ವರದಿ ಮತ್ತು ಪೋಟೋ ಸುರೇಶ್ ಪಟ್ಟಣ್

ಚಿತ್ರದುರ್ಗ ಮೇ. 04 ರಾಷ್ಟ್ರೀಯ ಈಡಿಗ ಮಹಾಮಂಡಳಿ ಆರ್ಯ ಈಡಿಗ ಸಮಾಜದ ಕರ್ನಾಟಕ ರಾಜ್ಯ ಅಧ್ಯಕ್ಷರಾಗಿ ಸಿ. ತಿಪ್ಪೇಸ್ವಾಮಿ ನೇಮಕ ಮಾಡಲಾಗಿದೆ ಎಂದು ಶ್ರೀ ಪ್ರಾಣವನಂದ ಸ್ವಾಮಿಗಳು ಘೋಷಣೆ ಮಾಡಿದ್ದಾರೆ.
ರಾಷ್ಟ್ರೀಯ ಈಡಿಗ ಮಹಾಮಂಡಳಿಯ 2025-2026ನೇ ಸಾಲಿನ ವಾರ್ಷಿಕ ಮಹಾ ಸಭೆಯೂ ಇತ್ತೀಚೆಗೆ ರಾಣೆಬೆನ್ನೂರು ತಾಲ್ಲೂಕಿನ ಹರೇಮಲ್ಲಾಪುರ ನಾರಾಯಣ ಗುರುಗಳ ಶಕ್ತಿ ಪೀಠದಲ್ಲಿ ನಡೆದಿದ್ದು ಇದರಲ್ಲಿ ರಾಷ್ಟ್ರೀಯ ಈಡಿಗ ಮಹಾಮಂಡಳಿಯ ಚಿತ್ರದುರ್ಗ ಜಿಲ್ಲಾಧ್ಯಕ್ಷರಾಗಿದ್ದ ಸಿ.ತಿಪ್ಪೇಸ್ವಾಮಿಯವರನ್ನು ಶ್ರೀ ಪ್ರಾಣವನಂದ ಸ್ವಾಮಿಗಳು ರಾಷ್ಟ್ರೀಯ ಈಡಿಗ ಮಹಾಮಂಡಳಿ ಆರ್ಯ ಈಡಿಗ ಸಮಾಜದ ಕರ್ನಾಟಕ ರಾಜ್ಯ ಅಧ್ಯಕ್ಷರಾಗಿ ನೇಮಕ ಮಾಡಿದ್ದಾರೆ.