Chinnaswami Pitch Report: ಚಿನ್ನಸ್ವಾಮಿ ಪಿಚ್ ಈಗ ಹೇಗಿದೆ?: ಆರ್​ಸಿಬಿ-ಮುಂಬೈ ಪಂದ್ಯದಲ್ಲಿ ಯಾರಿಗೆ ಸಹಕರಿಸಲಿದೆ?

ಐಪಿಎಲ್ 2023 ರಲ್ಲಿಂದು ಹೈವೋಲ್ಟೇಜ್ ಕದನ ನಡೆಯಲಿದೆ. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಫಾಪ್ ಡುಪ್ಲೆಸಿಸ್ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ತನ್ನ ಮೊದಲ ಪಂದ್ಯದಲ್ಲಿ ರೋಹಿತ್ ಶರ್ಮಾ ನೇತೃತ್ವದ ಮುಂಬೈ ಇಂಡಿಯನ್ಸ್ ಅನ್ನು ಎದುರಿಸಲಿದೆ. ಈಗಾಗಲೇ ಟಿಕೆಟ್ ಸಂಪೂರ್ಣ ಸೋಲ್ಡ್ ಔಟ್ ಆಗಿದ್ದು ಕ್ರೀಡಾಂಗಣ ಕಿಕ್ಕಿರಿದ ಅಭಿಮಾನಿಗಳಿಂದ ತುಂಬಿರಲಿದೆ.ವಿಶೇಷ ಎಂದರೆ ಬರೋಬ್ಬರಿ ಮೂರು ವರ್ಷಗಳ ನಂತರ ಬೆಂಗಳೂರಿನಲ್ಲಿ ಐಪಿಎಲ್ ನಡೆಯುತ್ತಿದೆ. ಹಾಗಾದರೆ ಚಿನ್ನಸ್ವಾಮಿ ಪಿಚ್ ಹೇಗಿದೆ?, ಯಾರಿಗೆ ಹೆಚ್ಚು ಸಹಕಾರಿ ಮಾಡುತ್ತೆ?, ಟಾಸ್ ಗೆದ್ದ ತಂಡ ಯಾವುದು ಆಯ್ಕೆ ಮಾಡಿಕೊಂಡರೆ ಉತ್ತಮ?.ಚಿನ್ನಸ್ವಾಮಿ ಕ್ರೀಡಾಂಗಣದ ಪಿಚ್‌ ಟ್ರ್ಯಾಕ್‌ ಅತ್ಯುತ್ತಮವಾಗಿದೆ. ಚೆಂಡು ಬ್ಯಾಟ್‌ಗೆ ಚೆನ್ನಾಗಿ ಬರುವುದರಿಂದ ಬ್ಯಾಟಿಂಗ್​ಗೆ ಹೇಳಿ ಮಾಡಿಸಿದಂತಿದೆ. ಹೀಗಾಗಿ ಇಂದು ಹೈ ಸ್ಕೋರ್​ ಪಂದ್ಯ ಆಗುವುದು ಖಚಿತ. ಅಲ್ಲದೆ ಇಲ್ಲಿ ಬೌಂಡರಿ ಗೆರೆ ಕೂಡ ಅಂತ್ಯಂತ ಸಮೀಪವಿರುವ ಕಾರಣ ಫೋರ್-ಸಿಕ್ಸರ್​ಗಳ ಮಳೆ ಸುರಿಯಲಿದೆ.ಬೌಲರ್​ಗಳು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶಕ್ತಿ ಮೀರಿ ಪ್ರಯತ್ನ ತೋರಬೇಕು. ಎಷ್ಟೇ ದೊಡ್ಡ ಮೊತ್ತವನ್ನು ಬಾರಿಸಿದರೂ ಇಲ್ಲಿ ಚೇಸ್​ ಮಾಡಿ ಗೆಲುವು ಸಾಧಿಸಿಬಹುದು. ಹೀಗಾಗಿ ಟಾಸ್​ ಗೆದ್ದ ತಂಡ ಮೊದಲು ಬೌಲಿಂಗ್​ ಆಯ್ಕೆ ಮಾಡುವುದು ಉತ್ತಮ.ಆರ್​ಸಿಬಿ ಮತ್ತು ಮುಂಬೈ ತಂಡಗಳು ಇದುವರೆಗಿನ ಐಪಿಎಲ್​ ಪಂದ್ಯಗಳಲ್ಲಿ ಒಟ್ಟು 30 ಬಾರಿ ಮುಖಾಮುಖಿಯಾಗಿವೆ. ಇದರಲ್ಲಿ 17 ಪಂದ್ಯಗಳಲ್ಲಿ ಮುಂಬೈ ಮೇಲುಗೈ ಸಾಧಿಸಿದರೆ 13 ಪಂದ್ಯಗಳಲ್ಲಿ ಆರ್​ಸಿಬಿ ಗೆದ್ದಿದೆ.