ಚಿತ್ರದುರ್ಗ: ಜಾತಿ ಗಣತಿಯಲ್ಲಿ ಈಡಿಗ-ಬಿಲ್ಲವ ಕ್ರಿಶ್ಚಿಯನ್ ಉಪಜಾತಿ ಕೈಬಿಡುವಂತೆ ಆಗ್ರಹ.

ಚಿತ್ರದುರ್ಗ  ಸೆ. 03

ಪೋಟೋ ಮತ್ತು ವರದಿ ಸುರೇಶ್ ಪಟ್ಟಣ್


ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗ ತಾನು ಕೈಗ್ಗೊಳ್ಳಲಿರುವ ಜಾತಿ ಗಣಿತಿಯಲ್ಲಿ ಈಡಿಗ ಕ್ರಿಶ್ಚಿಯನ್ ಹಾಗೂ ಬಿಲ್ಲವ ಕ್ರಿಶ್ಚಿಯನ್ ಎಂಬ ಎರಡು ಉಪಜಾತಿಗಳ ಹೆಸರನ್ನು ಪ್ರಕಟಿಸಲಾಗಿದೆ ಆದರೆ ಈ ರೀತಿಯಾಗಿ ನಮ್ಮಲ್ಲಿ ಇಲ್ಲ ಆದ್ದರಿಂದ ಪಟ್ಟಿಯಿಂದ ಇವುಗಳನ್ನು ಕೈಬಿಡಬೇಕೆಂದು ಚಿತ್ರದುರ್ಗ ಜಿಲ್ಲಾ ಆರ್ಯ ಈಡಿಗರ ಸಂಘ (ರಿ.) ಉಪ ವಿಭಾಗಾಧಿಕಾರಿಗಳ ಮೂಲಕ ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ. 


ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗ ತಾನು ಕೈಗ್ಗೊಳ್ಳಲಿರುವ ಜಾತಿ ಗಣಿತಿಯಲ್ಲಿ ಪತ್ರಿಕೆಗಳಲ್ಲಿ ಜಾತಿ ಮತ್ತು ಉಪಜಾತಿಗಳ ಪಟ್ಟಿಯನ್ನು ಬಿಡುಗಡೆಗೊಳಿಸಿದ್ದು ಅದರಲ್ಲಿ ವ್ಯತ್ಯಾಸಗಳಿದ್ದಲ್ಲಿ ಆಕ್ಷೇಪ ಸಲ್ಲಿಸಲು ಅವಕಾಶ ನೀಡಲಾಗಿದೆ. ಸದರಿ ಪಟ್ಟಿಯನ್ನು ಗಮನಿಸಿದಾಗ ಕ್ರಮಸಂಖ್ಯೆ: 318 ರಲ್ಲಿ ಈಡಿಗ ಇದ್ದು 319 ರಲ್ಲಿ ಈಡಿಗ ಕ್ರಿಶ್ಚಿಯನ್ ಎಂದು ಇದೆ ಹಾಗೇ 199ರಲ್ಲಿ ಬಿಲ್ಲವ ಇದ್ದು 190ರಲ್ಲಿ ಬಿಲ್ಲವ ಕ್ರಿಶ್ಚಿಯನ್ ಎಂದು ಇದೆ.

ಕ್ರಿಶ್ಚಿನ್ ಎಂಬುದು ಧರ್ಮ ಸೂಚಕ ಶಬ್ದವಾಗಿದ್ದು ಕ್ರಿಶ್ಚಿಯನ್ ಧರ್ಮದ ಒಳಗಡೆ ಈಡಿಗ ಮತ್ತು ಬಿಲ್ಲವ ಜಾತಿ ಯಾವುದೇ ಕಾರಣಕ್ಕು ಬರುವುದಿಲ್ಲ. ಹುಟ್ಟಿನಿಂದ ಅವನು/ಅವಳು ಈಡಿಗ ಅಥವಾ ಬಿಲ್ಲವ ಆಗಿದ್ದು ಆ ನಂತರ ಅವನು/ಅವಳು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರವಾಗಿದ್ದಲ್ಲಿ ಅವನನ್ನು/ಅವಳನ್ನು ಕ್ರಿಶ್ಚಿಯನ್ ಎಂದೇ ಪರಿಗಣಿಸಬೇಕೆಲ್ಲದೇ ಈಡಿಗ ಕ್ರಿಶ್ಚಿಯನ್ ಅಥವಾ ಬಿಲ್ಲವ ಕ್ರಿಶ್ಚಿಯನ್ ಎಂದು ಗುರುತಿಸಿಕೊಂಡು ಮುಂದಿನ ದಿನಗಳಲ್ಲಿ ಅವನು/ಅವಳು ‘ಹಿಂದುಳಿದವರ್ಗ” ಮತ್ತು “ಅಲ್ಪಸಂಖ್ಯಾತಇಲಾಖೆ” ಈ ಎರಡೂ ವರ್ಗದ ಸವಲತ್ತನ್ನು ಪಡೆದುಕೊಂಡು ಸರ್ಕಾರಕ್ಕೆ ಮೋಸ ಎಸಗುವ ಸಾಧ್ಯತೆಗಳು ಇವೆ ಇದರಿಂದ ನಮ್ಮ ಈಡಿಗ ಬಿಲ್ಲವ ಜನಾಂಗದವರಿಗೆ ಸರ್ಕಾರದ ಸವಲತ್ತು ಪಡೆಯಲು ಅನಾನುಕೂಲವು ಆಗುತ್ತದೆ.

ಈ ಕಾರಣದಿಂದ ಅವನು/ ಅವಳನ್ನು ಒಂದೇ ಈಡಿಗ ಬಿಲ್ಲವ ಎಂದು ಅಥವಾ ಕ್ರಿಶ್ಚಿಯನ್ ಎಂದು ಮಾತ್ರ ಗುರುತಿಸಲು ಸಾಧ್ಯವಾಗುವಂತೆ ನಮ್ಮ ಸಮಾಜದವತಿಯಿಂದ ಹಾಗೂ ನಮ್ಮ ಸಂಪದ ವತಿಯಿಂದ ಈಡಿಗ ಕ್ರಿಶ್ಚಿಯನ್ ಹಾಗೂ ಬಿಲ್ಲವ ಕ್ರಿಶ್ಚಿಯನ್ ಎಂಬ ಎರಡು ಉಪಜಾತಿಗಳ ಹೆಸರನ್ನು ಪಟ್ಟಿಯಿಂದ ಕೈಬಿಡಬೇಕೆಂದು ಆಗ್ರಹಿಸುತ್ತೇವೆ. 
ಆರ್ಯ ಈಡಿಗರ ಸಂಘ(ರಿ)ದ ಅಧ್ಯಕ್ಷರಾದ ಹೆಚ್.ಜೀವನ್, ಈ ಎನ್ ಕಾಂತರಾಜ್, ಸುರೇಂದ್ರ, ಶಿವಕುಮಾರ್, ಜಗದೀಶ್, ನಾಗೇಂದ್ರ ಪ್ರಸಾದ್ ಟಿ ಸ್ವಾಮಿ, ಅನುರಾಧ ರವಿಕುಮಾರ್ ಸೇರಿದಂತೆ ಇತರರು ಭಾಗವಹಿಸಿದ್ದರು. 

Views: 107

Leave a Reply

Your email address will not be published. Required fields are marked *