ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಚಿತ್ರದುರ್ಗ ಫೆ. 26 ನಗರದ ಪಾರ್ಶ್ವನಾಥ ವಿದ್ಯಾ ಸಂಸ್ಥೆಯ ವತಿಯಿಂದ ನಡೆಯುತ್ತಿರುವ ಎಲ್.ಕೆ.ಜಿ.ಮತ್ತು ಯು.ಕೆ.ಜಿ.ಯ ಮಕ್ಕಳ ಹಬ್ಬವನ್ನು ನಗರದ ರೂಪವಾಣಿ ರಸ್ತೆಯಲ್ಲಿನ ಪಾಶ್ರ್ವನಾಥ ಭವನದಲ್ಲಿ ನಿನ್ನೆ ಸಂಜೆ ನಡೆಸಲಾಯಿತು.

ಸಮಾರಂಭದಲ್ಲಿ ಭಾಗವಹಿಸಿದ್ದ ಪಾಶ್ರ್ವನಾಥ್ ವಿದ್ಯಾ ಸಂಸ್ಥೆಯ ಅಧ್ಯಕ್ಷರಾದ ಬಾಬುಲಾಲ್‍ಜೈನ್ ಮಾತನಾಡಿ ನಮ್ಮ ಶಾಲೆಯಲ್ಲಿ
575 ಮಕ್ಕಳು ವಿದ್ಯಾಭ್ಯಾಸವನ್ನು ಮಾಡುತ್ತಿದ್ದು ಇವರಿಗೆ ಪಠ್ಯದ ಜೊತೆಗೆ ಕ್ರೀಡೆ, ಸಂಸ್ಕøತಿಕ ಚಟುವಟಿಕೆಗಳನ್ನು ಸಹಾ
ಕಲಿಸಲಾಗುತ್ತಿದೆ. ಇದರೊಂದಿಗೆ ಸಾಮಾಜಿಕ ಅರಿವನ್ನು ಸಹಾ ಮೂಡಿಸಲಾಗುತ್ತಿದೆ. ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು ಈ
ಹಿನ್ನಲೆಯಲ್ಲಿ ಮಕ್ಕಳಿಗೆ ಉತ್ತಮವಾದ ಸಂಸ್ಕಾರವನ್ನು ಶಾಲೆಯಲ್ಲಿ ಕಲಿಸಲಾಗುತ್ತಿದೆ, ನಮ್ಮ ರಾಷ್ಟ್ರೀಯ ದಿನಾಚರಣೆಗಳನ್ನು
ಹಾಗೂ ಹಬ್ಬಗಳನ್ನು ಸಹಾ ಮಕ್ಕಳಿಂದಲೇ ಮಾಡಿಸಿ ಅದರ ಅರ್ಥವನ್ನು ತಿಳಿಸಲಾಗುತ್ತದೆ.ಈ ವರೆಗೂ ಹಿಂದಿಯಲ್ಲಿ ಭೋಧನೆ ಇದ್ದ
ಶಾಲೆಯನ್ನು ಈಗ ಆಂಗ್ಲ ಭಾಷಾ ಶಾಲೆಯನ್ನಾಗಿ ಪರಿವರ್ತನೆ ಮಾಡಲಾಗಿದೆ ಎಂದರು.

ಪಾಶ್ರ್ವನಾಥ್ ವಿದ್ಯಾಸಂಸ್ಥೆಯ ನಿರ್ದೆಶಕರಾದ ಜವೇರಿಲಾಲ್‍ರವರು ಶಾಲಾ ಅಭೀವೃದ್ದಿಯ ಬಗ್ಗೆ ಪೋಷಕರಿಗೆ ಮಾಹಿತಿಯನ್ನು
ನೀಡಿದರು.ಇದೇ ಸಂದರ್ಭದಲ್ಲಿ ಎಲ್.ಕೆ.ಜಿ.ಹಾಗೂ ಯು.ಕೆ.ಜಿಯಲ್ಲಿ ಉತ್ತಮವಾದ ಅಂಕಗಳನ್ನು ಪಡೆದ ಮಕ್ಕಳನ್ನು
ಗೌರವಿಸಲಾಯಿತು, ನಂತರ ಮಕ್ಕಳಿಂದ ವಿವಿಧ ರೀತಿಯ ಸಾಂಸ್ಕøತಿಕ ಕಾರ್ಯಕ್ರಮಗಳು ಪ್ರದರ್ಶನ ಮಾಡುವುದರ ಮೂಲಕ
ತಮ್ಮ ಪ್ರತಿಭೆಯನ್ನು ಪ್ರದರ್ಶನ ಮಾಡಿದರು.
ಈ ಸಂದರ್ಭದಲ್ಲಿ ಪಾಶ್ರ್ವನಾಥ್ ವಿದ್ಯಾ ಸಂಸ್ಥೆಯ ಸಲಹಾ ಸಮಿತಿಯ ಸದಸ್ಯರಾದ ಪುಕರಾಜ್ ಜೈನ್ ಕಾರ್ಯಕ್ರಮವನ್ನು
ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಸಲಹಾ ಸಮಿತಿ ಸದಸ್ಯರಾದ ಗೀಸುಲಾಲ್,ಉಪಾಧ್ಯಕ್ಷರಾದ ಉತ್ತಮಚಂದ್‍ಸುರಾನ,
ಕಾರ್ಯದರ್ಶಿ ಸುರೇಶ್‍ಕುಮಾರ್, ನಿರ್ದೆಶಕರಾದ ವಿಫುಲ್ ಜೈನ್, ಮಹಾವೀರ್ ಜೈನ್, ಆಶಿಷಿ ಕುಮಾರ್, ಉದ್ಯಮಿ
ರಾಜೇಶ್‍ಜೈನ್, ಶಾಲಾಮುಖ್ಯೋಪಾಧ್ಯಯರಾದ ನಾಜಿಮ್ ಭಾಗವಹಿಸಿದ್ದರು.
ವಿಜಯಲಕ್ಷೀ ಸ್ವಾಗತಿಸಿದರು. ಆಯಿಷ ಕಾರ್ಯಕ್ರಮ ನಿರೂಪಿಸಿದರು.ಗೀತಾ ವಂದಿಸಿದರು. ಶಾಂತಕುಮಾರಿ ಶಾಲಾ ವಾರ್ಷಿಕ
ವರದಿಯನ್ನು ವಾಚಿಸಿದರು.