![](https://samagrasuddi.co.in/wp-content/uploads/2024/12/a1b2ab2d-7e25-4ae7-a29a-9bf49d227d4d-300x199.jpg)
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಚಿತ್ರದುರ್ಗ, ಡಿ. 05: ಯಾವುದೇ ಕಾರಣಕ್ಕೂ ರೈತರ ಭೂಮಿ ಕದಿಯಲು ಬಿಡುವುದಿಲ್ಲ. ಮತ ಬ್ಯಾಂಕ್‍ಗಾಗಿ ಈ ರಾಜಕಾರಣ ಮಾಡುತ್ತಿದ್ದಿರಿ ಇದಕ್ಕೆ ನಾವು ಬಿಡುವುದಿಲ್ಲ. ಕಾಂಗ್ರೇಸ್ ಭೂ ಗಳ್ಳರ ಸರ್ಕಾರ, ಗೋಮಾಳ ಭೂಮಿ ಹೊಡೆಯುವ ಕೆಲಸ ಮಾಡುತ್ತಿದೆ ಎಂದು ವಿಧಾನ ಪರಿಷತ್
ವಿರೋದಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಕಾಂಗ್ರೆಸ್ ಪಕ್ಷದ ವಿರುದ್ದ ಕಿಡಿ ಕಾರಿದ್ದಾರೆ.
ಚಿತ್ರದುರ್ಗ ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ರಾಜ್ಯದಲ್ಲಿ ವಕ್ಫ್ ಬೋರ್ಡ್ ವಿರುದ್ದ ಬಿಜೆಪಿ
ಹೋರಾಟ ನಡೆಸುತ್ತಿದೆ. ವಕ್ಫ ಆಸ್ತಿಗಳೇ ಬೇರೆ, ಯಾರಾದರೂ ಕೊಡುಗೆ ದಾನ ಕೊಟ್ಟಿದ್ದರೆ ಮಾತ್ರ ಅವರ ಆಸ್ತಿ ಆಗಿರುತ್ತದೆ. ಆದರೆ
ರಾಜ್ಯದಲ್ಲಿ ಮಠಗಳು, ಶಾಲೆ ಕಾಲೇಜುಗಳ ಆಸ್ತಿ ವಕ್ಫ್ ನಲ್ಲಿ ಸೇರಿದೆ. 1954 ರಲ್ಲಿ ವಕ್ಫ ಹುಟ್ಟಿದ್ದು, 10 ನೇ ಶತಮಾನದಲ್ಲಿ ಎಲ್ಲಿ ಇತ್ತು.
ಭಾರತದಲ್ಲಿ ಇಸ್ಲಾಂ ಇರಲಿಲ್ಲ. ಯಾರ ಪ್ರಾಣ ತಿನ್ನಲು ಕಾಂಗ್ರೇಸ್ ಇದನ್ನು ಹುಟ್ಟಿ ಹಾಕಿದರು. ಅವರ ಸೃಷ್ಟಿ ನಾವು ಮುಳುಗಿದ್ದೆವೆ.
ಕಾಶ್ಮಿರದಲ್ಲಿ ಮೀಸಲಾತಿ ಸಿಗಬೇಕು ಎಂಬ ಚಿಂತನೆ ಕಾಂಗ್ರೇಸ್‍ಗೆ ಇಲ್ಲ ಎಂದರು.
ರಾಜ್ಯದ ಬಡವರ ರೈತರ ಆಸ್ತಿಗಳನ್ನು ವಕ್ಫ್ ಗೆ ಸೇರಿಸಿದ್ದಾರೆ. ಯಾರು ಇದನ್ನು ಮಾಡಿದ್ದು ? ಕಾಂಗ್ರೇಸ್ ಯಾಕೆ ಮಾಡಿತು ಇದನ್ನು
? ವಕ್ಫ್ ನಮ್ಮ ಆಸ್ತಿ ಎಂದು ಘೊಇಷಣೆ ಮಾಡಿದರೆ ನ್ಯಾಯಾಲಯಕ್ಕೆ ಹೋಗಿ ಕೇಳುವ ಹಕ್ಕಿಲ್ಲ. ಇಂತಹ ಸರ್ವಾಧಿಕಾರವನ್ನು
ಯಾರು ಕೊಟ್ಟಿದ್ದು ವಕ್ಫಗೆ ? ಸಿಎಂ ಆರ್‍ಟಿಸಿ ಯಲ್ಲಿ ಇರುವ ವಕ್ಫ ಹೆಸರನ್ನು ತೆಗೆಯುತ್ತೇವೆ ಎಂದು ಹೇಳುತ್ತಾರೆ. ಅಲ್ಲನ ಯಾರು
ಒರಾರ್ಥನೆ ಮಾಡುತ್ತಾರೋ ಅವರು ಒಳ್ಳೆಯವರು, ಬೇರೆ ಎಲ್ಲ ಸೈತಾನರು ಎಂದು ಸಚಿವ ಜಮೀರ್ ಜನರನ್ನು ಎತ್ತಿ ಕಟ್ಟುವ
ಕೆಲಸವನ್ನು ಮಾಡಿದ್ದಾರೆ ಎಂದು ಆರೋಪಿಸಿದರು.
