ಚನ್ನಪಟ್ಟಣ, ಶಿಗ್ಗಾವಿ, ಸಂಡೂರು: 3 ಕ್ಷೇತ್ರಗಳಲ್ಲಿ ಬಿರುಸಿನ ಮತದಾನ, ಅಭ್ಯರ್ಥಿಗಳಿಂದ ದೇವರ ಮೊರೆ!

ಹೈಲೈಟ್ಸ್‌:

  • ಚನ್ನಪಟ್ಟಣ, ಶಿಗ್ಗಾವಿ, ಸಂಡೂರು 3 ಕ್ಷೇತ್ರಗಳಲ್ಲಿ ಬಿರುಸಿನಿಂದಲೇ ಬೆಳಗ್ಗೆ 7 ಗಂಟೆಯಿಂದ ಮತದಾನ ಆರಂಭಗೊಂಡಿದೆ
  • ಚನ್ನಪಟ್ಟಣದಲ್ಲಿ 10.34%, ಶಿಗ್ಗಾವಿಯಲ್ಲಿ 10.08%, ಸಂಡೂರು 9.99% ಮತದಾನ ನಡೆದಿದೆ. ಉತ್ತಮ ಪ್ರಮಾಣದಲ್ಲಿ ಮತದಾರರು ತಮ್ಮ ಹಕ್ಕನ್ನು ಚಲಾಯಿಸುತ್ತಿದ್ದಾರೆ
  • ಚನ್ನಪಟ್ಟಣದಲ್ಲ ನಿಖಿಲ್ ಹಾಗೂ ಸಿಪಿವೈ ಅಖಾಡಲ್ಲಿದ್ದೆ, ಸಂಡೂರಿನಲ್ಲಿ ಬಂಗಾರು ಲಕ್ಷ್ಮಣ್, ಇ ಅನ್ನಪೂರ್ಣ ಸ್ಪರ್ಧೆ ನಡೆಸಿದ್ದಾರೆ

ಬೆಂಗಳೂರು: ಚನ್ನಪಟ್ಟಣ, ಶಿಗ್ಗಾವಿ ಹಾಗೂ ಸಂಡೂರು ವಿಧಾನಸಭೆ ಕ್ಷೇತ್ರದ ಉಪ ಚುನಾವಣೆ ಮತದಾನ ಆರಂಭಗೊಂಡಿದೆ. ಬೆಳಗ್ಗೆ 7 ಗಂಟೆಯಿಂದಲೇ ಬಿರುಸಿನ ಮತದಾನ ನಡೆಯುತ್ತಿದೆ. ಮತದಾರರು ಸರದಿ ಸಾಲಿನಲ್ಲಿ ನಿಂತು ತಮ್ಮ ಹಕ್ಕನ್ನು ಚಲಾಯಿಸುತ್ತಿದ್ದಾರೆ. ಈ ನಡುವೆ ಅಭ್ಯರ್ಥಿಗಳು ದೇವರ ಮೊರೆ ಹೋಗಿದ್ದಾರೆ.

ರಾಜ್ಯದಲ್ಲಿ 3 ಕ್ಷೇತ್ರಗಳ ಉಪ ಚುನಾವಣೆ ಜನರ ಗಮನ ಸೆಳೆದಿತ್ತು. ಮೂರು ಕ್ಷೇತ್ರಗಳಲ್ಲಿ ಭರ್ಜರಿ ಪ್ರಚಾರವನ್ನು ಹಮ್ಮಿಕೊಳ್ಳಲಾಗಿತ್ತು. ಎಚ್‌ಡಿ ಕುಮಾರಸ್ವಾಮಿ, ಡಿಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಅವರು ಈ ಚುನಾವಣೆಯಲ್ಲಿ ವೈಯಕ್ತಿಕ ಪ್ರತಿಷ್ಠೆಯ ಕಣವನ್ನಾಗಿ ಸ್ವೀಕಾರ ಮಾಡಿದ್ದಾರೆ. ಈ ನಿಟ್ಟಿನಲ್ಲಿ ಮೂರು ಕ್ಷೇತ್ರಗಳ ಚುನಾವಣಾ ಕಣ ಗಮನ ಸೆಳೆಯುತ್ತಿದೆ.

ಯಾವ ಕ್ಷೇತ್ರಗಳಲ್ಲಿ ಎಷ್ಟೆಷ್ಟು ಮತದಾನ ( 7 ರಿಂದ 9)

ಚನ್ನಪಟ್ಟಣ – 10.34%

ಶಿಗ್ಗಾವಿ – 10.08%

ಸಂಡೂರು- 9.99

ಒಟ್ಟು – 10.14

ದೇವರ ಮೊರೆ ಹೋದ ಅಭ್ಯರ್ಥಿಗಳು!

