
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಚಿತ್ರದುರ್ಗ ಸೆ. 9 : ಟಿಪ್ಪು ಸ್ಪೋಟ್ಸ್ ಕ್ರಿಕೆಟ್ ಕ್ಲಬ್ (ರಿ), ಚಿತ್ರದುರ್ಗ ವತಿಯಿಂದ ಬಡಾಮಖಾನ್‌ನ ಚಿಸ್ತಿಯಾ ಶಾದಿ ಮಹಲ್‌ನಲ್ಲಿ ಬಾಲ್ಯ ವಿವಾಹ ನಿಷೇಧ ಕಾಯ್ದೆ ಹಾಗೂ ಮಹಿಳೆಯರ ಮಕ್ಕಳ ಅನೈತಿಕ ಸಾಗಾಣಿಕೆಯ ತಡೆಗಟ್ಟುವ ಕುರಿತು ಧಾರ್ಮಿಕ ಮುಖಂಡರುಗಳಿಂದ
ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ಸೆ. 10ರ ಮಂಗಳವಾರ 10-30 ರಿಂದ ನಡೆಯಲಿದೆ.
ಈ ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರಾದ ಶ್ರೀಮತಿ ಭಾರತಿ ಬಣಕರ್, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶ್ರೀಮತಿ ವೀಣಾ.ಎ.ಎಂ, ಜಿಲ್ಲಾ ವಕ್ಫ್ ಮಂಡಳಿಯ ಜಿಲ್ಲಾ ವಕ್ಫ್ ಅಧಿಕಾರಿ, ಅಂಜದ್ ಮೊಹಿನ್, ನಗರಾಭಿವೃದ್ಧಿ
ಪ್ರಾಧಿಕಾರದ ಮಾಜಿ ಅಧ್ಯಕ್ಷರಾದ ಆರ್.ಕೆ.ಸರ್ದಾರ್, ಜಿಲ್ಲಾ ಕಾಂಗ್ರೆಸ್ ಸಮಿತಿ ಹಾಗೂ ಚಿತ್ರದುರ್ಗ ನಗರಾಭಿವೃದ್ಧಿ ಪ್ರಾಧಿಕಾರದ
ಅಧ್ಯಕ್ಷರಾದ ಎಂ.ಕೆ.ತಾಜ್‌ಪೀರ್, ಜಿಲ್ಲಾ ವಕ್ಫ್ ಮಂಡಳಿಯ ಅಧ್ಯಕ್ಷರಾದ ಇಕ್ಬಲ್ ಹುಸೇನ್, ನ್ಯಾಯಾವಾದಿ ಅಬ್ದುಲ್ ಜುಲ್‌ಪಕರ್
ಅಹ್ಮದ್, ನಗರಸಭಾ ಸದಸ್ಯರಾದ ಸೈಯದ್ ನಸ್ರುರುಲ್ಲಾ, ಮಹಮ್ಮದ್ ಜೈಲಾದ್ದಿನ್, ಫಕೃದ್ದೀನ್, ನಿವೃತ್ತ ಡಿ.ವೈ.ಎಸ್.ಪಿ
ರೆಹಮಾನ್‌ಸಾಬ್ ಹಾಗೂ ಸೈಯದ್ ಇಶಾಕ್ ಭಾಗವಹಿಸಲಿದ್ದಾರೆ.