ಚಿತ್ರದುರ್ಗ|ಚಿತ್ರಕಲಾ ಪ್ರದರ್ಶನ ಹಾಗೂ ಗಾನ ಮತ್ತು ಚಿತ್ರ ಸಂಗಮ ಕಾರ್ಯಕ್ರಮದ ಸಮಾರೋಪ ಸಮಾರಂಭ.

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಚಿತ್ರದುರ್ಗ ನ. 30 : ಇಂದಿನ ಅಧುನಿಕ ತಂತ್ರಜ್ಞಾನದಲ್ಲಿ ಚಿತ್ರಕಲೆ ಎನ್ನುವುದು ಮಾಯಾವಾಗುತ್ತಿದೆ ಇಂತಹ ಸಮಯದಲ್ಲಿ ಹಲವಾರು ಕಲಾವಿದರನ್ನು ಸೇರಿಸಿ ಅವರು ಬರೆದ ಚಿತ್ರವನ್ನು ಸಾರ್ವಜನಿಕವಾಗಿ ಪ್ರದರ್ಶನ ಮಾಡುವುದು ಉತ್ತಮವಾದ ಕಾರ್ಯವಾಗಿದೆ ಎಂದು ಬಿಜೆಪಿ ಮುಖಂಡರು, ವಾಣೀಜ್ಯೋದ್ಯಮಿಗಳಾದ ಜಿ.ಎಸ್.ಅನಿತ್‍ಕುಮಾರ್ ತಿಳಿಸಿದರು.

ಕಲಾ ಚೈತನ್ಯ ಸೇವಾ ಸಂಸ್ಥೆ, ಸಾಂಸ್ಕøತಿಕ ಕಲಾ ಸಂಘ ಚಿತ್ರದುರ್ಗ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಬೆಂಗಳೂರು ಇವರ ಸಂಯುಕ್ತಾಶ್ರಯದಲ್ಲಿ 69ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ನಗರದ ಪತ್ರಿಕಾ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಚಿತ್ರಕಲಾ ಪ್ರದರ್ಶನ ಹಾಗೂ ಗಾನ ಮತ್ತು ಚಿತ್ರ ಸಂಗಮ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಕಲಾವಿದರನ್ನು ಗೌರವಿಸಿ ಮಾತನಾಡಿದ ಅವರು,
ನಮ್ಮ ಕಾಲದಲ್ಲಿ ಚಿತ್ರಕಲೆ ಎನ್ನುವುದು ಹೆಸರನ್ನು ಮಾಡಿತ್ತು, ಪ್ರತಿಯೊಂದು ಶಾಲೆಯಲ್ಲಿಯೂ ಸಹಾ ಚಿತ್ರಕಲಾ ಶಿಕ್ಷಕರು ಇರುತ್ತಿದ್ದರು ಅವರು ಮಕ್ಕಳು ಚಿತ್ರಕಲೆಯನ್ನು ಕಲಿಯುತ್ತಿದ್ದರು ಆದರೆ ಇಂದಿನ ದಿನಮಾನದಲ್ಲಿ ತಂತ್ರಜ್ಞಾನ ಎನ್ನುವುದು ಬಹಳ ಮುಂದುವರೆದಿದೆ. ಚಿತ್ರಕಲೆ ಯಾರಿಗೂ ಸಹಾ ಬೇಡವಾಗಿದೆ ಎಲ್ಲವನ್ನು ಸಹಾ ಕಂಪ್ಯೂಟರ್ ಮೂಲಕವೇ ಪಡೆಯಬಹುದೆಂಬ ಭಾವನೆ ಎಲ್ಲರಲ್ಲೂ ಇದೆ, ಆದರೆ ಶಿಕ್ಷಣದಲ್ಲಿ ಚಿತ್ರಕಲೆ ಅನಿವಾರ್ಯವಾಗಿದೆ ಎಂದರು.

ಕಲೆ ಎನ್ನುವುದು ಬರೆಯುವ ಮನಸ್ಸಿನಿಂದ ಬರುವಂತ ಕಲೆಯಾಗಿದೆ. ತಮ್ಮಲ್ಲಿನ ಪ್ರತಿಭೆಯನ್ನು ಹೊರ ಹಾಕುವ ಕಲೆಯಾಗಿದೆ. ಮನಸ್ಸಿನಲ್ಲಿ ಇರುವ ಭಾವನೆಯನ್ನು ಪತ್ರಿಕೆಯ ಮೇಲೆ ಮೂಡುವಂತೆ ಮಾಡುವುದು ಚಿತ್ರಕಲೆಯಾಗಿದೆ. ಚಿತ್ರಕಲೆ ಎನ್ನುವುದು ದೇವರು ಕೊಟ್ಟ ವರವಾಗಿದೆ. ಸತತವಾದ ಪರಿಶ್ರಮದಿಂದ ಕಲೆಯನ್ನು ಮುಂದುವರೆಸಬೇಕಿದೆ. ಕಷ್ಟವಾದರೂ ಸಹಾ ಕಲೆಯನ್ನು ಬಿಡಬೇಡಿ ಎಂದು
ಆನಿತ್ ಕುಮಾರ್ ಮನವಿ ಮಾಡಿದರು.

