ಸಮಯಕ್ಕೆ ಸರಿಯಾಗಿ ಚುಚ್ಚುಮದ್ದು ಕೊಡಿಸಿ ಮಕ್ಕಳ ಆರೋಗ್ಯ ಕಾಪಾಡಿ. _ಪರ್ವಿನ್ ಬಾನು, ಆರೋಗ್ಯ ಸುರಕ್ಷಣಾಧಿಕಾರಿ.

ಚಿತ್ರದುರ್ಗ/ಹಿರೇಗುಂಟನೂರು, ಜ.17 : ಮಗುವಿನ ಹುಟ್ಟಿನಿಂದ ಮಕ್ಕಳ ಆರೋಗ್ಯಕ್ಕೆ ರೋಗ ನಿರೋಧಕ ಚುಚ್ಚುಮದ್ದು ಅವಶ್ಯಕ. ಎರಡು ವರ್ಷದವರೆಗೆ ಕಾಲ ಕಾಲಕ್ಕೆ ತಪ್ಪದೆ ಲಸಿಕೆ ಹಾಕಿಸಬೇಕು. ಇದು ಮಗುವಿನ ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸುವುದರ ಜೊತೆಗೆ ದೇಹದ ಅಂಗ ವೈಕಲ್ಯತೆ ಸೇರಿದಂತೆ ಮಕ್ಕಳಿಗೆ ಕಾಡಬಹುದಾದ ಅನೇಕ ರೋಗಗಳನ್ನು ಇದು ತಡೆಗಟ್ಟಲು ಸಹಾಯ ಮಾಡುತ್ತವೆ ಆದ್ದರಿಂದ ವೈದ್ಯರ ಸಲಹೆ ಪಡೆದು ಕಾಲಕಾಲಕ್ಕೆ ಮಕ್ಕಳಿಗೆ ಚುಚ್ಚುಮದ್ದುಗಳನ್ನು ಕೊಡಿಸಿ ಎಂದು ಹಿರೇಗುಂಟನೂರು ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯ ಸುರಕ್ಷಣಾಧಿಕಾರಿ ಪರ್ವಿನ್ ಬಾನು ಸಲಹೆ ನೀಡಿದ್ದಾರೆ.
ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಸರ್ಕಾರಿ ಪ್ರಾಥಮಿಕ ಆರೋಗ್ಯ ಮತ್ತು ಕ್ಷೇಮ ಕೇಂದ್ರ ಹಿರೇಗುಂಟನೂರು ವತಿಯಿಂದ ಚಿತ್ರದುರ್ಗ ತಾಲ್ಲೂಕಿನ ಹುಣ್ಸೆಕಟ್ಟೆ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಶುಕ್ರವಾರ ಏರ್ಪಡಿಸಿದ್ದ ಮಕ್ಕಳ ಚುಚ್ಚುಮದ್ದು ಕಾರ್ಯಕ್ರಮದಲ್ಲಿ ಅವರು ಬಾಣಂತಿ ಸ್ತ್ರೀಯರನ್ಜುದ್ದೇಶಿಸಿ ಅವರು ಮಾತನಾಡಿದರು.
ಇದೇ ವೇಳೆ ಗ್ರಾಮಸ್ಥರ ರಕ್ತದೊತ್ತಡ ಮತ್ತು ರಕ್ತಪರೀಕ್ಷೆ ನಡೆಸಿ ಮಾತನಾಡಿದ ಆರೋಗ್ಯ ನಿರೀಕ್ಷಣಾಧಿಕಾರಿ ಪುಟ್ಟುಸ್ವಾಮಿ ಒಳ್ಳೆಯ ಆರೋಗ್ಯವು ಸಮೃದ್ಧವಾದ ಜೀವನಕ್ಕೆ ಅತ್ಯಗತ್ಯ. ಗ್ರಾಮಸ್ಥರು ತಮ್ಮ ಆರೋಗ್ಯದ ಬಗ್ಗೆ ಸದಾ ಕಾಳಜಿ ವಹಿಸಬೇಕು ಯಾವುದೇ ಆರೋಗ್ಯ ಸಮಸ್ಯೆ ಕಂಡುಬಂದರು ಹತ್ತಿರದ ವೈದ್ಯರ ಬಳಿ ಚಿಕಿತ್ಸೆ ಪಡೆದು ತಮ್ಮ ಆರೋಗ್ಯ ಕಾಪಾಡಿಕೊಳ್ಳಬೇಕು ಗ್ರಾಮಸ್ಥರ ಆರೋಗ್ಯ ಸುಧಾರಣೆಗಾಗಿ ಆರೋಗ್ಯ ಇಲಾಖೆಯ ಸಿಬ್ಬಂದಿವರ್ಗವು ಸದಾ ನಿಮ್ಮೊಟ್ಟಿಗೆ ಒಟ್ಟಾಗಿ ಇರುತ್ತದೆ ನಾವು ಎಲ್ಲರೂ ಒಟ್ಟಾಗಿ ಸಮರ್ಥ ,ಸಶಕ್ತ ಮತ್ತು ಆರೋಗ್ಯವಂತ ಭಾರತ ನಿರ್ಮಾಣ ಮಾಡಬೇಕು.ಎಂದು ಹೇಳಿದರು.
ಇದೇ ಸಂಧರ್ಭದಲ್ಲಿ ಯೋಗ ತರಬೇತುದಾರ ರವಿ ಅಂಬೇಕರ್ ಗ್ರಾಮಸ್ಥರಿಗೆ ಯೋಗ ತರಬೇತಿ ನೀಡಿದರು. ಆಶಾ ಕಾರ್ಯಕರ್ತೆ ಸಿದ್ಧಮ್ಮ, ಅಂಗನವಾಡಿ ಶಿಕ್ಷಕಿ ಗೀತಮ್ಮ, ಸಹಾಯಕಿ ಕಾವ್ಯಶ್ರೀ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.