ಹಳೇ ಮಾಧ್ಯಮಿಕ ಶಾಲಾ ಆವರಣದಲ್ಲಿ  ಪಾರ್ಶನಾಥ  ವಿದ್ಯಾ ಸಂಸ್ಥೆಯ ಮಕ್ಕಳಿಂದ ಗಾಳಿ ಪಟ ಹಬ್ಬದ ಆಚರಣೆ.

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಚಿತ್ರದುರ್ಗ ಆ. 03 : ನಗರದ ಪಾರ್ಶನಾಥ ವಿದ್ಯಾ ಸಂಸ್ಥೆಯ ಆಶ್ರಯದಲ್ಲಿ ಆಷಾಢದ ಕೊನೆಯ ಶನಿವಾರವಾದ ಇಂದು ನಗರದ ಹಳೇ ಮಾಧ್ಯಮಿಕ ಶಾಲಾ ಆವರಣದಲ್ಲಿ ವಿದ್ಯಾ ಸಂಸ್ಥೆಯ ಮಕ್ಕಳಿಂದ ಗಾಳಿ ಪಟದ ಹಬ್ಬವನ್ನು ಆಚರಿಸಲಾಯಿತು.

ಇದರಲ್ಲಿ ಒಂದನೇ ತರಗತಿಯಿಂದ ಹಿಡಿದು ಎಸ್.ಎಸ್.ಎಲ್.ಸಿಯವರೆಗಿನ 300ಮಕ್ಕಳು ಗಾಳಿಪಟ ಹಾರಿಸುವ ಪ್ರಕ್ರಿಯೆಯಲ್ಲಿ ಉತ್ಸಾಹದಿಂದ ಪಾಲ್ಗೊಂಡು ಗಮನ ಸೆಳೆದರು. ತಾವೇ ತಯಾರಿಸಿದ್ದ ಆಕರ್ಷಕ ಚಿತ್ರವುಳ್ಳ ಗಾಳಿಪಟಗಳನ್ನು ಬಾನಂಗಳಕ್ಕೆ ಹಾರಿಬಿಟ್ಟ ಮಕ್ಕಳು ನನ್ನ ಗಾಳಿಪಟ ಮತ್ತಷ್ಟು ಎತ್ತರಕ್ಕೆ ಹಾರಿಸಬೇಕೆಂದು ಒಬ್ಬರಿಗೊಬ್ಬರು ಜಿದ್ದಿಗೆ ಬಿದ್ದವರಂತೆ ಪಟದ ದಾರವನ್ನು ಸಡಿಲಿಸುತ್ತಾ ಕುಣಿದು ಕುಪ್ಪಳಿಸಿದರು. ಒಂದರಿಂದ ಹತ್ತನೇ ತರಗತಿವರೆಗಿನ ಮಕ್ಕಳ ಉತ್ಸಾಹ ಹಾಗೂ ಎತ್ತರಕ್ಕೇರಿದ ಗಾಳಿಪಟಗಳು ನೋಡ ನೋಡುತ್ತಿದ್ದಂತೆ ಚಿಕ್ಕ ಗಾತ್ರವಾಗುವುದನ್ನು ಕಂಡ ಪೋಷಕರು ಮಕ್ಕಳಿಗೆ ಇನ್ನೂ ಹೆಚ್ಚಿನ ಪ್ರೋತ್ಸಾಹ ನೀಡಲು ಮುಂದಾಗುತ್ತಿದ್ದರು.

ಈ ಸಂದರ್ಭದಲ್ಲಿ ಪಾರ್ಶನಾಥ ವಿದ್ಯಾ ಸಂಸ್ಥೆಯ ಆಡಳಿತ ಮಂಡಳಿಯ ಉಪಾಧ್ಯಕ್ಷರಾದ ಉತ್ತಮಚಂದ್ ಸುರಾನ, ಕಾರ್ಯದರ್ಶಿ ಸುರೇಶ್ ಕುಮಾರ್, ನಿರ್ದೆಶಕರಾದ ಕೆ.ಸುರೇಶ್ ಪಟಿಯತ್, ಮುಖ್ಯ ಶಿಕ್ಷಕರಾದ ನಾಜ್ಜಿಮಾ ಹಾಗೂ ಶಾಲೆಯ ಶಿಕ್ಷಕ ವರ್ಗ ಹಾಜರಿದ್ದರು.

Leave a Reply

Your email address will not be published. Required fields are marked *