ಚಿತ್ರದುರ್ಗ ಟೌನ್ ಕೋ-ಆಪರೇಟಿವ್ ಸೊಸೈಟಿಯ ಅಧ್ಯಕ್ಷರಾದ ನಿಶಾನಿ ಜಯ್ಯಣ್ಣ ಮಾತನಾಡಿ, ಚಿತ್ರಕಲೆ ಎನ್ನುವುದು ವರವಿದ್ದಂತೆ. ಈ
ರೀತಿಯಾದ ಚಿತ್ರಕಲೆಯ ಪ್ರದರ್ಶನವನ್ನು ಬೆಂಗಳೂರಿನಲ್ಲಿ ಮಾತ್ರ ನೋಡಲು ಸಾಧ್ಯವಾಗುತ್ತಿತ್ತು ಆದರೆ ನಗರದ ನಾಗಾರಜ ಬೇದ್ರೇ
ಯವರು ನಮ್ಮ ಊರಿನಲ್ಲಿಯೂ ಸಹಾ ಕಲಾವಿದರು ಇದ್ದಾರೆ ಅವರಲ್ಲಿಯೂ ಕಲೆ ಇದೆ ಎಂದು ಅವರನ್ನು ಗುರುತಿಸುವುದರ ಮೂಲಕ
ಚಿತ್ರಕಲಾ ಪ್ರಧರ್ಶನವನ್ನು ಏರ್ಪಾಡಿಸಿರುವುದು ತುಂಬಾ ಸಂತೋಷವಾಗಿದೆ ಎಂದು ತಿಳಿಸಿ ಚಿತ್ರಕಲಾವಿದರಿಗೆ ಈ ರೀತಿಯಾದ
ಪ್ರೋತ್ಸಾಹ ಅಗತ್ಯವಾಗಿದೆ. ಕಲಾವಿದರನ್ನು ಎಲ್ಲರು ಪ್ರೋತ್ಸಾಹ ಮಾಡಬೇಕಿದೆ ಎಂದರು.

ರಾಜ್ಯ ಲಲಿತಾ ಕಲಾ ಆಕಾಡೆಮಿಯ ಸದಸ್ಯರಾದ ಸಿ.ಕಣ್ಮೇಶ್,ವಾಣೀಜ್ಯೋದ್ಯಮಿಗಳಾದ ಉತ್ತಮ ಚಂದ್ ಸುರಾನ, ಸುರೇಶ್ ಕುಮಾರ್
ಜೈನ್, ರಾಘವೇಂದ್ರ, ನಂದಿ ನಾಗರಾಜ್, ವೆಂಕಟೇಶ್ ತಿಪ್ಪೇಸ್ವಾಮಿ ಛಲವಾದಿ, ಶಂಭು, ಕಲಾ ಚೈತನ್ಯ ಸೇವಾ ಸಂಸ್ಥೆಯ ಕಾರ್ಯದರ್ಶಿ
ನಾಗರಾಜ್ ಬೇದ್ರೇ ಭಾಗವಹಿಸಿದ್ದರು.

ಇದೇ ಸಂದರ್ಭದಲ್ಲಿ ಚಿತ್ರಕಲಾ ಪ್ರದರ್ಶನದಲ್ಲಿ ನಾಗರಾಜ್ ಬೇದ್ರೇ, ನವೀನ್ ಬೇದ್ರೇ, ಅಮೂಲ್ಯ, ಜವಳಿ ಶಾಂತಕುಮಾರ್, ಮಾರುತಿ,
ಪ್ರಜ್ಞಾ ಮಂಜುನಾಥ್ ಹಾಗೂ ಹಿರಿಯೂರಿನ ಸುಷ್ಮಾರವರ ಚಿತ್ರಕಲಾಗಳ ಪ್ರದರ್ಶನಗೊಂಡವು. ಕಾರ್ಯಕ್ರಮವನ್ನು ಜಾವಿದ್ ನಿರೂಪಣೆ
ಮಾಡಿದರು

Leave a Reply

Your email address will not be published. Required fields are marked *