CEAT Awards: ಸಿಯೆಟ್ ಕಂಪೆನಿಯು ಆಗಸ್ಟ್ 21 ರಂದು ಮುಂಬೈನಲ್ಲಿ ನಡೆದ ಕಾರ್ಯಕ್ರಮದಲ್ಲಿ 26ನೇ ಆವೃತ್ತಿಯ ಕ್ರಿಕೆಟ್ ರೇಟಿಂಗ್ (ಸಿಸಿಆರ್) ಪ್ರಶಸ್ತಿಗಳನ್ನು ಪ್ರಧಾನ ಮಾಡಿದೆ. ಈ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ, ಶ್ರೇಯಸ್ ಅಯ್ಯರ್, ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಮ್ಯಾಥ್ಯೂ ಹೇಡನ್, ಇಂಗ್ಲೆಂಡ್ ಆಟಗಾರ ಫಿಲ್ ಸಾಲ್ಟ್ ಹಾಗೂ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಕಾಣಿಸಿಕೊಂಡಿದ್ದರು.

ಭಾರತದ ಟೈರ್ ತಯಾರಿಕಾ ಕಂಪನಿ ಸಿಯೆಟ್ ವರ್ಷದ ಕ್ರಿಕೆಟಿಂಗ್ ಪ್ರಶಸ್ತಿಗಳನ್ನು ಪ್ರಧಾನ ಮಾಡಿದೆ. ಈ ಬಾರಿ ಪುರುಷರ ವರ್ಷದ ಅಂತಾರಾಷ್ಟ್ರೀಯ ಕ್ರಿಕೆಟಿಗ ಪ್ರಶಸ್ತಿ ಟೀಮ್ ಇಂಢಿಯಾ ನಾಯಕ ರೋಹಿತ್ ಶರ್ಮಾಗೆ ಒಲಿದರೆ, ಒಡಿಐ ಬ್ಯಾಟರ್ ಆಫ್ ದಿ ಇಯರ್ ಪ್ರಶಸ್ತಿಯನ್ನು ವಿರಾಟ್ ಕೊಹ್ಲಿ ತಮ್ಮದಾಗಿಸಿಕೊಂಡಿದ್ದಾರೆ. ಹಾಗೆಯೇ ವರ್ಷದ ಟಿ20 ಬ್ಯಾಟರ್ ಆಫ್ ದಿ ಇಯರ್ ಪ್ರಶಸ್ತಿಯು ಇಂಗ್ಲೆಂಡ್ ತಂಡದ ಆರಂಭಿಕ ಆಟಗಾರ ಫಿಲ್ ಸಾಲ್ಟ್ ಪಾಲಾಗಿದೆ.
ಇನ್ನು ಟೀಮ್ ಇಂಡಿಯಾ ಬೌಲರ್ ಮೊಹಮ್ಮದ್ ಶಮಿ ಏಕದಿನ ಬೌಲರ್ ಪ್ರಶಸ್ತಿ ಪಡೆದರೆ, ಯುವ ದಾಂಡಿಗ ಯಶಸ್ವಿ ಜೈಸ್ವಾಲ್ ವರ್ಷದ ಟೆಸ್ಟ್ ಬ್ಯಾಟರ್ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಹಾಗೆಯೇ ವರ್ಷದ ಟೆಸ್ಟ್ ಬೌಲರ್ ಪ್ರಶಸ್ತಿಯು ಹಿರಿಯ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರಿಗೆ ನೀಡಲಾಗಿದೆ.
ಮಹಿಳಾ ವಿಭಾಗದಲ್ಲಿ ಟೀಮ್ ಇಂಡಿಯಾ ಆಟಗಾರ್ತಿಯರಾದ ಹರ್ಮನ್ಪ್ರೀತ್ ಕೌರ್, ಶಫಾಲಿ ವರ್ಮಾ, ದೀಪ್ತಿ ಶರ್ಮಾ ಹಾಗೂ ಸ್ಮೃತಿ ಮಂಧಾನ ಪ್ರಶಸ್ತಿ ಗೌರವಕ್ಕೆ ಪಾತ್ರರಾಗಿದ್ದಾರೆ.
