MS Dhoni: ಎಂಎಸ್ ಧೋನಿ ಸಿಕ್ಸ್ ಸಿಡಿಸಿದಾಗ ಪ್ರೇಕ್ಷಕ ಗ್ಯಾಲರಿಯಲ್ಲಿದ್ದ ಝೀವಾ ಏನು ಮಾಡಿದ್ರು ನೋಡಿ

MS Dhoni: ಎಂಎಸ್ ಧೋನಿ ಸಿಕ್ಸ್ ಸಿಡಿಸಿದಾಗ ಪ್ರೇಕ್ಷಕ ಗ್ಯಾಲರಿಯಲ್ಲಿದ್ದ ಝೀವಾ ಏನು ಮಾಡಿದ್ರು ನೋಡಿ
Ziva Dhoni and MS Dhini

16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ (IPL 2023) ಬುಧವಾರ ನಡೆದ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (CSK vs DC) ಭರ್ಜರಿ ಜಯ ಸಾಧಿಸಿತು. ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಆಯೋಜಿಸಿದ್ದ ಈ ಪಂದ್ಯದಲ್ಲಿ ಬ್ಯಾಟಿಂಗ್-ಬೌಲಿಂಗ್​ನಲ್ಲಿ ಮಿಂಚಿದ ಸಿಎಸ್​ಕೆ 27 ರನ್​ಗಳ ಗೆಲುವು ಕಂಡಿತು. ಈ ಮೂಲಕ ಧೋನಿ (MS Dhoni) ಪಡೆ ಆಡಿದ 12 ಪಂದ್ಯಗಳ ಪೈಕಿ 7 ರಲ್ಲಿ ಗೆಲುವು, ನಾಲ್ಕರಲ್ಲಿ ಸೋಲು ಕಂಡು 15 ಅಂಕ ಸಂಪಾದಿಸಿ ಪಾಯಿಂಟ್ ಟೇಬಲ್​ನಲ್ಲಿ ದ್ವಿತೀಯ ಸ್ಥಾನದಲ್ಲಿದೆ. ಇದರ ಜೊತೆಗೆ ತನ್ನ ಪ್ಲೇ ಆಫ್ ಹಾದಿಯನ್ನು ಮತ್ತಷ್ಟು ಸುಗಮಗೊಳಿಸಿದೆ.

ಪ್ರತಿ ಸೀಸನ್​ನಲ್ಲೂ ತಂದೆಯ ಸಿಎಸ್​ಕೆ ತಂಡಕ್ಕೆ ಸಪೋರ್ಟ್ ನೀಡುವ ಝೀವಾ ಧೋನಿ ಈ ಬಾರಿ ಕೂಡ ಮೈದಾನದಲ್ಲಿ ಹಾಜರಿದ್ದಾರೆ. ಅಷ್ಟೇ ಅಲ್ಲದೆ ಧೋನಿಯ ಪತ್ನಿ ಸಾಕ್ಷಿ ಧೋನಿ ಕೂಡ ಪಂದ್ಯ ವೀಕ್ಷಿಸಲು ಬರುತ್ತಿದ್ದಾರೆ. ಡೆಲ್ಲಿ ವಿರುದ್ಧದ ಪಂದ್ಯದಲ್ಲೂ ಇವರಿಬ್ಬರು ಕಾಣಿಸಿಕೊಂಡಿದ್ದಾರೆ. ಅದರಲ್ಲೂ ಧೋನಿ ಸಿಕ್ಸ್ ಸಿಡಿಸುವಾಗ ಝೀವಾ ಸೆಲೆಬ್ರೇಟ್ ಮಾಡಿದ್ದು, ಇದರ ವಿಡಿಯೋ ಸಖತ್ ವೈರಲ್ ಆಗುತ್ತಿದೆ.

 

8ನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ಗೆ ಬಂದ ಧೋನಿ ಕೇವಲ 9 ಎಸೆತಗಳಲ್ಲಿ 1 ಫೋರ್, 2 ಭರ್ಜರಿ ಸಿಕ್ಸ್ ಸಿಡಿಸಿ 20 ರನ್ ಚಚ್ಚಿದರು. 19ನೇ ಓವರ್​ನ ಖಲೀಲ್ ಅಹ್ಮದ್ ಅವರ ಬೌಲಿಂಗ್​ನಲ್ಲಿ ಧೋನಿ ಮೊದಲ ಸಿಕ್ಸರ್ ಸಿಡಿಸಿದರು. ಸ್ಲೋ ಬಾಲ್ ಅನ್ನು ಗುರುತಿಸಿದ ಧೋನಿ ಡೀಪ್ ಮಿಡ್ ವಿಕೆಟ್ ಕಡೆ ಸಿಕ್ಸ್ ಬಾರಿಸಿದರು. ಈ ಸಂದರ್ಭ ಝೀವಾ ಧೋನಿ ಕುಣಿದು ಸಂಭ್ರಮಿಸಿದ್ದಾರೆ. ಇವರ ಜೊತೆಗೆ ಸಾಕ್ಷಿ ಕೂಡ ಚಪ್ಪಾಳೆ ತಟ್ಟುತ್ತಾ ಸಪೋರ್ಟ್ ಮಾಡಿದ್ದಾರೆ. ಇದರ ವಿಡಿಯೋ ಎಲ್ಲೆಡೆ ಹರಿದಾಡುತ್ತಿದೆ.

