
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಚಿತ್ರದುರ್ಗ ಏ. 29 : ಬಸವಧರ್ಮ ಪೀಠಕೂಡಲ ಸಂಗಮದ ಚಿತ್ರದುರ್ಗ ಶಾಖೆವತಿಯಿಂದ ನಗರದಲ್ಲಿ ಏ. 30ರ ಬುಧವಾರದಂದು ರಂಗಯ್ಯನ ಬಾಗಿಲು ಬಳಿಯ ಬಸವ ಮಂಟಪದಲ್ಲಿ ವಿಶ್ವ ಗುರು ಬಸವಣ್ಣನವರ 891ನೇ ಬಸವ ಜಯಂತಿಯನ್ನು ಹಮ್ಮಿಕೊಳ್ಳಲಾಗಿದೆ ಎಂದು
ಉಳವಿಯ ಯೋಗಪೀಠದ ಅಕ್ಕ ನಾಗಲಾಂಬಿಕೆ ಪೀಠಾಧ್ಯಕ್ಷರಾದ ಶ್ರೀ ಜಗದ್ಗುರು ಮಾತೆ ದಾನೇಶ್ವರಿ ಮಾತಾಜಿ ತಿಳಿಸಿದರು.
ಚಿತ್ರದುರ್ಗ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಅಂದು ಬೆಳಗ್ಗೆ 5 ಗಂಟೆಯಿಂದ ಪೂಜಾ
ಕಾರ್ಯಕ್ರಮ ಪ್ರಾರಂಭವಾಗಲಿದ್ದು, 9 ಗಂಟೆಗೆ ಮೆರವಣಿಗೆ ಗುರು ಬಸವ ಪೂಜೆ ಧ್ವಜಾರೋಹಣ ತೊಟ್ಟಿಲು ಕಾರ್ಯಕ್ರಮ ವಚನ
ಚಿಂತನೆ ಪ್ರವಚನ ಕಾರ್ಯಕ್ರಮ ನಡೆಯಲಿದೆ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಉಳವಿಯ ಯೋಗಪೀಠದ ಅಕ್ಕ ನಾಗಲಾಂಬಿಕೆ
ಪೀಠಾಧ್ಯಕ್ಷರಾದ ಶ್ರೀ ಜಗದ್ಗುರು ಮಾತೆ ದಾನೇಶ್ವರಿ ಮಾತಾಜಿ, ಸಾಸಲಹಟ್ಟಿಯ ಅಕ್ಕಮಹಾದೇವಿ ಮಠದ ಸದ್ಗುರು ಬಸವೇಶ್ವರ್
ಮಾತಾಜಿ ವಹಿಸಲಿದ್ದಾರೆ. ಧ್ವಜಾರೋಹಣ, ಕೆಳಗೋಟೆಯಲ್ಲಿ ಬಸವೇಶ್ವರರ ನಾಮಫಲಕದ ಉದ್ಘಾಟನೆಯನ್ನು ಮಾಜಿ
ಶಾಸಕರಾದ ಜಿ.ಹೆಚ್.ತಿಪ್ಪಾರೆಡ್ಡಿ, ನಗರಸಭೆ ಅಧ್ಯಕ್ಷರಾದ ಸುನೀತಾ ರಘು ನಡೆಸಲಿದ್ದಾರೆ.
ಬಸವ ಮಂಟಪದಲ್ಲಿ ನಡೆಯುವ ಕಾರ್ಯಕ್ರಮವನ್ನು ಕೆಡಿಪಿ ಸದಸ್ಯರಾದ ಕೆ.ಸಿ.ನಾಗರಾಜ್ ಉದ್ಘಾಟಿಸಲಿದ್ದು, ಧ್ವಜಾರೋಹಣವನ್ನು
ಚಂದ್ರಣ್ಣ ನಡೆಸಲಿದ್ದಾರೆ. ಉಪನ್ಯಾಸಕರಾದ ಶಬ್ರಿನಾ ಮಹಮದ್ ಆಲಿ ಉಪನ್ಯಾಸವನ್ನು ನೀಡಲಿದ್ದಾರೆ. ನಿವೃತ್ತ ಉಪನ್ಯಾಸಕರಾದ
ನಂದೀಶ್, ಪತ್ರಕರ್ತರ ಸಂಘದ ಅಧ್ಯಕ್ಷರಾದ ದಿನೇಶ್ ಗೌಡಗೆರೆ, ಪತ್ರಕರ್ತರಾದ ನವೀನ್ ಕುಮಾರ್, ಡಾ.ರೂಪ, ಕನಕರಾಜ್,
ಪರಮೇಶ್ವರಪ್ಪ, ರಾಮಜ್ಜ ಭಾಗವಹಿಸಿದ್ದರು.
ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆಯನ್ನು ಮಾಡಿದ ಸಾಧಕರಿಗೆ ಬಸವ ಸೇವಾ ರತ್ನ ಪ್ರಶಸ್ತಿಯನ್ನು ನೀಡಿ
ಗೌರವಿಸಲಾಗುವುದು ಕಾರ್ಯಕ್ರಮದಲ್ಲಿ ಮುಖ್ಯಗಣ್ಯರು ಹಾಗೂ ಮುಖಂಡರು, ಬಸವದಳದ ಕಾರ್ಯಕರ್ತರು, ಮಾಜಿ
ಅಧ್ಯಕ್ಷರುಗಳು, ಸದಸ್ಯರುಗಳು ಭಾಗವಹಿಸುವವರು ಎಂದು ತಿಳಿಸಿದರು.
ವೀರಶೈವ ಮಹಾಸಭಾ ರಾಜ್ಯಾಧ್ಯಕ್ಷರಾದ ಶರಣ ಶಂಕರಬಿದರಿ ಇವರು ಬಸವ ಜಯಂತಿ ದಿನದಂದು ಬಸವಣ್ಣನವರ
ಭಾವಚಿತ್ರದೊಂದಿಗೆ ಎಂದೂ ಸಮಾನತೆಗೆ ಒತ್ತು ಕೊಡದ ಜಾತಿ ಆಧಾರದ ಮೇಲೆ ಪೀಠಗಳನ್ನು ರಚಿಸಿರುವ ರೇಣುಕಾಚಾರ್ಯರ
ಭಾವಚಿತ್ರವನ್ನು ಇಟ್ಟು ಪೂಜಿಸಬೇಕೆಂದು ನೀಡಿದ ಹೇಳಿಕೆಯನ್ನು ರಾಷ್ಟ್ರೀಯ ಬಸವದಳ ಉಗ್ರವಾಗಿ ಖಂಡಿಸುತ್ತದೆ. ಅಷ್ಟೇ ಅಲ್ಲದೆ
ಶರಣೆ ವೀಣಾ ಬನ್ನಂಜಿ ಇವರು ಬೌತಿಕ ಅನುಭವ ಮಂಟಪ ಇರಲಿಲ್ಲ ಎಂದು ಹೇಳಿಕೆ ನೀಡಿ ಸಮಾಜದ ಸ್ವಾಸ್ಥ್ಯವನ್ನು ಕೆಡಿಸುವ
ಹೇಳಿಕೆಯು ಬಸವ ಭಕ್ತರ ನಂಬಿಕೆಗಳಿಗೆ ಘಾಸಿಯಾಗುವಂತಹ ಹೇಳಿಕೆ ಎಂದು ಪರಿಗಣಿಸಿ ಸಾರಸಗಟಾಗಿ ರಾಷ್ಟ್ರೀಯ ಬಸವದಳ
ತಳ್ಳಿ ಹಾಕಿದೆ ಹಾಗೂ ಇವರ ವಿಚಾರ ಧಾರೆಗಳನ್ನು ಖಂಡಿಸುತ್ತದೆ ಎಂದು ತಿಳಿಸಿದ್ದಾರೆ.
ಗೋಷ್ಟಿಯಲ್ಲಿ ರಾಷ್ಟ್ರೀಯ ಬಸವದಳದ ರಾಜ್ಯಾಧ್ಯಕ್ಷರಾದ ಕೆ.ವಿರೇಶ್ ಕುಮಾರ್, ಲಿಂಗಾಯತ ಧರ್ಮ ಮಹಾಸಭಾದ
ಜಿಲ್ಲಾಧ್ಯಕ್ಷರಾದ ಎಂ.ಬಿ,ಶಂಕರಪ್ಪ, ಸವಿತಾ ಸಮಾಜದ ಅಧ್ಯಕ್ಷರಾದ ಶ್ರೀನಿವಾಸ್, ರಾಷ್ಟ್ರೀಯ ಬಸವದಳದ ಕಲ್ಮೇಶ್
ಭಾಗವಹಿಸಿದ್ದರು.