ಇನ್ನು ಮತದಾನ ಆರಂಭವಾಗುತ್ತಿದ್ದಂತೆ ಇತ್ತ ಅಭ್ಯರ್ಥಿಗಳು ದೇವರ ಮೊರೆ ಹೋಗಿದ್ದಾರೆ. ಶಿಗ್ಗಾವಿ ಸವಣೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಭರತ್ ಬೊಮ್ಮಾಯಿ ಹಾಗೂ ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿಯವರು ಇಂದು ಶಿಗ್ಗಾವಿಗೆ ಮತದಾನಕ್ಕೆ ತೆರಳುವ ಮುನ್ನ ಹುಬ್ಬಳ್ಳಿಯ ಗಬ್ಬೂರು ಕ್ರಾಸ್ ಬಳಿ‌ ಇರುವ ಪಾರ್ಶ್ವ ಪದ್ಮಾಲಯ ಧಾಮ ಜೈನ ಮಂದಿರಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು.

ಅದೇ ರೀತಿಯಲ್ಲಿ ಚನ್ನಪಟ್ಟಣ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರು ಕೆಂಗಲ್ ಆಂಜನೇಯ ಸ್ವಾಮಿ ಸನ್ನಿಧಿಗೆ ಭೇಟಿ ನೀಡಿ ವಿಶೇಷ ಪೂಜೆಯನ್ನು ಸಲ್ಲಿಸಿದರು.

ಬೊಮ್ಮಾಯಿ, ಭರತ್ ಮತದಾನ

ಇನ್ನು ಶಿಗ್ಗಾವಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಭರತ್ ಬೊಮ್ಮಾಯಿ ಅವರು ಕ್ಷೇತ್ರದ ಸರ್ಕಾರಿ ಮಾದರಿ ಕನ್ನಡ ಗಂಡು ಮಕ್ಕಳ‌ ಶಾಲೆ, ನಂ‌1 ನಲ್ಲಿ‌ ಮತದಾನ ಮಾಡಿದರು. ಮತದಾನಕ್ಕೆ ಆಗಮಿಸಿದ ಭರತ್ ಬೊಮ್ಮಾಯಿಗೆ ಬಸವರಾಜ್ ಬೊಮ್ಮಾಯಿ ಸಾಥ್ ನೀಡಿದರು. 102 ಮತಗಟ್ಟೆಯಲ್ಲಿ ಮತದಾನಕ್ಕೆ ಆಗಮಿಸಿದ ಬಿಜೆಪಿ ಅಭ್ಯರ್ಥಿ ಭರತ್ ಸರತಿ ಸಾಲಿನಲ್ಲಿ ನಿಂತು ಮತದಾನ ಮಾಡಿದರು.

ಕಣದಲ್ಲಿ ಯಾರ್ಯಾರು?

ಕಣದಲ್ಲಿರುವ ಪ್ರಮುಖರು ಯಾರ್ಯಾರು?

ಚನ್ನಪಟ್ಟಣ ವಿಧಾನಸಭಾ ಕ್ಷೇತ್ರ

ಕಾಂಗ್ರೆಸ್ – ಸಿಪಿ ಯೋಗೇಶ್ವರ್

ಎನ್‌ ಡಿ ಎ – ನಿಖಿಲ್ ಕುಮಾರಸ್ವಾಮಿ

ಎಸ್‌ಡಿಪಿಐ – ಮುಹಮ್ಮದ್ ಫಾಸಿಲ್

ಶಿಗ್ಗಾವಿ ವಿಧಾನಸಭಾ ಕ್ಷೇತ್ರ

ಕಾಂಗ್ರೆಸ್ – ಯಾಸೀರ್ ಖಾನ್ ಪಠಾಣ್

ಬಿಜೆಪಿ – ಭರತ್ ಬೊಮ್ಮಾಯಿ

ಕೆಆರ್‌ ಎಸ್ – ರವಿಕೃಷ್ಣಾ ರೆಡ್ಡಿ

ಸಂಡೂರು ವಿಧಾನಸಭಾ ಕ್ಷೇತ್ರ

ಕಾಂಗ್ರೆಸ್ – ಇ ಅನ್ನಪೂರ್ಣ

ಬಿಜೆಪಿ – ಬಂಗಾರು ಹನುಮಂತು

Source : https://vijaykarnataka.com/news/karnataka/channapatna-shiggaon-and-sandur-by-election-here-is-the-new-updates/articleshow/115240368.cms

Leave a Reply

Your email address will not be published. Required fields are marked *