IPL 2023: ಹೀಗಾದ್ರೆ RCB ಪ್ಲೇಆಫ್ ಪ್ರವೇಶಿಸುವುದು ಖಚಿತ

 

ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ 20 ಓವರ್​ಗಳಲ್ಲಿ 8 ವಿಕೆಟ್ ನಷ್ಟಕ್ಕೆ 167 ರನ್ ಕಲೆಹಾಕಿತು. ಈ ಬಾರಿ ಸಿಎಸ್​ಕೆ ಉತ್ತಮ ಆರಂಭ ಪಡೆದುಕೊಳ್ಳಲಿಲ್ಲ. ಜೊತೆಗೆ ನಿಧಾನಗತಿಯಲ್ಲಿ ಬ್ಯಾಟ್ ಬೀಸಿತು. ಡೆವೊನ್ ಕಾನ್ವೆ 10 ರನ್, ರುತುರಾಜ್ ಗಾಯಕ್ವಾಡ್ 24, ಮೊಯೀನ್ ಅಲಿ 7, ಅಜಿಂಕ್ಯಾ ರಹಾನೆ 21 ರನ್​ಗೆ ಔಟಾದರು. ಶಿವಂ ದುಬೆ 25 ಹಾಗೂ ರಾಯುಡು 23 ರನ್​ಗಳ ಕೊಡುಗೆ ನೀಡಿದರು. ರವೀಂದ್ರ ಜಡೇಜಾ (21) ಹಾಗೂ ಎಂಎಸ್ ಧೋನಿ (20) ಕೊನೆಯ ಹಂತದಲ್ಲಿ ಕೊಂಚ ರನ್ ಕಲೆಹಾಕಿದರು. ಡೆಲ್ಲಿ ಪರ ಮಿಚೆಲ್ ಮಾರ್ಶ್ 3 ವಿಕೆಟ್ ಪಡೆದರು.

ಸಾಧಾರಣ ಟಾರ್ಗೆಟ್ ಬೆನ್ನಟ್ಟಿದ ಡೆಲ್ಲಿ ಕೂಡ ಬ್ಯಾಟಿಂಗ್ ಮಾಡಲು ಪರದಾಡಿತು. ತಂಡದ ಪರ ರಿಲೀ ರುಸ್ಸೂ 37 ಎಸೆತಗಳಲ್ಲಿ 35 ಮತ್ತು ಮನೀಶ್ ಪಾಂಡೆ 29 ಎಸೆತಗಳಲ್ಲಿ 27 ರನ್ ಗಳಿಸಿದ್ದೇ ಹೆಚ್ಚು. ನಾಯಕ ವಾರ್ನರ್ ಸೊನ್ನೆ ಸುತ್ತಿದರೆ, ಪಿಲಿಲ್ ಸಾಲ್ಟ್ 17, ಅಕ್ಷರ್ ಪಟೇಲ್ 21 ರನ್ ಗಳಿಸಿದರು. ಡೆಲ್ಲಿ 20 ಓವರ್​ಗಳಲ್ಲಿ 8 ವಿಕೆಟ್ ನಷ್ಟಕ್ಕೆ 140 ರನ್ ಗಳಿಸಿ ಸೋಲಿಗೆ ಶರಣಾಯಿತು. ಸಿಎಸ್​ಕೆ ಪರ ಮಹೀಶಾ ಪಥಿರನ 3 ವಿಕೆಟ್ ಕಿತ್ತರೆ, ದೀಪಕ್ ಚಹರ್ 2 ವಿಕೆಟ್ ಪಡೆದರು.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

source https://tv9kannada.com/sports/cricket-news/ms-dhonis-wife-sakshi-and-daughter-ziva-celebrating-when-csk-captain-hits-sixes-during-csk-vs-dc-match-viral-video-vb-575203.html

Leave a Reply

Your email address will not be published. Required fields are marked *