Poonam Pandey dies of cervical cancer: ತಾಯಿಯಾದವರು, ಗರ್ಭನಿರೋಧಕ ಔಷಧಿಗಳನ್ನು ಸೇವಿಸುವವರು ಮತ್ತು ಧೂಮಪಾನಿಗಳಲ್ಲಿ ಈ ಸಮಸ್ಯೆ ಹೆಚ್ಚು ಕಾಡುತ್ತಿದೆ ಎಂದು ಹೇಳಲಾಗಿದೆ. ಲೈಂಗಿಕವಾಗಿ ಹರಡುವ ಸೋಂಕುಗಳು ಗರ್ಭಕಂಠದ ಕ್ಯಾನ್ಸರ್‌ನ ಅಪಾಯವನ್ನು ಹೆಚ್ಚಿಸುವ ಸಾಧ್ಯತೆ ಇದೆ. ಹೀಗಾಗಿ ಕಾಲಕಾಲಕ್ಕೆ ವೈದ್ಯರ ಹತ್ತಿರ ಆರೋಗ್ಯ ತಪಾಸಣೆ ಮಾಡಿಕೊಳ್ಳುವಂತೆ ಸಲಹೆ ನೀಡಲಾಗಿದೆ.

Cervical Cancer: ಬಾಲಿವುಡ್‌ನ ಮಾದಕ ನಟಿ ಪೂನಂ ಪಾಂಡೆ ಗರ್ಭಕಂಠದ ಕ್ಯಾನ್ಸರ್‌ನಿಂದ ತಮ್ಮ 32 ವಯಸ್ಸಿಗೆ ಸಾವನ್ನಪ್ಪಿದ್ದಾರೆ. 2020ರ ವರದಿಯ ಪ್ರಕಾರ ಪ್ರಪಂಚದಾದ್ಯಂತ ಪ್ರತಿವರ್ಷ 6 ಲಕ್ಷಕ್ಕೂ ಅಧಿಕ ಮಂದಿ ಈ ಗರ್ಭಕಂಠದ ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರಂತೆ. ಇದಲ್ಲದೆ ಲಕ್ಷಾಂತರ ಜನರು ಈ ಮಾರಕ ಸೋಂಕಿನಿಂದ ಸಾವನ್ನಪ್ಪುತ್ತಿದ್ದಾರೆಂದು ವರದಿಯಾಗಿದೆ. ಪೂನಂ ಪಾಂಡೆ ಸಾವಿಗೆ ಕಾರಣವಾದ ಗರ್ಭಕಂಠದ ಕ್ಯಾನ್ಸರ್‌ಗೆ ಕಾರಣವೇನು? ಮತ್ತು ಇದರ ಲಕ್ಷಣಗಳು ಏನು? ಅನ್ನೋದರ ಮಾಹಿತಿ ಇಲ್ಲಿದೆ ನೋಡಿ.
ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ ಮಹಿಳೆಯರನ್ನು ಅತಿಹೆಚ್ಚು ಕಾಡುತ್ತಿರುವ ಕ್ಯಾನ್ಸರ್‌ಗಳ ಪೈಕಿ ಗರ್ಭಕಂಠದ ಕ್ಯಾನ್ಸರ್‌ಗೆ 4ನೇ ಸ್ಥಾನವಿದೆ. ಈ ಕ್ಯಾನ್ಸರ್‌ನಿಂದ ಭಾರತದಲ್ಲಿ ಪ್ರತಿ ೮ ನಿಮಿಷಕ್ಕೆ ಒಬ್ಬ ಮಹಿಳೆ ಬಲಿಯಾಗುತ್ತಿದ್ದಾಳಂತೆ. ಗರ್ಭಕಂಠದಲ್ಲಿನ ಕೋಶಗಳ ಅಸಹಜ ಬೆಳವಣಿಗೆಯೇ ಈ ಕ್ಯಾನ್ಸರ್‌ಗೆ ಪ್ರಮುಖ ಕಾರಣ. ಇದು ಗರ್ಭಕೋಶದಿಂದ ಯೋನಿವರೆಗೆ ಹರಡುತ್ತದಂತೆ.
