ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಚಿತ್ರದುರ್ಗ ಅ. 09 ಮಹಿಳೆಯರು ತಮ್ಮ ಜೀವನವನ್ನು ಸುಧಾರಿಸಲು ಹಾಗೂ ಉತ್ತಮಗೊಳಿಸಲು ಹಾಗೂ ಸಬಲೀಕರಣರಾಗಲು ಛಲ ಹಾಗೂ ಪ್ರಯತ್ನದ ಅಗತ್ಯವಿದೆ ಎಂದು ವಂದನೀಯ ಸ್ವಾಮಿ ಸಜಿ ಜಾರ್ಜ್ ತಿಳಿಸಿದ್ದಾರೆ.
ಚಿತ್ರಾ ಡಾನ್ ಬಾಸ್ಕೋ ಸಮಾಜ ಸೇವಾ ಸಂಸ್ಥೆ ಹಾಗೂ ಬ್ರೆಡ್ಸ್ ಬೆಂಗಳೂರು ಇವರ ಸಹಯೋಗದಲ್ಲಿ ವಿ ಲಿವ್ ಯೋಜನೆಯ
ಫಲಾನುಭವಿಗಳಿಗಾಗಿ ಎರಡನೇ ಹಂತದಲ್ಲಿ ಐದು ದಿನಗಳ ತರಬೇತಿ ಕಾರ್ಯಗಾರದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ
ಮಾತನಾಡಿದ ಅವರು, ಮಹಿಳೆಯರು ತಮ್ಮ ಕೌಶಲ್ಯ ಹಾಗೂ ಸಾಮಥ್ರ್ಯವನ್ನು ವೃದ್ಧಿಪಡಿಸಬೇಕಾಗಿದೆ, ಇದಕ್ಕಾಗಿ ಶಿಕ್ಷಣದ ಅಗತ್ಯ ಕೂಡ
ಇದೆ. ಈ ನಿಟ್ಟಿನಲ್ಲಿ ಚಿತ್ರಸಂಸ್ಥೆಯು ಸಾಮಥ್ರ್ಯ ನಿರ್ಮಾಣ ಹಾಗೂ ಕುರಿ ಸಾಕಾಣಿಕೆಯ ಕೌಶಲ್ಯ ಅಭಿವೃದ್ಧಿ ತರಬೇತಿ ಕಾರ್ಯಗಾರಗಳನ್ನು
ನಡೆಸುತ್ತಿದ್ದು ನೀವೆಲ್ಲರೂ ಕೂಡ ಈ ಕಾರ್ಯಗಾರದ ಸದುಪಯೋಗವನ್ನು ಪಡೆದುಕೊಳ್ಳಿ ಎಂದು ಹೇಳಿದರು
ಕುರಿ ಹಾಗೂ ಉಣ್ಣೆ ನಿಗಮದ ಉಪ ನಿರ್ದೇಶಕರಾದ ಡಾ. ತಿಪ್ಪೇಸ್ವಾಮಿಯವರು ಮಾತನಾಡಿ ಕುರಿ ಸಾಕಣಿಕೆಯ ಕೌಶಲ್ಯಗಳು, ತಳಿಯ
ಆಯ್ಕೆ, ತಳಿಯ ಆಯ್ಕೆಯಲ್ಲಿ ಗಮನಿಸಬೇಕಾದಂತಹ ಅಂಶಗಳು, ಕುರಿಗಳಿಗೆ ಕೊಟ್ಟಿಗೆ ಹಾಗೂ ಅವುಗಳಿಗೆ ಮೇವು ಹಾಕುವ ವಿಧಾನವನ್ನು
ಹಾಗೂ ತಳಿಯ ವಿಧಗಳ ಬಗ್ಗೆ ವಿವರವಾಗಿ ತಿಳಿಸಿಕೊಟ್ಟರು.
ಪಶು ಸಖಿಯಾದ ಶ್ರೀಮತಿ ಸಿದ್ಧಮ್ಮನವರು ಕುರಿ/ಮೇಕೆ ಗಳಿಗೆ ಮೇವು ಹಾಕುವ ವಿಧಾನದ ಬಗ್ಗೆ ತಿಳಿಸಿಕೊಟ್ಟರು. ಡಿಎಸ್ ಹಳ್ಳಿಯ ಪಶು
ವೈದ್ಯಾಧಿಕಾರಿ ಡಾ. ದೀಪಿಕಾ, ಮಹಿಳೆಯರನ್ನ ಉದ್ದೇಶಿಸಿ ಮಾತನಾಡಿ ಕುರಿ/ ಮೇಕೆಗಳ ಮೇವು, ಮೇವನ್ನು ಶೇಖರಿಸಿಡುವ ವಿಧಾನ
ಹಾಗೂ ಮೇವುಗಳ ಕೃಷಿ ವಿಧಾನವನ್ನು ವಿವರಿಸಿದರು.
ಈ ತರಬೇತಿಯ ಉದ್ಘಾಟನೆಯನ್ನು ಗಿಡಕ್ಕೆ ನೀರು ಹಾಕುವುದರ ಮೂಲಕ ಡಾನ್ ಬಾಸ್ಕೋ ಸಂಸ್ಥೆಯ ನಿರ್ದೇಶಕರಾದ ವಂದನೀಯ
ಸ್ವಾಮಿ ಸಜಿ ಜಾರ್ಜ್ ನಡೆಸಿಕೊಟ್ಟರು. ಚಿತ್ರ ಡಾನ್ ಬೋಸ್ಕೋ ಸಂಸ್ಥೆಯ ಆಡಳಿತಾಧಿಕಾರಿಗಳಾದ ವಂದನೀಯ ಸ್ವಾಮಿ ವಿ.ಎಂ.
ಮ್ಯಾಥ್ಯೂ ಭಾಗವಹಿಸಿದ್ದರು ಕಾರ್ಯಕ್ರಮದಲ್ಲಿ 30 ವಿ ಲೀವ್ ಯೋಜನೆಯ ಫಲಾನುಭವಿಗಳು ಹಾಗೂ ಚಿತ್ರ ಸಿಬ್ಬಂದಿಗಳು ಹಾಜರಿದ್ದರು