ಕೇಂದ್ರ ಸರ್ಕಾರ ಪ್ಯಾನ್ 2.0 ಯೋಜನೆಗೆ ಅನುಮೋದನೆ ನೀಡಿದೆ. ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಪ್ರಕಾರ, ಹೊಸ ಆವೃತ್ತಿಯ ಪ್ಯಾನ್ ಕಾರ್ಡ್ (ಪ್ಯಾನ್ ಕಾರ್ಡ್ 2.0) ಹೊಸ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಹೊಸ ಪ್ಯಾನ್ ಕಾರ್ಡ್‌ನಲ್ಲಿ ಕ್ಯೂಆರ್ ಕೋಡ್ ಇರಲಿದೆ. ಡಿಜಿಟಲ್ ಭದ್ರತೆಯನ್ನು ಬಲಪಡಿಸುವುದು, ವಂಚನೆ ಮತ್ತು ಡೇಟಾ ಕಳ್ಳತನದ ಸಾಧ್ಯತೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ಪ್ಯಾನ್ ಕಾರ್ಡ್ ಗೆ ಹೊಸ ರೂಪ ನೀಡಲಾಗಿದೆ.

- ಪ್ಯಾನ್ ಕಾರ್ಡ್ ಪ್ರಮುಖ ದಾಖಲೆಗಳಲ್ಲಿ ಒಂದು
- ಪ್ಯಾನ್ ಕಾರ್ಡ್‌ನಲ್ಲಿ ಪ್ರಮುಖ ಬದಲಾವಣೆ
- ಪ್ಯಾನ್ 2.0 ಯೋಜನೆಗೆ ಕೇಂದ್ರ ಸರ್ಕಾರ ಅನುಮೋದನೆ
ಬೆಂಗಳೂರು : ಸಾಲಕ್ಕಾಗಿ ಅರ್ಜಿ ಸಲ್ಲಿಸಲು ಅಥವಾ ಬ್ಯಾಂಕ್ ಖಾತೆ ತೆರೆಯಬೇಕಾದರೆ, ಮನೆ ನಿರ್ಮಾಣ, ಫ್ಲಾಟ್ ಅಥವಾ ಆಸ್ತಿಯನ್ನು ಖರೀದಿ ಮಾಡುವಾಗ ಅಗತ್ಯವಾಗಿ ಬೇಕಾಗಿರುವ ದಾಖಲೆ ಸಲ್ಲಿಸಬೇಕಾಗುತ್ತದೆ. ಅಂಥಹ ದಾಖಲೆಗಳಲ್ಲಿ ಪ್ಯಾನ್ ಕಾರ್ಡ್ ಕೂಡಾ ಒಂದು. ಸರ್ಕಾರವು ಈ ಪ್ಯಾನ್ ಕಾರ್ಡ್‌ನಲ್ಲಿ ಪ್ರಮುಖ ಬದಲಾವಣೆಗಳನ್ನು ಮಾಡಿದೆ. ಸೋಮವಾರ ಮೋದಿ ಸಂಪುಟ ಸಭೆಯಲ್ಲಿ ಪ್ಯಾನ್ 2.0 ಯೋಜನೆಗೆ ಅನುಮೋದನೆ ನೀಡಲಾಗಿದೆ. ಇದಕ್ಕಾಗಿ ಸರ್ಕಾರ 1435 ಕೋಟಿ ರೂ.ಗಳನ್ನು ವೆಚ್ಚ ಮಾಡಲಿದೆ ಎಂದು ಕೇಂದ್ರ ಸಚಿವ ಅಶ್ವಿನ್ ವೈಷ್ಣವ್ ಹೇಳಿದ್ದಾರೆ. ಹೊಸ ಪ್ಯಾನ್ ಕಾರ್ಡ್ ಅಸ್ತಿತ್ವದಲ್ಲಿರುವ ಪ್ಯಾನ್ ಕಾರ್ಡ್‌ಗಿಂತ ಹೆಚ್ಚು ಸುಧಾರಿತವಾಗಿರುತ್ತದೆ.ಪ್ಯಾನ್ ಕಾರ್ಡ್ ಆದಾಯ ತೆರಿಗೆ ಇಲಾಖೆಯಿಂದ ನೀಡಲಾದ ದಾಖಲೆಯಾಗಿದೆ. ಡಿಜಿಟಲ್ ಭದ್ರತೆಯನ್ನು ಬಲಪಡಿಸುವುದು, ವಂಚನೆ ಮತ್ತು ಡೇಟಾ ಕಳ್ಳತನದ ಸಾಧ್ಯತೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ಪ್ಯಾನ್ ಕಾರ್ಡ್ ಗೆ ಹೊಸ ರೂಪ ನೀಡಲಾಗಿದೆ.