ವರದಿಯ ಪ್ರಕಾರ ವಿಶ್ವದಾದ್ಯಂತ ಸುಮಾರು 6 ಲಕ್ಷಕ್ಕೂ ಹೆಚ್ಚು ಮಹಿಳೆಯರು ಗರ್ಭಕಂಠದ ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆ. ಸುಮಾರು 3ಲಕ್ಷಕ್ಕೂ ಅಧಿಕ ಮಂದಿ ಇದರಿಂದ ಸಾವನ್ನಪ್ಪುತ್ತಿದ್ದಾರಂತೆ. ಆರಂಭಿಕ ಹಂತದಲ್ಲಿ ಗರ್ಭಕಂಠದ ಕ್ಯಾನ್ಸರ್ ಪತ್ತೆಯಾದರೆ ಸೂಕ್ತ ಚಿಕಿತ್ಸೆ ನೀಡಿ ಗುಣಪಡಿಸಬಹುದು. ಮೊದಲ ಹಂತದಲ್ಲಿ ಸೂಕ್ತ ಚಿಕಿತ್ಸೆ ಪಡೆದು ನಂತರದ ಹಂತದಲ್ಲಿ ಚಿಕಿತ್ಸೆ ಮುಂದುವರಿಸಿದರೆ ಈ ಕಾಯಿಲೆಯನ್ನು ಗುಣಪಡಿಸಬಹುದು ಎಂದು ವೈದ್ಯರು ತಿಳಿಸಿದ್ದಾರೆ.

ಹ್ಯೂಮನ್ ಪ್ಯಾಪಿಲೋಮ ವೈರಸ್ ಅಥವಾ ಎಚ್‌ಪಿವಿ(HPV) ಶೇ.99ರಷ್ಟು ಗರ್ಭಕಂಠದ ಕ್ಯಾನ್ಸರ್ ಪ್ರಕರಣಗಳಿಗೆ ಕಾರಣವಾಗಿದೆ. ಇದು ಸಾಮಾನ್ಯವಾಗಿ ಲೈಂಗಿಕವಾಗಿ ಹರಡುವ ಸೋಂಕು. ಇದು ಗಂಟಲು, ಜನನಾಂಗ ಹಾಗೂ ಚರ್ಮದ ಮೇಲೆ ಪರಿಣಾಮ ಬೀರುತ್ತದೆ. ಲೈಂಗಿಕವಾಗಿ ಸಕ್ರಿಯವಾಗಿರುವವರು ಈ ಸೋಂಕಿಗೆ ತುತ್ತಾಗುತ್ತಾರೆ. ಆದರೆ ಇದರ ರೋಗಲಕ್ಷಣಗಳು ಮೇಲ್ನೋಟಕ್ಕೆ ಅರಿವಿಗೆ ಬರುವುದಿಲ್ಲವೆಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ.

ಬಹುತೇಕ ವೇಳೆ ದೇಹದಲ್ಲಿ ಪ್ರತಿರಕ್ಷಣಾ ವ್ಯವಸ್ಥೆ ಉತ್ತಮವಾಗಿದ್ದರೆ, ಸೋಂಕನ್ನು ದೇಹದಿಂದ ಹೊರ ಹಾಕಲು ಸಹಾಯ ಮಾಡುತ್ತದೆ. ಆದರೆ ನಿರಂತರ ಸೋಂಕು ಅಸಹಜ ಕೋಶಗಳ ಬೆಳವಣಿಗೆಗೆ ಕಾರಣವಾಗಬಹುದು. ಅಲ್ಲದೆ ಅದು ನಂತರದ ದಿನಗಳಲ್ಲಿ ಕ್ಯಾನ್ಸರ್ ಆಗಿ ಬದಲಾಗಬಹುದು. ಅಸಹಜ ಜೀವಕೋಶಗಳು ಕ್ಯಾನ್ಸರ್ ಆಗಿ ಬದಲಾಗಲು 15 ರಿಂದ 20 ವರ್ಷಗಳು ಬೇಕಾಗಬಹುದು. ಪ್ರತಿರಕ್ಷಣಾ ವ್ಯವಸ್ಥೆ ದುರ್ಬಲವಾಗಿರುವ ಮಹಿಳೆಯರಲ್ಲಿ ಇದು ಕೇವಲ 5 ರಿಂದ 10 ವರ್ಷದಲ್ಲಿ ಕ್ಯಾನ್ಸರ್ ಉಂಟಾಗುವಂತೆ ಮಾಡಬಹುದು.