ಇನ್ನು ಬೆಂಗಳೂರಿನಲ್ಲಿ ಭಾನುವಾರದ ತಾಪಮಾನ 20 ರಿಂದ 33 ಡಿಗ್ರಿ ಸೆಲ್ಸಿಯಸ್ ಇರಲಿದೆ. ಹೀಗಾಗಿ ಪಂದ್ಯಕ್ಕೆ ಯಾವುದೇ ರೀತಿಯ ಮಳೆಯ ಅಡಚಣೆ ಇರುವುದಿಲ್ಲ. ಸಂಪೂರ್ಣ ಓವರ್​ಗಳ ಪಂದ್ಯವನ್ನು ಅಭಿಮಾನಿಗಳು ವೀಕ್ಷಿಸಬಹುದು.ಕಳೆದ ಆರು ತಿಂಗಳುಗಳಿಂದ ಭರ್ಜರಿ ಫಾರ್ಮ್​ನಲ್ಲಿರುವ ವಿರಾಟ್ ಕೊಹ್ಲಿ ಮೇಲೆ ಎಲ್ಲರ ಕಣ್ಣಿದೆ. ಕೊಹ್ಲಿ ಹಾಗೂ ನಾಯಕ ಫಾಫ್ ಡುಪ್ಲೆಸಿಸ್ ಆರ್​​ಸಿಬಿ ಪರ ಇನ್ನಿಂಗ್ಸ್ ಆರಂಭಿಸಲಿದ್ದಾರೆ. ಗ್ಲೆನ್ ಮ್ಯಾಕ್ಸ್​ವೆಲ್, ದಿನೇಶ್ ಕಾರ್ತಿಕ್, ಮೊಹಮ್ಮದ್ ಸಿರಾಜ್, ಹರ್ಷಲ್ ಪಟೇಲ್ ಸ್ಟಾರ್ ಆಟಗಾರರಾಗಿದ್ದಾರೆ.ಇತ್ತ ಮುಂಬೈ ಪರ ರೋಹಿತ್ ಶರ್ಮಾ ಫಿಟ್ ಆಗಿದ್ದಾರೆ. ಸೂರ್ಯಕುಮಾರ್ ಯಾದವ್ ಫಾರ್ಮ್ ಕಂಡುಕೊಳ್ಳಬೇಕಿದೆ. ಟಿಮ್ ಡೇವಿಡ್, ತಿಲಕ್ ವರ್ಮಾ, ಇಶಾನ್ ಕಿಶನ್, ಕ್ಯಾಮರಾನ್ ಗ್ರೀನ್ ಬ್ಯಾಟಿಂಗ್ ವಿಭಾಗದ ಶಕ್ತಿಯಾಗಿದ್ದಾರೆ. ಬೌಲಿಂಗ್‌ ವಿಭಾಗದಲ್ಲಿ ವೇಗಿ ಜೋಫ್ರಾ ಆರ್ಚರ್ ಮೇಲೆ ಕಣ್ಣಿದೆ.ಬೆಂಗಳೂರಿನಲ್ಲಿ ಐಪಿಎಲ್ ಪಂದ್ಯಾವಳಿ ನಡೆಯುವ ದಿನಗಳಂದು ವೀಕ್ಷಣೆಗೆ ತೆರಳುವ ಸಾರ್ವಜನಿಕರ ಅನುಕೂಲ ದೃಷ್ಟಿಯಿಂದ ನಗರದ ಹಲವು ಭಾಗಗಳಿಗೆ ಹೆಚ್ಚುವರಿ ವಿಶೇಷ ಬಸ್​ ಸೌಲಭ್ಯವನ್ನು ಬಿಎಂಟಿಸಿ ಘೋಷಿಸಿದೆ. ಜೊತೆಗೆ ನಮ್ಮ ಮೆಟ್ರೋ ಕೂಡ ಮಧ್ಯರಾತ್ರಿ 1 ಗಂಟೆಯ ತನಕ ಸೇವೆ ಇರಲಿದೆ ಎಂದು ಮೆಟ್ರೋ ಸಂಸ್ಥೆ ತಿಳಿಸಿದೆ.

source https://tv9kannada.com/photo-gallery/cricket-photos/rcb-vs-mumbai-indians-match-today-in-ipl-2023-here-is-the-m-chinnaswamy-stadium-bengaluru-pitch-report-vb-au48-547579.html

Views: 0

Leave a Reply

Your email address will not be published. Required fields are marked *