ಭಾವಸಾರ ಕ್ಷತ್ರಿಯ ಸಾಂಸ್ಕೃತಿಕ ವೇದಿಕೆಯಿಂದ ಛತ್ರಪತಿ ಶಿವಾಜಿ ಜಯಂತಿ ಆಚರಣೆ.
ವರದಿ ಮತ್ತು ಫೋಟೋ ಕೃಪೆ, ರವಿ ಕೆ.ಅಂಬೇಕರ್
ಚಿತ್ರದುರ್ಗ: ಫೆ.,20.
ಛತ್ರಪತಿ ಶಿವಾಜಿ ಮಹಾರಾಜರು ತಮ್ಮ ಮಾತೃಭಕ್ತಿ ಮತ್ತು ದೇಶಭಕ್ತಿಯಿಂದ ವಿಶ್ವಪ್ರಸಿದ್ಧರಾಗಿದ್ದಾರೆ. ಇವರ ಜೀವನವು ಯುವಕರಿಗೆ ಎಂದೆಂದಿಗೂ ಆದರ್ಶವಾದದ್ದು ಎಂದು ಚಿತ್ರದುರ್ಗ ಕೋಟೆ ವಾಯುವಿಹಾರಿಗಳ ಸಂಘದ ಅಧ್ಯಕ್ಷ ಸತ್ಯಣ್ಣ ಆರ್ ಅಭಿಪ್ರಾಯ ಪಟ್ಟಿದ್ದಾರೆ.
ಛತ್ರಪತಿ ಶಿವಾಜಿ ಮಹಾರಾಜರ 396ನೇ ಜಯಂತೋತ್ಸವದ ಅಂಗವಾಗಿ ಭಾವಸಾರ ಕ್ಷತ್ರಿಯ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಚಿತ್ರದುರ್ಗ ಹಾಗೂ ಭಾರತೀಯ ಯೋಗ ಶಿಕ್ಷಣ ಸಂಸ್ಥೆ ಚಿತ್ರದುರ್ಗ ಇವರ ಸಂಯುಕ್ತಾಶ್ರಯದಲ್ಲಿ ಗುರುವಾರ ಸಂಜೆ ನಗರದ ಚಿಕ್ಕಪೇಟೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಶಿವಾಜಿಯವರ ತಾಯಿ ಜೀಜಾಬಾಯಿ ಮಗನಿಗೆ ಚಿಕ್ಕ ವಯಸ್ಸಿನಿಂದಲೇ ದೇಶಪ್ರೇಮ ಮತ್ತು ಧರ್ಮದ ಬೀಜ ಬಿತ್ತಿದರು ತಾಯಿಯ ಮಾರ್ಗದರ್ಶನವೇ ಶಿವಾಜಿಯನ್ನು ಮಹಾನ್ ನಾಯಕನನ್ನಾಗಿ ಮಾಡಿತು ಎಂದು ತಿಳಿಸಿದರು.
ಇದೇ ಸಂಧರ್ಭದಲ್ಲಿ ಸಂಸ್ಥೆಯ ನಿರ್ದೇಶಕ ನಿವೃತ್ತ ಪೋಲಿಸ್ ಅಧಿಕಾರಿ ಮಲ್ಲಿಕಾರ್ಜುನಚಾರ್ ಮಾತನಾಡಿ ಶಿವಾಜಿಯ ಧೈರ್ಯ, ಯುದ್ಧತಂತ್ರಗಳು ಮತ್ತು ಸಾಮಾಜಿಕ ಸಾಮರಸ್ಯಕ್ಕಾಗಿ ಜಾಗತಿಕ ಮಟ್ಟದಲ್ಲಿ ಪರಿಚಿತರಾಗಿದ್ದಾರೆ. ಭಾರತೀಯರಲ್ಲಿ ದೇಶಭಕ್ತಿಯ ಪ್ರತೀಕವಾಗಿ ಪೂಜ್ಯರಾಗಿರುವರು ಶಿವಾಜಿಯ ಧೈರ್ಯ, ಯುದ್ಧತಂತ್ರಗಳು ಮತ್ತು ಸಾಮಾಜಿಕ ಸಾಮರಸ್ಯಕ್ಕಾಗಿ ಜಾಗತಿಕ ಮಟ್ಟದಲ್ಲಿ ಪರಿಚಿತರಾಗಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮ ಆಯೋಜಕ ಭಾರತೀಯ ಯೋಗ ಶಿಕ್ಷಣ ಸಂಸ್ಥೆ ಅಧ್ಯಕ್ಷ ರವಿ ಕೆ.ಅಂಬೇಕರ್ ಶಿವಾಜಿ ಮಹಾರಾಜರ ಸರ್ವಧರ್ಮ ಪ್ರೇಮದ ಬಗ್ಗೆ ತಿಳಿಸುತ್ತಾ ಶಿವಾಜಿ ಮುಸ್ಲಿಮರು, ದಲಿತರು ಮತ್ತು ಬುಡಕಟ್ಟು ಜನಾಂಗಗಳೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದಿದ್ದರು ಮೊಘಲರ ಅತ್ಯಾಚಾರಗಳ ವಿರುದ್ಧ ಹೋರಾಡಿದರೂ, ತನ್ನ ಪ್ರಜೆಗಳೆಲ್ಲರನ್ನು ಸಮಷ್ಟಿಭಾವದಿಂದ ಪ್ರೀತಿಸಿದರು. ಭಕ್ತಿ ಮತ್ತು ಕಾಯಕ ಪಂಥಗಳಿಂದ ಪ್ರಭಾವಿತರಾಗಿ, ಜಾತ್ಯಾತೀತ ಪರಿಕಲ್ಪನೆಯಲ್ಲಿ ಜೀವಿಸಿದ್ದರು ಎಂದು ಹೇಳಿದರು.
ಯೋಗ ಶಿಕ್ಷಕಿಯರಾದ ಶ್ರೀಮತಿ ವಸಂತಲಕ್ಷ್ಮೀ ಮಂಜುಳಾ ಪ್ರಾರ್ಥನಗೀತೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮದಲ್ಲಿ ಶಿವಾಜಿ ಮಹಾರಾಜರ ಪುತ್ತಳಿಗೆ ಪುಷ್ಪನಮನ ಸಲ್ಲಿಸಲಾಯಿತು.
ಕಾರ್ಯಕ್ರಮದಲ್ಲಿ ಜವಳಿಉದ್ಯಮಿ ಜಾಕೀರ್ ಹುಸೇನ್, ಆರೋಗ್ಯ ನಿರೀಕ್ಷಣಾಧಿಕಾರಿ ಮಹೇಶ್ ಡಿ.ಹಾಗೂ ಇನ್ನಿತರರು ಪಾಲ್ಗೊಂಡಿದ್ದರು.