ರಾಜ್ಯಾಧ್ಯಕ್ಷನಾಗಿ ಮುಂದುವರೆಯುವಂತೆ ಕಾರ್ಯಕರ್ತರ ಅಪೇಕ್ಷೆ ಇದೆ: ಬಿ.ವೈ. ವಿಜಯೇಂದ್ರ .

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಚಿತ್ರದುರ್ಗ ಫೆ. 06 : ಕಳೆದ ಒಂದುವರೆ ವರ್ಷದಿಂದ ಯಶಸ್ವಿಯಾಗಿ ಜವಬ್ದಾರಿ ನಿರ್ವಹಿಸಿದ್ದೇನೆ ಕಾರ್ಯಕರ್ತರಲ್ಲು ಧೈರ್ಯ ಸ್ಥೈರ್ಯ ತುಂಬುವ ಕೆಲಸ ಮಾಡ್ತಿದ್ದೇನೆ ರಾಜ್ಯಾಧ್ಯಕ್ಷನಾಗಿ ಮುಂದುವರೆಯುವಂತೆ ಕಾರ್ಯಕರ್ತರ ಅಪೇಕ್ಷೆ ಇದೆ ಸದ್ಯದಲ್ಲೇ ಕೇಂದ್ರದ ವರಿಷ್ಟರು ಸೂಕ್ತ
ನಿರ್ಧಾರ ಕೈಗೊಳ್ತಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ತಿಳಿಸಿದರು.

ಭರಮಸಾಗರದಲ್ಲಿ ನಡೆಯುತ್ತಿರುವ ತರಳುಬಾಳು ಹುಣ್ಣಿಮೆ ಕಾರ್ಯಕ್ರಮದಲ್ಲಿ ಭಾಗಿಯಾಗಲು ಚಿತ್ರದುರ್ಗಕ್ಕೆ ಆಗಮಿಸಿದ ಬಿಜೆಪಿ
ರಾಜ್ಯಾಧ್ಯಕ್ಷ ವಿಜಯೇಂದ್ರರವರು ಚಿತ್ರದುರ್ಗದ ಶಿವಶರಣ ಮಾದಾರಚನ್ನಯ್ಯ ಮಠಕ್ಕೆ ಭೇಟಿ ನೀಡಿ ಮಾದಾರಚನ್ನಯ್ಯ ಶ್ರೀಗಳ
ದರ್ಶನಾಶೀರ್ವಾದ ಪಡೆದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಬಿಜೆಪಿ ರಾಜ್ಯಾಧ್ಯಕ್ಷರ ರೇಸ್‍ನಲ್ಲಿ ಮಾಜಿ
ಶ್ರೀರಾಮುಲು ವಿಚಾರ ಶ್ರೀರಾಮುಲುಗೆ ಪೈಪೋಟಿಕೊಡುವಷ್ಟು ದೊಡ್ಡಮನುಷ್ಯ ನಾನಲ್ಲ ರಾಮುಲು ನನಗಿಂತ ಹಿರಿಯರು,ಬಿಎಸ್
ವೈ,ಅನಂತಕುಮಾರ್,ಕಾರಜೋಳ ಜೊತೆ ಪಕ್ಷ ಸಂಘಟನೆ ಮಾಡಿದ್ದಾರೆ ಅಂತಿಮವಾಗಿ ಪಕ್ಷದ ವರಿಷ್ಟರು ತೀರ್ಮಾನ
ಕೈಗೊಳ್ಳಲಿದ್ದಾರೆ.

ರಾಜ್ಯಾಧ್ಯಕ್ಷ ಸ್ಥಾನ ಯಾರಿಗೆ ಕೊಟ್ಟರೆ ಪಕ್ಷಕ್ಕೆ ಒಳಿತಾಗಲಿದೆ ಅಂತ ವರಿಷ್ಟರು ಗಮನಹರಿಸುವರು ರಾಜ್ಯಾಧ್ಯಕ್ಷರ
ಆಯ್ಕೆ ವೇಳೆ ಜಿಲ್ಲಾಧ್ಯಕ್ಷರ,ಶಾಸಕರ ಅಭಿಪ್ರಾಯಗಳ ಆಧಾರದ ಮೇಲೆ ಆಯ್ಕೆಯಾಗಲಿದೆ ನಮ್ಮ ಪಕ್ಷಏನು ತೀರ್ಮಾನ ಮಾಡಲಿದೆ
ಪಕ್ಷದ ಹೈಕಮಾಂಡ್ ತೀರ್ಮಾನಕ್ಕೆ ನಾನಗಲಿ,ಮತ್ತೊಬ್ಬರಾಗಲಿ ಎಲ್ಲರು ಬದ್ದರಾಗಿರಬೇಕು ಎಂದರು.

