ಎಸೆತಗಳಲ್ಲಿ 24 ರನ್ ಬಾರಿಸಿ ಔಟಾದರು. ಶಿವಂ ದುಬೆ 10 ರನ್ ಬಾರಿಸಿ ಔಟಾಗಿದ್ರು.

ಟೀಂ ಇಂಡಿಯಾಗೆ ಆಸರೆಯಾದ ಸೂರ್ಯ-ಪಾಂಡ್ಯ

ಒಂದು ಕಡೆ ವಿಕೆಟ್‌ ಉರುಳುತ್ತಿದ್ರೆ ಇತ್ತ ಸೂರ್ಯ ಕುಮಾರ್‌ ಯಾದವ್‌ ಟೀಂ ಇಂಡಿಯಾಗೆ ಆಸರೆಯಾದ್ರು. ಭರ್ಜರಿ ಅರ್ಧ ಶತಕ ಬಾರಿಸುವ ಮೂಲಕ ಟೀಂ ಇಂಡಿಯಾ ಬಿಗ್‌ ಸ್ಕೋರ್‌ ಕಲೆ ಹಾಕುವಲ್ಲಿ ಪ್ರಮುಖ ಪಾತ್ರ ವಹಿಸಿದ್ರು. ಸೂರ್ಯ ಕುಮಾರ್‌ ಯಾದವ್‌ 53 ರನ್‌ಗಳಿಸಿ ಔಟಾದ್ರು. ಇನ್ನೂ ಪಾಂಡ್ಯ ಕೂಡ ಭರ್ಜರಿ ಬ್ಯಾಟಿಂಗ್‌ ಮಾಡಿದ್ರು. 24 ಬಾಲ್‌‌ಗಳಲ್ಲಿ 34 ರನ್‌ಗಳಿಸಿ ಔಟಾದ್ರು. ಜಡೇಜಾ 7 ರನ್‌‌ಗಳಿಸಿ ಔಟಾದ್ರು. ಕೊನೆಯಲ್ಲಿ ಅಕ್ಷರ್‌ ಪಟೇಲ್‌‌ 12 ರನ್‌‌ಗಳಿಸಿದ್ರು.

ಟೀಂ ಇಂಡಿಯಾ ಪ್ಲೇಯಿಂಗ್‌ 11: ರೋಹಿತ್ ಶರ್ಮಾ (ಸಿ), ವಿರಾಟ್ ಕೊಹ್ಲಿ, ರಿಷಭ್ ಪಂತ್ (ಡಬ್ಲ್ಯೂ), ಸೂರ್ಯಕುಮಾರ್ ಯಾದವ್, ಶಿವಂ ದುಬೆ, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಅರ್ಶ್ದೀಪ್ ಸಿಂಗ್, ಜಸ್ಪ್ರೀತ್ ಬುಮ್ರಾ

ಅಫ್ಘಾನಿಸ್ತಾನ ಪ್ಲೇಯಿಂಗ್‌ 11: ರಹಮಾನುಲ್ಲಾ ಗುರ್ಬಾಜ್ (ಡಬ್ಲ್ಯೂ), ಇಬ್ರಾಹಿಂ ಝದ್ರಾನ್, ನಜಿಬುಲ್ಲಾ ಝದ್ರಾನ್, ಹಜರತುಲ್ಲಾ ಝಜೈ, ಗುಲ್ಬದಿನ್ ನೈಬ್, ಅಜ್ಮತುಲ್ಲಾ ಒಮರ್ಝೈ, ಮೊಹಮ್ಮದ್ ನಬಿ, ರಶೀದ್ ಖಾನ್ (ಸಿ), ನೂರ್ ಅಹ್ಮದ್, ನವೀನ್-ಉಲ್-ಹಕ್, ಫರೂ

Source : https://kannada.news18.com/news/sports/t20-world-cup-2024-ind-vs-afg-live-updates-team-india-won-by-47-runs-vdd-1747742.html

Leave a Reply

Your email address will not be published. Required fields are marked *