ಚಿತ್ರದುರ್ಗ ಸೆ. 18
ವರದಿ ಮತ್ತು ಪೋಟೋ ಸುರೇಶ್ ಪಟ್ಟಣ್
ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ಸೆ.22 ರಿಂದ ರಾಜ್ಯದ ಸಾಮಾಜಿಕ ಮತು ಶೈಕ್ಷಣಿಕ ಜನಗಣತಿಯನ್ನು ಪ್ರಾರಂಭಿಸಲಿದೆ. ಇದರಲ್ಲಿ ಧರ್ಮದ ಕಲಂನಲ್ಲಿ ಇಸ್ಲಾಂ, ಕ್ರೈಸ್ತ, ಜೈನ್, ಭೌದ್ದ, ಸಿಖ್ ಮತ್ತು ಪಾರ್ಸಿ ಎಂದು, ಮತ್ತು ಜಾತಿಯ ಕಲಂನಲ್ಲಿ ಮುಸ್ಲಿಂ, ಕ್ರಿಶ್ಚಿಯನ್, ಜೈನ, ಭೌದ್ದ, ಸಿಖ್ ಮತ್ತು ಪಾರ್ಸಿ ಎಂದು ನಮೂದಿಸಿ ಯಾವುದೇ ತಪ್ಪುಗಳಿಲ್ಲದೇ ವಿವರಗಳನ್ನು ಒದಗಿಸುವಂತೆ ಚಿತ್ರದುರ್ಗ ಜಿಲ್ಲಾ ಅಲ್ಪಸಂಖ್ಯಾತರ ವಿಭಾಗದ ಜಿಲ್ಲಾ ಅಧ್ಯಕ್ಷರಾದ ಸೈಯದ್ ಖುದ್ದುಸ್ ಮನವಿ ಮಾಡಿದ್ದಾರೆ.
ಚಿತ್ರದುರ್ಗ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಗುರುವಾರ ಚಿತ್ರದುರ್ಗ ಜಿಲ್ಲಾ ಅಲ್ಪಸಂಖ್ಯಾತರ ವಿಭಾಗದ ಜಿಲ್ಲಾ ಅಧ್ಯಕ್ಷರಾದ ಸೈಯದ್ ಖುದ್ದುಸ್ ರವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಅಲ್ಪಸಂಖ್ಯಾತರ ಧರ್ಮ ಮತ್ತು ಮತ್ತು ಬಾಂಧವರಲ್ಲಿ ಮನವಿ ಮಾಡಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯರವರ ಕನಸಿನ ಕೂಸಾಗಿರುವ ಶೈಕ್ಷಣಿಕ ಮತ್ತು ಜಾತಿಗಣತಿಯಿಂದ ಸಾಮಾಜಿಕ ನ್ಯಾಯ, ಜಾತಿ ತಾರತಮ್ಯವನ್ನು ನಿವಾರಿಸಿ, ಸಾಮಾಜಿಕ ನ್ಯಾಯವನ್ನು ಸ್ಥಾಪಿಸುವುದು, ಸಮೀಕ್ಷೆಯ ಪ್ರಾಥಮಿಕ ಉದ್ದೇಶವಾಗಿದ್ದು, ಜಾತಿಗಳ ಜನ ಸಂಖ್ಯೆಯ ಆಧಾರದ ಮೇಲೆ ಸೂಕ್ತ ಮೀಸಲಾತಿ ನೀತಿಗಳನ್ನು ರೂಪಿಸಲು ಮತ್ತು ಅಸ್ತಿತ್ವದಲ್ಲಿರುವ ನೀತಿಗಳನ್ನು ಪರಿಷ್ಕರಿಸಲು ಸಮೀಕ್ಷೆ ಸಹಾಯ ಮಾಡುತ್ತದೆ, ಹಿಂದುಳಿದ ವರ್ಗಗಳಿಗಾಗಿ ಶಿಕ್ಷಣ, ಉದ್ಯೋಗ ಮತ್ತು ಇತರೆ ಅಭಿವೃದ್ಧಿ ಯೋಜನೆಗಳನ್ನು ರೂಪಿಸಲು ಅಂಕಿ ಅಂಶಗಳು ಪ್ರಮುಖವಾಗುತ್ತವೆ, ಕಾಂಗ್ರೆಸ್ ಸರ್ಕಾರವು ಸಾಮಾಜಿಕ ನ್ಯಾಯ ಮತು ್ತ ಅಭಿವೃದ್ಧಿಗೆ ಮುಂದಾಗಿದೆ ಎಂದರು.