ಜಗ್ಗಲ್ಲ ಬಗ್ಗಲ್ಲ ಎನ್ನುವ ಸಿಎಂ ರಾತ್ರೋ ರಾತ್ರಿ ಬಗ್ಗಿ ತಮ್ಮ ಕೆಲಸ ಮಾಡಿಕೊಳ್ಳುತ್ತಾರೆ. ಕಾಳಜಿ ಇದ್ದರೆ 1974 ಗೆಜೆಟ್ ರದ್ದು ಪಡಿಸಿ,
ಸರ್ವೆ ನಂ. 166 ರಲ್ಲಿ ಪಿಂಜಾರರು ಒಂದೆ ಮನೆ ಇದೆ. ಅವರನ್ನು ಉಳಲು 5.20 ಎಕರೆ ಜಮೀನು ಬೇಕಿದೆಯಾ ? ನೆಮ್ಮದಿಯಾಗು
ಜನರು ಬಾಳ ಬಾರದು ಇದು ಕಾಂಗ್ರೇಸ್ ಸಂಸ್ಕ್ರತಿ. ಚಳ್ಳಕೆರೆಯಲ್ಲಿ ಕಬಸ್ತಾನ್ ಜಾಗಕ್ಕೆ ಹೊಂದಿಕೊಂಡಿರುವ ಜಾಗವನ್ನ ವಕ್ಫಗೆ
ಸೇರಿಸೆ ಎಂದು ವಕ್ಫ್ ಗೆ ಸೇರಿಸುವಂತೆ ಪತ್ರ ಬರೆಯುತ್ತಾರೆ. ಇದನ್ನು ನ್ಯಾಯಾಲಯಕ್ಕೆ ಹೋಗಿ ಕೇಳುವ ಆಗಿಲ್ಲ. ಬಿಜೆಪಿ ಎಲ್ಲರ ಪರ
ಹೋರಾಟ ಮಾಡಿ ಕೆಲಸ ಮಾಡುತ್ತಿದೆ. ಪಿಎಂ ಜಿಪಿಜಿ ಕಮಿಟಿ ಮಾಡಿದ್ದು, ಆ ಸದನ ಸಮಿತಿಗೆ ನಾವು ವರದಿ ಕೊಡಲಿದ್ದೆವೆ.ನೀವು
ಗೊಮಾಳಕ್ಕೆ ಕೈ ಹಾಕಿದರೆ ನಾವು ನಿಮ್ಮ ಗೋಮಾಳೆಗೆ ಕೈ ಹಾಕುತ್ತೆವೆ. ರೈತರ ಭೂಮಿ ಹೊಡೆಯುವ ಕೆಲಸವನ್ನು ನಿಲ್ಲಿಸಿ ಎಂದು
ಕಾಂಗ್ರೆಸ್ ಪಕ್ಷದ ವಿರುದ್ದ ಹರಿ ಹಾಯ್ದರು.
ಗೋಷ್ಟಿಯಲ್ಲಿ ಸುನೀಲ್‍ಕುಮಾರ್, ನಾರಾಯಣಸ್ವಾಮಿವೈ.ಎ.ಶಾಸಕ ಎಂ.ಚಂದ್ರಪ್ಪ,ಮಾಜಿ ಶಾಸಕ ತಿಪ್ಪೇಸ್ಚಾಮಿ, ಎ.ಮುರುಳಿ,
ಕುಮಾರಸ್ವಾಮಿ, ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್ ವಕ್ತಾರ ನಾಗಾರಜ ಬೇದ್ರೇ, ದಗ್ಗೆ ಶಿವಪ್ರಕಾಶ್, ಛಲವಾದಿ
ತಿಪ್ಪೇಸ್ವಾಮಿ, ಮಾಧುರಿ ಗಿರೀಶ್, ಸೇರಿದಂತೆ ಇತರರು ಉಪಸ್ಥಿತರಿದ್ದರು.