
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಚಿತ್ರದುರ್ಗ ಏ. 16 : ಚಿತ್ರದುರ್ಗ ನಗರದ, ನಗರ ದೇವರಾಗಿ ಮೇಲುದುರ್ಗದಲ್ಲಿ ನೆಲೆಸಿರುವ ಶ್ರೀ ಸಂಪಿಗೆ ಸಿದ್ದೇಶ್ವರ ಸ್ವಾಮಿ ಹಾಗೂ ಶ್ರೀ ವೀರಭದ್ರಸ್ವಾಮಿಯ ಗುಗ್ಗುಳ ಮತ್ತು ಕೆಂಡಾರ್ಚನೆಯನ್ನು ಪ್ರತಿ ಮೂರು ವರ್ಷಗಳಿಗೊಂದು ಸಾರಿ ನೆರವೇರಿಸುತ್ತಿದ್ದು ಸದರಿ ಗುಗ್ಗುಳ ಮತ್ತು ಕೆಂಡಾರ್ಚನೆಯ ಕಾರ್ಯಕ್ರಮವನ್ನು ಏ. 21 ಸೋಮವಾರ ಹಾಗೂ 22 ನೇ ಮಂಗಳವಾರದಂದು ನೆರವೇರಿಸಲಾಗುತ್ತದೆ
ಎಂದು ಶ್ರೀ ಸಂಪಿಗೆ ಸಿದ್ದೇಶ್ವರ ಸೇವಾ ಸಮಿತಿಯ ಅಧ್ಯಕ್ಷರಾದ ಪಿ.ಎನ್.ಸಿದ್ದರಾಜು ತಿಳಿಸಿದ್ದಾರೆ.
ಏ. 21 ನೇ ಸೋಮವಾರ ರಾತ್ರಿ 8. ಗಂಟೆಯಿಂದ, ಗಂಗಾಪೂಜೆ, ಕಾಳಿಕಾದೇವಿ ಸ್ಥಾಪನೆ, ಕಂಕಣಧಾರಣೆ, ರುದ್ರಾಭಿಷೇಕ,
ಬಿಲ್ವಾರ್ಚನೆ, ಶ್ರೀ ಅಮ್ಮನವರಿಗೆ ಕುಂಕುಮಾರ್ಚನೆ ರಾತ್ರಿ 11. ಗಂಟೆಗೆ ರುದ್ರಹೋಮ ಇತ್ಯಾದಿ ಕಾರ್ಯಕ್ರಮಗಳು ನಡೆಯಲಿವೆ. ಏ.
22 ನೇ ಮಂಗಳವಾರ ಬೆಳಗಿನ ಜಾವ 4.30 ಗಂಟೆಗೆ ಮಹಾ ಮಂಗಳಾರತಿ ನಂತರ ಬೆಳಿಗ್ಗೆ 5.00 ಗಂಟೆಯಿಂದ ಶ್ರೀ ಸಂಪಿಗೆ
ಸಿದ್ದೇಶ್ವರ ದೇವಾಲಯದ ಮುಂಭಾಗದಲ್ಲಿ “ಕೆಂಡಾರ್ಚನೆ” ನಂತರ “ಅಡ್ಡಪಲ್ಲಕ್ಕಿ ಉತ್ಸವ” ನೆರವೇರಿಸಲಾಗುವುದು.