ಇತ್ತೀಚಿಗೆ ತಾಯಿಯಾದವರು, ಗರ್ಭನಿರೋಧಕ ಔಷಧಿಗಳನ್ನು ಸೇವಿಸುವವರು ಮತ್ತು ಧೂಮಪಾನಿಗಳಲ್ಲಿ ಈ ಸಮಸ್ಯೆ ಹೆಚ್ಚು ಕಾಡುತ್ತಿದೆ ಎಂದು ಹೇಳಲಾಗಿದೆ. ಲೈಂಗಿಕವಾಗಿ ಹರಡುವ ಸೋಂಕುಗಳು ಗರ್ಭಕಂಠದ ಕ್ಯಾನ್ಸರ್‌ನ ಅಪಾಯವನ್ನು ಹೆಚ್ಚಿಸುವ ಸಾಧ್ಯತೆ ಇದೆ. ಹೀಗಾಗಿ ಕಾಲಕಾಲಕ್ಕೆ ವೈದ್ಯರ ಹತ್ತಿರ ಆರೋಗ್ಯ ತಪಾಸಣೆ ಮಾಡಿಕೊಳ್ಳುವಂತೆ ಸಲಹೆ ನೀಡಲಾಗಿದೆ.
ಗರ್ಭಕಂಠದ ಕ್ಯಾನ್ಸರ್ ಲಕ್ಷಣಗಳೇನು..?
ಸೋಂಕಿನ ಆರಂಭಿಕ ಅವಧಿಯಲ್ಲಿ ಮಹಿಳೆಯರಲ್ಲಿ ಯಾವುದೇ ಲಕ್ಷಣಗಳು ಕಂಡುಬರುವುದಿಲ್ಲ. ಗರ್ಭಕಂಠದ ಕ್ಯಾನ್ಸರ್ ಚಿಕಿತ್ಸೆಗೊಳಪಡದೆ ದೀರ್ಘಕಾಲ ಇದ್ದಷ್ಟು ಅದರ ಲಕ್ಷಣಗಳು ಹೊರಕಾಣುವ ಸಾಧ್ಯತೆ ಹೆಚ್ಚು.ಧೂಮಪಾನ ಮಾಡುವ ಯುವತಿಯರಲ್ಲಿ ಸಂತಾನೋತ್ಪತ್ತಿ ಆರೋಗ್ಯ ಸಮಸ್ಯೆಗಳು ಜನನಾಂಗದಲ್ಲಿ ಅಸಹಜ ಮತ್ತು ಅಸಾಧಾರಣ ಪ್ರಮಾಣದಲ್ಲಿ ರಕ್ತ ಸ್ರಾವ, ಲೈಂಗಿಕ ಸಂಪರ್ಕದ ವೇಳೆ ಮತ್ತು ಮೂತ್ರವಿಸರ್ಜನೆಯ ಸಂದರ್ಭದಲ್ಲಿ ನೋವು, ಲೈಂಗಿಕ ಸಂಪರ್ಕದ ಬಳಿಕ ರಕ್ತಸ್ರಾವ, ಋತುಚಕ್ರದ ಅವಧಿಯಲ್ಲಿ ಬೆನ್ನು ನೋವು, ತುರಿಕೆ ಮತ್ತು ಉರಿ, ಹೆಚ್ಚು ಆಯಾಸ, ತುರ್ತು ಮೂತ್ರ ವಿಸರ್ಜನೆ, ಹೊಟ್ಟೆ ಉಬ್ಬರ ಕಂಡು ಬಂದರೆ ವೈದ್ಯ ಬಳಿ ತೆರಳಿ ಚಿಕಿತ್ಸೆ ಪಡೆಯಬೇಕು.
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
WhatsApp Group: https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharehat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1