ಈ ನಿಟ್ಟಿನಲ್ಲಿ ಸರ್ಕಾರವು ವಿವಿಧ ವರ್ಗಗಳಿಗೆ ಸೌಲಭ್ಯಗಳನ್ನು ಒದಗಿಸುವ ಸಲುವಾಗಿ ಈ ಜನಗಣತಿಗಳು ಮುಖ್ಯವಾದ ದಾಖಲೆಗಳಾಗಲಿವೆಯೆಂಬುದನ್ನು ನೆನಪಿನಲ್ಲಿಟ್ಟುಕೊಂಡು, ಆಧಾರ್‍ಕಾರ್ಡ್ ನವೀಕರಿಸದಿದ್ದರೆ, ಡಿಜಿಟಲ್ ಸಹಿ ಅಥವಾ ಬಯೋಮೆಟ್ರಿಕ್ ಮಾಡದಿದ್ದರೆ ಅದನ್ನು ತಕ್ಷಣ ನವೀಕರಿಸಬೇಕು. ಸರ್ಕಾರವು, ಎಲ್ಲೆಡೆ ನವೀಕರಿಸಿದ ಆಧಾರ್ ವಿವರಗಳನ್ನು ಸ್ವೀಕರಿಸುತ್ತದೆ, ವಿವರಗಳನ್ನು ಒದಗಿಸುವಾಗ ಧರ್ಮದ ಕಲಂನಲ್ಲಿ ಇಸ್ಲಾಂ, ಕ್ರೈಸ್ತ, ಜೈನ್, ಭೌದ್ದ, ಸಿಖ್ ಮತು ಪಾರ್ಸಿ ಎಂದು, ಮತು ್ತ ಜಾತಿಯ ಕಲಂನಲ್ಲಿ ಮುಸ್ಲೀಂ, ಕ್ರಿಶ್ಚಿಯನ್, ಜೈನ, ಭೌದ್ದ, ಸಿಖ್ ಮತ್ತು ಪಾರ್ಸಿ ಎಂದು ನಮೂದಿಸಿ ಯಾವುದೇ ತಪ್ಪುಗಳಿಲ್ಲದೇ ವಿವರಗಳನ್ನು ಒದಗಿಸಬೇಕು ಎಂದಿದ್ದಾರೆ.
ಈ ಜನಗಣತಿಯು ಸಮಾಜದ ಒಟ್ಟಾರೆ ಅಭಿವೃದ್ಧಿಗೆ ಬಹಳ ಮುಖ್ಯವಾಗಲಿದೆ.ಎಲ್ಲಾ ಅಲ್ಪಸಂಖ್ಯಾತರು ಯಾವುದೇ ನಿರ್ಲಕ್ಷ್ಯವಿಲ್ಲದೆ, ಈ ಜಾತಿಗಣತಿ ಬಗ್ಗೆ ಗಮನ ಹರಿಸಬೇಕು ಮತ್ತು ಮಸೀದಿಗಳಲ್ಲಿ, ಚರ್ಚ್‍ಗಳಲ್ಲಿ, ಜೈನ ಮಂದಿರಗಳಲ್ಲಿ, ಗುರುದ್ವಾರಗಳಲ್ಲಿ, ಭೌದ್ದ ಮಂದಿರಗಳಲ್ಲಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಬೇಕಿದೆ.ಜನಗಣತಿಯ ಸಮಯದಲ್ಲಿ ಮತ್ತು ಸಾಮಾನ್ಯ ದಿನಗಳಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ಮುಂದುವರಿಸಬೇಕು, ಇದರಿಂದ ನಮ್ಮ ಸಮಾಜವು ಅದನ್ನು ಉತ್ತಮವಾಗಿ ಅರ್ಥಮಾಡಿಕೊಳ್ಳಬಹುದಾಗಿದೆ, ಈ ಸಾಮಾಜಿಕ ಮತು ಶೈಕ್ಷಣಿಕ ಜನಗಣತಿಯನ್ನು ಸಂಪೂರ್ಣವಾಗಿ ಯಶಸ್ವಿಗೊಳಿಸಬೇಕೆಂದು ಸೈಯದ್ ಖುದ್ದುಸ್ ಮನವಿ ಮಾಡಿದರು.
Views: 15