ಕೆಂಡಾರ್ಚನೆ ನೆರವೇರಿದ ನಂತರ ಶ್ರೀ ಸಂಪಿಗೆ ಸಿದ್ದೇಶ್ವರಸ್ವಾಮಿ ಹಾಗೂ ಶ್ರೀ ವೀರಭದ್ರಸ್ವಾಮಿಯವರ ಅಡ್ಡಪಲ್ಲಕ್ಕಿ ಉತ್ಸವವು
ಗುಗ್ಗುಳ ಕೊಡಗಳ ಸಹಿತ ರಾಣೇಬೆನ್ನೂರಿನ ಶ್ರೀ ಬಸವಣ್ಣಪ್ಪನವರು ಹಾಗೂ ವೃಂದದವರಿಂದ ಶ್ರೀ ವೀರಭದ್ರಸ್ವಾಮಿಯವರ
ವಚನಾಮೃತಗಳೊಂದಿಗೆ ಪುರುವಂತರು ಹಾಗೂ ಚಮ್ಮೇಳನ ದವರು, ಶ್ರೀ ಬ್ರಹ್ಮಲಿಂಗೇಶ್ವರ ಸಮಾಳ ಸಂಘ, ಹಾರಕನಾಳು ಮತ್ತು
ನಾಣ್ಯಪುರ ಇವರ ಮುಂದಾಳತ್ವದಲ್ಲಿ ನಂದಿ ಧ್ವಜ ಕುಣಿತದೊಂದಿಗೆ ಮೇಲುದುರ್ಗದಿಂದ ಕೆಳಗಿಳಿದು ಶ್ರೀ ಗಾರೇಬಾಗಿಲು ಈಶ್ವರ
ದೇವಾಲಯದ ಮುಂಭಾಗದಿಂದ ರಾಜ ಉತ್ಸವಾಂಬ ದೇವಾಲಯ, ದೊಡ್ಡಪೇಟೆ, ರಂಗಯ್ಯನಬಾಗಿಲು, ಬಸವಮಂಟಪ ರಸ್ತೆ,
ಧರ್ಮಶಾಲಾ ರಸ್ತೆಯಲ್ಲಿರುವ ಅರಳಿಮರ ಮುಂಭಾಗದಿಂದ ಮೈಸೂರು ಬ್ಯಾಂಕ್ ವೃತ್ತ, ಪೂನಾ ಬೆಂಗಳೂರು ರಸ್ತೆ,
ಸಂತೇಪೇಟೆಯಲ್ಲಿರುವ ಗಾಂಧಿವೃತ್ತ ಶ್ರೀ ನೀಲಕಂಠೇಶ್ವರ ದೇವಸ್ಥಾನ ಹಳೇ ಇಂಡಿಯನ್ ಬ್ಯಾಂಕ್ ಪಕ್ಕದಿಂದ ಆನೇಬಾಗಿಲು,
ಚಿಕ್ಕಪೇಟೆ ಮೂಲಕ ಮೇಲುದುರ್ಗದಲ್ಲಿರುವ ದೇವಸ್ಥಾನ ಸೇರಲಿದೆ.
ಏ 21 ನೇ ಸೋಮವಾರ ರಾತ್ರಿ ದೇವಸ್ಥಾನದಲ್ಲಿ ತಂಗುವವರಿಗೆ ಪ್ರಸಾದ ವ್ಯವಸ್ಥೆ ಹಾಗೂ ಏ.22 ನೇ ಮಂಗಳವಾರ ಬೆಳಿಗ್ಗೆ 9
ಗಂಟೆಯಿಂದ ಸಾರ್ವಜನಿಕವಾಗಿ “ಅನ್ನಸಂತರ್ಪಣೆ”ಯನ್ನು ಏರ್ಪಡಿಸಲಾಗಿದೆ. ಸಕಲ ಭಕ್ತಾದಿಗಳು ಈ ಕಾರ್ಯಕ್ರಮಕ್ಕೆ ಹೆಚ್ಚಿನ
ಸಂಖ್ಯೆಯಲ್ಲಿ ಆಗಮಿಸಿ, ಶ್ರೀ ಸ್ವಾಮಿಯ ಕೃಪಾಶೀರ್ವಾದಕ್ಕೆ ಪಾತ್ರರಾಗಲು ಅಧ್ಯಕ್ಷರಾದ ಪಿ.ಎನ್.ಸಿದ್ದರಾಜು ಕೋರಿದ್ದಾರೆ.
Views: 2