ಚಿತ್ರದುರ್ಗ ಅ. 22: ಜೀವನದ ಹೆಗ್ಗುರಿ ಸಾಧನೆಯಾಗುವುದಿದ್ದರೆ.ಅದು ನಿಮ್ಮಿಂದಲೇ.ನಿಮ್ಮ ಜೀವನದ ನಿಜ ಶಿಲ್ಪಿ ನೀವೇ. ಸ್ವಯಂ ಶಿಸ್ತು
ಬಧ್ಧತೆ.ನಿರಂತರಪ್ರಾಮಾಣಿಕ ಪ್ರಯತ್ನ.ಅನನ್ಯ ಕಾರ್ಯಕ್ಷಮತೆ .ಅಧ್ಯಯನ ಶೀಲತೆ ನಿಮ್ಮನ್ನು ವಜ್ರ ವ್ಯಕ್ತಿತ್ವವಾಗಿ ರೂಪಿಸುತ್ತದೆ ಎಂದು
ಶ್ರೀಮತಿ ಶಶಿಕಲಾ ರವಿಶಂಕರ್ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
![](https://samagrasuddi.co.in/wp-content/uploads/2024/10/4444-300x225.jpg)
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
![](https://samagrasuddi.co.in/wp-content/uploads/2024/10/77777-300x225.jpg)
ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕಾ ವಿಜ್ಞಾನ ಮಹಾವಿದ್ಯಾಲಯ.ಶಿವಮೊಗ್ಗ. ಹಿರಿಯೂರು ಸಭಾ ಪ್ರಾಂಗಣದಲ್ಲಿ
ರಾಷ್ಟ್ರೀಯ ಶಿಕ್ಷಣ ಯೋಜನೆಯಡಿ ಏರ್ಪಡಿಸಿದ್ದ ಕಾರ್ಯಾಗಾರದಲ್ಲಿ ರಾಜ್ಯ ಮಟ್ಟದ ಪರಿಣಿತ ಸಂಪನ್ಮೂಲ ವ್ಯಕ್ತಿಯಾಗಿ ಇದೇ ಹೊಸದಾಗಿ ಸೇರ್ಪಡೆಯಾದ ವಿದ್ಯಾರ್ಥಿ ವಿದ್ಯಾರ್ಥಿನಿಯರನ್ನುದ್ದೇಶಿಸಿ ಮುಖ್ಯ ಉಪನ್ಯಾಸಕರಾಗಿ ಮಾತನಾಡಿದರು.
ಪರಿಶ್ರಮ ಮಾತ್ರ ನಿಮ್ಮದು.ಉತ್ತಮ ಫಲಿತಾಂಶ ತಾನೇ ಬೆನ್ನತ್ತಿ ಬರುವುದು ಉತ್ತಮ ಸಂಸ್ಕಾರ ಹೊಂದಿದ ವಿದ್ಯಾರ್ಥಿಗಳು ಮಾದಕ
ವ್ಯಸನ ಇತ್ಯಾದಿ ಚಟಗಳಿಂದ ದೂರವಿದ್ದು ತಪಸ್ಸಿನಂತೆ ತಮ್ಮ ಜೀವನದ ಗುರಿ ಸಾಧಿಸುವ ಛಲ ವಿರಲಿ. ಎಂದು ಅನೇಕ
ಊದಾಹರಣೆಗಳೊಂದಿಗೆ ಮನ ಮುಟ್ಟುವಂತೆ ತಿಳಿಸಿದರು
ಕಾರ್ಯಕ್ರಮದಲ್ಲಿ ಡಾಕ್ಟರ್.. ಪ್ರೊಫೆಸರ್.ವಾಸುದೇವ್ ರವರು ಹಾಗೂ ಡಾಕ್ಟರ್ ಪ್ರೊಫೆಸರ್ ರಮೇಶ್ ರವರು
ವೇದಿಕೆಯಲ್ಲಿದ್ದರು.ಇವರೊಂದಿಗೆ ಹಿರಿಯ ತಾಂತ್ರಿಕ ತಜ್ಞರಾದ ಓ ಪಾಟೀಲ್ ರವರು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ
ಉಪಸ್ಥಿತರಿದ್ದರು. ಪ್ರೊಫೆಸರ್.ಡಾ.ವಾಸುದೇವ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.