ಹೊಸ ಪ್ಯಾನ್ ಕಾರ್ಡ್ :
ಹೊಸ ಪ್ಯಾನ್ ಕಾರ್ಡ್ ಹಳೆಯದಕ್ಕಿಂತ ಹೆಚ್ಚು ಭಿನ್ನವಾಗಿರಲಿದೆ. ಹೊಸ ಪ್ಯಾನ್ ಕಾರ್ಡ್‌ಗಳು ಕ್ಯೂಆರ್ ಕೋಡ್‌ಗಳನ್ನು ಒಳಗೊಂಡಿರುತ್ತದೆ. ಇದಕ್ಕಾಗಿ ಪೇಪರ್‌ಲೇನ್ ಅಂದರೆ ಆನ್‌ಲೈನ್ ಪ್ರಕ್ರಿಯೆಯನ್ನು ಅಳವಡಿಸಿಕೊಳ್ಳಲಾಗುವುದು. ಅತ್ಯಂತ ಮುಖ್ಯವಾದ ವಿಷಯವೆಂದರೆ ಜನರು ಇದಕ್ಕಾಗಿ ಪ್ರತ್ಯೇಕ ಹಣವನ್ನು ಖರ್ಚು ಮಾಡಬೇಕಾಗಿಲ್ಲ, ಜನರು QR ಕೋಡ್‌ನೊಂದಿಗೆ ಪ್ಯಾನ್‌ಗಾಗಿ ಪ್ರತ್ಯೇಕವಾಗಿ ಖರ್ಚು ಮಾಡುವ ಅಗತ್ಯವಿಲ್ಲ. ಸ್ಕ್ಯಾನರ್ ಅಳವಡಿಸಲಾಗಿರುವ ಹೊಸ ಪ್ಯಾನ್ ಕಾರ್ಡ್‌ನಲ್ಲಿ ಡೇಟಾ ಸಂಪೂರ್ಣವಾಗಿ ಸುರಕ್ಷಿತವಾಗಿರುತ್ತದೆ.
ಪ್ಯಾನ್ ಕಾರ್ಡ್ 2.0 ಎಷ್ಟು ವಿಭಿನ್ನವಾಗಿರುತ್ತದೆ? :
ಕೇಂದ್ರ ಸಚಿವ ಸಂಪುಟವು ಪ್ಯಾನ್ 2.0 ಯೋಜನೆಗೆ ಅನುಮೋದನೆ ನೀಡಿದೆ. ಈ ಯೋಜನೆಯ ಉದ್ದೇಶವು PAN ಕಾರ್ಡ್ ಅನ್ನು ಹೆಚ್ಚು ಸುರಕ್ಷಿತಗೊಳಿಸುವುದು ಮತ್ತು ತೆರಿಗೆದಾರರ ಶಾಶ್ವತ ಖಾತೆ ಸಂಖ್ಯೆ (PAN)ಯನ್ನು ಎಲ್ಲಾ ಸರ್ಕಾರಿ ಏಜೆನ್ಸಿಗಳಿಗೆ ‘ಸಾಮಾನ್ಯ ವ್ಯಾಪಾರ ಗುರುತಿಸುವಿಕೆಗಾಗಿ ಬಳಸುವ ಪ್ರಕ್ರಿಯೆಯನ್ನು ಸರಳಗೊಳಿಸುವುದು. ಇದರೊಂದಿಗೆ, ಪ್ಯಾನ್ ಕಾರ್ಡ್‌ನ ಉತ್ತಮ ಗುಣಮಟ್ಟದ ಜೊತೆಗೆ, ಅದರ ಸೇವೆಯನ್ನು ಸುಲಭ ಮತ್ತು ವೇಗವಾಗಿ ಮಾಡಬೇಕು. ಹೊಸ ಪ್ಯಾನ್ ಕಾರ್ಡ್ ಹಳೆಯ ಪ್ಯಾನ್ ಕಾರ್ಡ್‌ಗಿಂತ ಭಿನ್ನವಾಗಿರುತ್ತದೆ.