ರಾಹುಲ್ ದ್ರಾವಿಡ್ಗೆ ಗೌರವ:
ಜೀವಮಾನದ ಸರ್ವಶ್ರೇಷ್ಠ ಸಾಧನೆಗಾಗಿ ಟೀಮ್ ಇಂಡಿಯಾದ ಮಾಜಿ ಆಟಗಾರ ರಾಹುಲ್ ದ್ರಾವಿಡ್ ಅವರಿಗೆ ಜೀವಮಾನ ಸಾಧನೆ ಪ್ರಶಸ್ತಿ ನೀಡಿ ಸಿಯೆಟ್ ಕಂಪೆನಿ ಗೌರವಿಸಿದೆ. ಹಾಗೆಯೇ ಶ್ರೇಷ್ಠ ಕ್ರೀಡಾ ಆಡಳಿತಕ್ಕಾಗಿ ಜಯ್ ಶಾ ಅವರಿಗೂ ವಿಶೇಷ ಪ್ರಶಸ್ತಿ ನೀಡಲಾಗಿದೆ. ಅದರಂತೆ ಈ ಬಾರಿಯ ಸಿಯೆಟ್ ಪ್ರಶಸ್ತಿ ಪಡೆದವರ ಪಟ್ಟಿ ಈ ಕೆಳಗಿನಂತಿದೆ.
ಸಿಯೆಟ್ ಪ್ರಶಸ್ತಿ ವಿಜೇತರ ಸಂಪೂರ್ಣ ಪಟ್ಟಿ:
ಸಂಖ್ಯೆ | ಪ್ರಶಸ್ತಿ | ಪ್ರಶಸ್ತಿ ಪಡೆದವರು |
1 | ಜೀವಮಾನ ಸಾಧನೆ ಪ್ರಶಸ್ತಿ | ರಾಹುಲ್ ದ್ರಾವಿಡ್ |
2 | ವರ್ಷದ ಅಂತಾರಾಷ್ಟ್ರೀಯ ಕ್ರಿಕೆಟಿಗ | ರೋಹಿತ್ ಶರ್ಮಾ |
3 | ವರ್ಷದ ಏಕದಿನ ಬ್ಯಾಟರ್ | ವಿರಾಟ್ ಕೊಹ್ಲಿ |
4 | ವರ್ಷದ ಏಕದಿನ ಬೌಲರ್ | ಮೊಹಮ್ಮದ್ ಶಮಿ |
5 | ವರ್ಷದ ಟೆಸ್ಟ್ ಬ್ಯಾಟರ್ | ಯಶಸ್ವಿ ಜೈಸ್ವಾಲ್ |
6 | ವರ್ಷದ ಟೆಸ್ಟ್ ಬೌಲರ್ | ರವಿಚಂದ್ರನ್ ಅಶ್ವಿನ್ |
7 | ವರ್ಷದ ಟಿ20 ಬ್ಯಾಟರ್ | ಫಿಲ್ ಸಾಲ್ಟ್ |
8 | ವರ್ಷದ ಟಿ20 ಬೌಲರ್ | ಟಿಮ್ ಸೌಥಿ |
9 | ವರ್ಷದ ದೇಶೀಯ ಕ್ರಿಕೆಟಿಗ | ಸಾಯಿ ಕಿಶೋರ್ |
10 | ವರ್ಷದ ಮಹಿಳಾ ಬ್ಯಾಟರ್ | ಸ್ಮೃತಿ ಮಂಧಾನ |
11 | ವರ್ಷದ ಮಹಿಳಾ ಬೌಲರ್ | ದೀಪ್ತಿ ಶರ್ಮಾ |
12 | ಹೆಚ್ಚು ಟಿ20 ಪಂದ್ಯಗಳನ್ನಾಡಿದ ನಾಯಕಿ | ಹರ್ಮನ್ಪ್ರೀತ್ ಕೌರ್ |
13 | ಐಪಿಎಲ್ನ ಅತ್ಯುತ್ತಮ ನಾಯಕ | ಶ್ರೇಯಸ್ ಅಯ್ಯರ್ |
14 | ಮಹಿಳಾ ಟೆಸ್ಟ್ನಲ್ಲಿ ವೇಗದ ದ್ವಿಶತಕ ಬಾರಿಸಿದ ಬ್ಯಾಟರ್ | ಶಫಾಲಿ ವರ್ಮಾ |
15 | ಶ್ರೇಷ್ಠ ಕ್ರೀಡಾ ಆಡಳಿತ | ಜಯ್ ಶಾ |