ಜಿಲ್ಲಾಧ್ಯಕ್ಷರು, ಶಾಸಕರ ಅಪೇಕ್ಷೆ ಏನಿದೆ ಎಂಬುದರ ಆಧಾರದ ಮೇಲೆ ಪಕ್ಷ ತೀರ್ಮಾನಿಸುತ್ತದೆ ಪಕ್ಷದ ಹೈಕಮಾಂಡ್ ತೀರ್ಮಾನಕ್ಕೆ
ನನ್ನ ಸೇರಿ ಎಲ್ಲರೂ ಬದ್ದರಾಗಿ ಇರಬೇಕಾಗುತ್ತದೆ ಜಿಲ್ಲಾಧ್ಯಕ್ಷರ ನೇಮಕ ಚುನಾವಣೆ ಪ್ರಕ್ರಿಯೆ ಪ್ರಕಾರವೇ ಆಗಿದೆ ರಾಜ್ಯದ
ಅಧ್ಯಕ್ಷನಾಗಿ ನನ್ನ ಅಭಿಪ್ರಾಯ ಕೊಡುವ ಕೆಲಸ ಎಲ್ಲೂ ಆಗಿಲ್ಲ ಎಂದ ಅವರು ಮಠಗಳ ಭೇಟಿ ಬಗ್ಹೆ ವಿಶೇಷ ಅರ್ಥ ಕಲ್ಪಿಸುವ ಅಗತ್ಯ
ಇಲ್ಲ ಮೊನ್ನೆ ತರಳುಬಾಳು ಹುಣ್ಣಿಮೆಗೆ ಬಿಎಸ್ ವೈ ಬರಬೇಕಿತ್ತು,ಬಂದಿರಲಿಲ್ಲ ಶ್ರೀಗಳ ಅಪೇಕ್ಷೆ ಮೇರೆಗೆ ನಾನು ಇಂದು
ಆಗಮಿಸಿದ್ದೇನೆ ಎಂದರು.

ಬಿಜೆಪಿ ರಾಜ್ಯಾಧ್ಯಕ್ಷ ಕುರ್ಚಿಗೆ ಕಂಟಕ ಹಿನ್ನೆಲೆ ಮಠಗಳ ರೌಂಡ್ಸ್‍ಗೆ ಮುಂದಾದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಕುತೂಹಲ
ಮೂಡಿಸ್ತಿರೋ ವಿಜಯೇಂದ್ರ ಮಠಗಳ ಭೇಟಿ ಚಿತ್ರದುರ್ಗದ ಮಾದಾರ ಚನ್ನಯ್ಯ ಗುರುಪೀಠಕ್ಕೆ ಆಗಮಿಸಿದ ವಿಜಯೇಂದ್ರ ಮಾದಾರ
ಚನ್ನಯ್ಯ ಶ್ರೀಗಳ ಆಶೀರ್ವಾದ ಪಡೆದ ಬಿ.ವೈ ವಿಜಯೇಂದ್ರ ಬಳಿಕ ಸಿರಿಗೆರೆ ಮಠದ ತರಳಬಾಳು ಹುಣ್ಣಿಮೆ ಕಾರ್ಯಕ್ರಮಕ್ಕೆ ತೆರಳಿದ
ವಿಜಯೇಂದ್ರ ಭರಮಸಾಗರದಲ್ಲಿ ನಡೆಯುತ್ತಿರುವ ಸಿರಿಗೆರೆ ಮಠದ ಕಾರ್ಯಕ್ರಮದಲ್ಲಿ ಭಾಗಿಯಾಗಿಯಾದರು

ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾದ್ಯಕ್ಷರಾದ ಎ ಮುರಳಿ , ಮಾಜಿ ಉಪಮುಖ್ಯಮಂತ್ರಿಗಳು ಸಂಸದರಾದ ಗೊವಿಂದ ಕಾರಜೋಳ್
ಪರೀಷತ್ ಶಾಸಕರಾದ ಕೆ.ಎಸ್. ನವೀನ್ ಮಾಜಿ ಶಾಸಕರಾದ ಜಿ.ಹೆಚ್. ತಿಪ್ಪಾರೆಡ್ಡಿ ಎಸ್ ಕೆ ಬಸವರಾಜನ್ ಜಿ.ಪಂ.ಮಾಜಿ
ಅಧ್ಯಕ್ಷರಾದ ಶ್ರೀಮತಿ ಸೌಭಾಗ್ಯ ಬಸವರಾಜನ್ ಖನಿಜ ನಿಗಮದ ಮಾಜಿ ಅಧ್ಯಕ್ಷರಾದ ಲಿಂಗಮೂರ್ತಿ, ಜಿಲ್ಲಾ ಖಜಾಂಚಿ ಮಾದುರಿ

ಗಿರೀಶ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಶ ಸಿದ್ದಾಪುರ,, ರಾಂದಾಸ್ ರೈತಮೊರ್ಚಾ ವೆಂಕಟೇಶ ಯಾದವ್ ರಾಜ್
ರೈತಮೊರ್ಚಾ ಕಾರ್ಯದರ್ಶಿ ಮಲ್ಲಿಕಾರ್ಜುನ್, ಜಯಸಿಂಹ ಖಾಟ್ರೋಚ್ ರಾಜಶೇಖರ್ ನಾಗರಾಜ ಬೇದ್ರೆ ಮಾದ್ಯಮ ವಕ್ತಾರ ದಗ್ಗೆ
ಶಿವಪ್ರಕಾಶ್, ಸಹ ವಕ್ತಾರ ಸತ್ಯನಾರಾಯಣ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *