ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಚಿತ್ರದುರ್ಗ ನ. 26: ಕಲಾ ಚೈತನ್ಯ ಸೇವಾ ಸಂಸ್ಥೆ, ಸಾಂಸ್ಕೃತಿಕ ಕಲಾ ಸಂಘ ಚಿತ್ರದುರ್ಗ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು ಇವರ ಸಂಯುಕ್ತಾಶ್ರಯದಲ್ಲಿ 69ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ಚಿತ್ರಕಲಾ ಪ್ರದರ್ಶನ ಹಾಗೂ ಗಾನ ಮತ್ತು ಚಿತ್ರ ಸಂಗಮ ಕಾರ್ಯಕ್ರಮವನ್ನು ನ. 29ರ ಶುಕ್ರವಾರ ನಗರದ ಪತ್ರಿಕಾ ಭವನದಲ್ಲಿ 10.30ಕ್ಕೆ ಹಮ್ಮಿಕೊಳ್ಳಲಾಗಿದೆ ಎಂದು ಕಲಾ ಚೈತನ್ಯ ಸೇವಾ
ಸಂಸ್ಥೆಯ ಕಾರ್ಯದರ್ಶಿ ನಾಗರಾಜ್ ಬೇದ್ರೇ ತಿಳಿಸಿದ್ದಾರೆ.
ಕಾರ್ಯಕ್ರಮವನ್ನು ವಿಧಾನ ಪರಿಷತ್ ಸದಸ್ಯರಾದ ಕೆ.ಎಸ್. ನವೀನ್ ಉದ್ಘಾಟಿಸಲಿದ್ದಾರೆ. ಜಿಲ್ಲಾಧಿಕಾರಿಗಳಾದ ಟಿ.ವೆಂಕಟೇಶ್,
ವೈದ್ಯರಾದ ಡಾ.ಬಿ.ಮಲ್ಲಿಕಾರ್ಜನ್ ಕೀರ್ತಿ, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೆಶಕರಾದ ಎಸ್.ಕೆ.ಮಲ್ಲಿಕಾರ್ಜನ್,
ಶರಣ ಸಾಹಿತ್ಯ ಪರಿಷತ್‍ನ ರಾಜ್ಯ ಉಪಾಧ್ಯಕ್ಷರಾದ ಡಾ.ಕೆ.ಎಂ.ವಿರೇಶ್ ಚಿತ್ರಕಲಾದರಾದ ಎಸ್.ಸತೀಶ್‍ರಾವ್, ಜಿಲ್ಲಾ ಕಾರ್ಯನಿರತ
ಪತ್ರಕರ್ತರ ಸಂಘದ ಅಧ್ಯಕ್ಷರಾದ ದಿನೇಶ್ ಗೌಡಗೆರೆ, ರಾಜ್ಯ ಲಲಿತಾ ಕಲಾ ಆಕಾಡೆಮಿಯ ಸದಸ್ಯರಾದ ಸಿ.ಕಣ್ಮೇಶ್ ಭಾಗವಹಿಸಲಿದ್ದಾರೆ.
ಈ ಕಾರ್ಯಕ್ರಮದಲ್ಲಿ ಚಿತ್ರಕಲಾವಿದರಾದ ಚಿತ್ರದುರ್ಗದ ನಾಗರಾಜ್ ಬೇದ್ರೇ, ನವೀನ್ ಬೇದ್ರೇ, ಅಮೂಲ್ಯ, ಜವಳಿ ಶಾಂತಕುಮಾರ್,
ಮಾರುತಿ, ಪ್ರಜ್ಞಾ ಮಂಜುನಾಥ್ ಹಾಗೂ ಹಿರಿಯೂರಿನ ಸುಷ್ಮಾ ರವರ ಚಿತ್ರಕಲಾಗಳ ಪ್ರದರ್ಶನಗೊಳ್ಳಲಿವೆ. ಇದೇ ಸಂದರ್ಭದಲ್ಲಿ ವಿವಿಧ
ಕ್ಷೇತ್ರಗಳಲ್ಲಿ ಸೇವೆಯನ್ನು ಮಾಡಿದ ಗಣ್ಯರನ್ನು ಸನ್ಮಾನಿಸ ಲಾಗುವುದು. ಗಾನ ಮತ್ತು ಚಿತ್ರ ಸಂಗಮ ಕಾರ್ಯಕ್ರಮವನ್ನು
ಚಿತ್ರಕಲಾವಿದರಾದ ಎಸ್.ಸತೀಶ್ ರಾವ್ ಹಾಗೂ ಸಂಗೀತ ಶಿಕ್ಷಕರಾದ ಅಂಜನಿಯವರು ನಡೆಸಿಕೊಡಲಿದ್ದಾರೆ.
ಸಂಜೆ 4.30ಕ್ಕೆ ನಡೆಯುವ ಸಮಾರೋಪ ಸಮಾರಂಭದಲ್ಲಿ ವಾಣಿಜ್ಯೋದ್ಯಮಿಗಳಾದ ಜಿ.ಎಸ್. ಅನಿತ್ ಕುಮಾರ್, ಇಕ್ಬಾಲ್ ಹುಸೇನ್,
ಉತ್ತಮ ಚಂದ್ ಸುರಾನ ಹಾಗೂ ಚಿತ್ರದುರ್ಗ ಟೌನ್ ಕೋ-ಆಪರೇಟಿವ್ ಸೊಸೈಟಿಯ ಅಧ್ಯಕ್ಷರಾದ ನಿಶಾನಿ ಜಯ್ಯಣ್ಣ ಭಾಗವಹಿಸಲಿದ್ದಾರೆ
ಎಂದು ತಿಳಿಸಿದ್ದಾರೆ.