ಈ ಹೊಸ ಕಾರ್ಡ್ ಗೆ ಸಂಬಂಧಿಸಿದಂತೆ ಅನೇಕ ಪ್ರಶ್ನೆಗಳು ಜನರ ಮನದಲ್ಲಿ ಮೂಡುತ್ತಿದೆ. ಈ ಕಾರ್ಡ್ ಪಡೆಯಬೇಕಾದರೆ ತೆರಬೇಕಾದ ಶುಲ್ಕ ಎಷ್ಟು ಎನ್ನುವುದು ಸದ್ಯಕ್ಕೆ ಎಲ್ಲರ ಮನದಲ್ಲಿ ಮೂಡಿರುವ ಪ್ರಶ್ನೆ.
ಹೊಸ ಕಾರ್ಡ್‌ಗಾಗಿ ಎಲ್ಲಿಯೂ ಅರ್ಜಿ ಸಲ್ಲಿಸುವ ಅಗತ್ಯವಿಲ್ಲ. ಅಥವಾ ಯಾವುದೇ ಫಾರ್ಮ್ ಅನ್ನು ಭರ್ತಿ ಮಾಡಬೇಕಾಗಿಲ್ಲ. ಹೊಸ ಪ್ಯಾನ್ ಕಾರ್ಡ್ ಅನ್ನು ನಿಮ್ಮ ಮನೆಗೆ ತಲುಪಿಸಲಾಗುತ್ತದೆ.
ಈ ಹೊಸ ಸ್ವರೂಪದ ಪ್ಯಾನ್ ಕಾರ್ಡ್ ಪಡೆಯಲು ಯಾವುದೇ ರೀತಿಯ ಶುಲ್ಕವನ್ನು ಪಾವತಿಸಬೇಕಾಗಿಲ್ಲ. ಆದಾಯ ತೆರಿಗೆ ಇಲಾಖೆಯಿಂದ ನಿಮ್ಮ ನೋಂದಾಯಿತ ವಿಳಾಸಕ್ಕೆ ಹೊಸ ಪ್ಯಾನ್ ಕಾರ್ಡ್ ಕಳುಹಿಸಲಾಗುತ್ತದೆ. ಅಂದರೆ ನಿಮ್ಮ ಅಸ್ತಿತ್ವದಲ್ಲಿರುವ ಪ್ಯಾನ್ ಸ್ವಯಂಚಾಲಿತವಾಗಿ ಅಪ್‌ಗ್ರೇಡ್ ಆಗುತ್ತದೆ. ಭವಿಷ್ಯದಲ್ಲಿ ಪ್ಯಾನ್ ಕಾರ್ಡ್ ಯುನಿವರ್ಸಲ್ ಐಡಿಯಂತೆ ಕಾರ್ಯನಿರ್ವಹಿಸುವುದರಿಂದ ಹೊಸ ವ್ಯವಸ್ಥೆಯ ಅಗತ್ಯವು ಉದ್ಭವಿಸಿದೆ.ಹೊಸ ಕಾರ್ಡ್ ನಿಮ್ಮ ಕೈಗೆ ಬರುವವರೆಗೆ, ನೀವು ಹಳೆಯ ಪ್ಯಾನ್ ಕಾರ್ಡ್‌ನೊಂದಿಗೆ ನಿಮ್ಮ ಎಲ್ಲಾ ಕೆಲಸಗಳನ್ನು ಮಾಡಬಹುದು.