![](https://samagrasuddi.co.in/wp-content/uploads/2024/12/7bbdc593-ed46-41d4-8060-f654e10af13b-199x300.jpg)
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಚಿತ್ರದುರ್ಗ ಡಿ. 07 : ಹಳಿಯಾಳದ ಮುಂಡವಾಡ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಅನಧಿಕೃತ ವಿದ್ಯುತ್ ನಿಂದ ವಿದ್ಯಾರ್ಥಿಯೊರ್ವಳು ಸಾವನ್ನಪ್ಪಿದ್ದು ಇದರ ಬಗ್ಗೆ ಅವರ ಕುಟುಂಬಕ್ಕೆ ನ್ಯಾಯವನ್ನು ಒದಗಿಸುವಂತೆ ರಾಜ್ಯ ಗೌಳಿಗರ ಸಂಘದ ನಿರ್ದೇಶಕರಾದ ಸಿ ರುದ್ರಪ್ಪ ಗೌಳಿ ಜಾಲಿಕಟ್ಟೆ ಸರ್ಕಾರವನ್ನು ಆಗ್ರಹಿಸಿದ್ದಾರೆ.
ಈ ಬಗ್ಗೆ ಹೇಳಿಕೆಯನ್ನು ನೀಡಿರುವ ಅವರು ಹಳಿಯಾಳ ತಾಲೂಕಿನ ಮುಂಡವಾಡ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಅನಧಿಕೃತ ವಿದ್ಯುತ್ ಸಂಪರ್ಕದಿಂದ ಶೌಚಾಲಯದಲ್ಲಿ ಸಾವನ್ನಪ್ಪಿರುತ್ತಾಳೆಂದು ದಿನಪತ್ರಿಕೆಗಳಲ್ಲಿ ವರದಿಯಾಗಿದೆ, ಇದರ ಬಗ್ಗೆ ಅಲ್ಲಿನ ತಹಶಿಲ್ದಾರರು ಸ್ಥಳ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು, ಈಗಾಗಲೇ ಮುಖ್ಯೋಪಾಧ್ಯಾಯರನ್ನು ಅಮಾನತು ಮಾಡಲಾಗಿದೆ ಜೊತೆಗೆ ಕೆಇಬಿ ಅಧಿಕಾರಿಗಳು ಮತ್ತು ಸಂಬಂಧಪಟ್ಟವರನ್ನು ಕೂಡಲೇ ಅಮಾನತು ಮಾಡಿ ವಿದ್ಯಾರ್ಥಿನಿಯ
ಕುಟುಂಬಕ್ಕೆ ನ್ಯಾಯ ಮತ್ತು ಪರಿಹಾರ 250000 (ಇಪ್ಪತ್ತೈದು ಲಕ್ಷ) ಕೊಡಿಸಬೇಕೆಂದು ಸರ್ಕಾರಕ್ಕೆ ನಿರ್ದೇಶಕರಾದ ಸಿ ರುದ್ರಪ್ಪ ಗೌಳಿ
ಜಾಲಿಕಟ್ಟೆ ಮನವಿ ಮಾಡಿದ್ದಾರೆ.