ಕಲಬುರಗಿ: ಅಂಚೆ ಇಲಾಖೆಯಲ್ಲಿ ಉದ್ಯೋಗ ಗಿಟ್ಟಿಸಿಕೊಳ್ಳಲು SSLC ನಕಲಿ ಅಂಕಪಟ್ಟಿ ನೀಡಿ ಸಿಕ್ಕಿಬಿದ್ದ ಅಭ್ಯರ್ಥಿಗಳು.

ಪರೀಕ್ಷಾ ಅಕ್ರಮದ‌ ತವರು ಕಲಬುರಗಿಯಲ್ಲಿಗ ನಕಲಿ‌ ಅಂಕಪಟ್ಟಿ ಜಾಲ ಸಕ್ರೀಯವಾಗಿದಿಯಾ ಎನ್ನುವ ಪ್ರಶ್ನೆ ಎದ್ದಿದೆ. ಏಕೆಂದರೆ, ಅಂಚೆ ಇಲಾಖೆಯ 1714 ಹುದ್ದೆಗಳ ನೇಮಕಾತಿಯಲ್ಲಿ ಉದ್ಯೋಗ ಗಿಟ್ಟಿಸಿಕೊಳ್ಳಲು ಅಭ್ಯರ್ಥಿಗಳು ಎಸ್​ಎಸ್​ಎಲ್​ಸಿ ನಕಲಿ ಮಾರ್ಕ್​ ಕಾರ್ಡ್ ನೀಡಿ ಸಿಕ್ಕಿಬಿದ್ದ ಘಟನೆ ನಡೆದಿದೆ. ಅಂಕಪಟ್ಟಿ ಪರಿಶೀಲನೆ ವೇಳೆ ಅಭ್ಯರ್ಥಿಗಳು ಸಿಕ್ಕಿಬಿದ್ದಿದ್ದಾರೆ.

ಕಲಬುರಗಿ, ಜ.5: ಅಂಚೆ ಇಲಾಖೆಯ 1714 ಹುದ್ದೆಗಳ ನೇಮಕಾತಿಯಲ್ಲಿ (Postal Department Recruitment) ಉದ್ಯೋಗ ಗಿಟ್ಟಿಸಿಕೊಳ್ಳಲು ಕಲಬುರಗಿಯಲ್ಲಿ (Kalaburagi) ಅಭ್ಯರ್ಥಿಗಳು SSCL ನಕಲಿ ಮಾರ್ಕ್​ ಕಾರ್ಡ್ ನೀಡಿ ಸಿಕ್ಕಿಬಿದ್ದ ಘಟನೆ ನಡೆದಿದೆ. ಅಂಚೆ ಇಲಾಖೆಯಿಂದ ಎಸ್​ಎಸ್​ಎಲ್​ಸಿ ಅಂಕಪಟ್ಟಿ ಪರಿಶೀಲನೆ ವೇಳೆ ಎಂಟು ಮಂದಿ ಅಭ್ಯರ್ಥಿಗಳು ಸಿಕ್ಕಿಬಿದ್ದಿದ್ದು, ನಕಲಿ ಅಂಕಪಟ್ಟಿ ಸಲ್ಲಿಸಿದ ಅಭ್ಯರ್ಥಿಗಳ ವಿರುದ್ಧ ಅಂಚೆ ಇಲಾಖೆಯಿಂದ ವಂಚನೆ ದೂರು‌ ನೀಡಲು ಸಿದ್ಧತೆ ನಡೆಸಲಾಗುತ್ತಿದೆ.

ಪರೀಕ್ಷಾ ಅಕ್ರಮದ‌ ತವರು ಎಂಬ ಕುಖ್ಯಾತಿಗೆ ಒಳಗಾಗುತ್ತಿರುವ ಕಲಬುರಗಿಯಲ್ಲಿ ಇದೀಗ ಮತ್ತೊಂದು ಅಕ್ರಮ ಬಯಲಿಗೆ ಬಂದಿದೆ. ಈ ಹಿಂದೆ 545 ಪಿಎಸ್​ಐ ನೇಮಕಾತಿ ಪರೀಕ್ಷೆ, ಕೆಇಎ ವಿವಿಧ ಹುದ್ದೆಗಳ ನೇಮಕಾತಿ ಸೇರಿದಂತೆ ವಿವಿಧ ಇಲಾಖೆಯಲ್ಲಿನ ನೇಮಕಾತಿಯಲ್ಲಿ ಅಕಮ್ರ ಎಸಗಲಾಗಿದೆ. ವ್ಯಾಪಕ ಅಕ್ರಮ ನಡೆಯುತ್ತಿರುವುದರಿಂದ ಜಿಲ್ಲೆಯಲ್ಲಿ ನೇಮಕಾತಿ ಪರೀಕ್ಷೆ ನಡೆಸದಿರುವ ನಿರ್ಧಾರಕ್ಕೆ ಬರಲಾಗಿದೆ.

ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ (KSET 2023) ಪರೀಕ್ಷೆ ಜನವರಿ 13 ರಂದು ರಾಜ್ಯಾದ್ಯಂತ ನಡೆಯಲಿದೆ. ಆದರೆ, ಕಲಬುರಗಿಯಲ್ಲಿ ನೇಮಕಾತಿ ಪರೀಕ್ಷೆ ನಡೆಸದೆ ನಿಗದಿ ಮಾಡಲಾಗಿರುವ ಪರೀಕ್ಷಾ ಕೇಂದ್ರವನ್ನು ಬೆಂಗಳೂರಿಗೆ ಸ್ಥಳಾಂತರಿಸಲಾಗಿದೆ.

Source : https://tv9kannada.com/karnataka/kalaburagi/postal-department-recruitment-scam-kalaburagi-candidates-caught-giving-fake-sslc-marks-to-get-job-rks-754690.html

 ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 

WhatsApp Group: https://chat.whatsapp.com/KnDIfiBURQ9G5sLEJLqshk

Facebook page: https://www.facebook.com/samagrasudii

Sharechat: https://sharehat.com/profile/edu514826335?d=n

Twitter: https://twitter.com/SuddiSamagra

Threads: https://www.threads.net/@samagrasuddi.co.in

Instagram: https://www.instagram.com/samagrasuddi.co.in/

Telegram: https://t.me/+E1ubNzdguQ5jN2Y1

Leave a Reply

Your email address will not be published. Required fields are marked *