
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಚಿತ್ರದುರ್ಗ ಜೂ. 24 ತಮ್ಮ ಜಿಲ್ಲೆಯ ಕುಡಿಯುವ ನೀರು ಯೋಜನೆಗಳಿಗೆ ಭದ್ರಾ ಕಾಲುವೆಯಿಂದ ನೀರು ಪೂರೈಕೆಗೆ ಸಮ್ಮತಿಸುವ ದಾವಣಗೆರೆ ರೈತರು. ಚಿತ್ರದುರ್ಗದ ಪ್ರಶ್ನೆ ಬಂದಾಗ ಮಾತ್ರ ವಿರೋಧಿಸುತ್ತಾರೆ.
ಪ್ರತಿ ಹಂತದಲ್ಲೂ ಚಿತ್ರದುರ್ಗ ಜಿಲ್ಲೆಯ ನೀರಾವರಿ ಹಾಗೂ ಕುಡಿಯುವ ನೀರಿನ ಯೋಜನಗಳಿಗೆ ಅಡ್ಡಗಾಲು ಹಾಕುವ ದಾವಣಗೆರೆ ರೈತರು ಭದ್ರಾ ಜಲಾಶಯದಿಂದ ಸರ್ಕಾರ ಕಲ್ಪಿಸಿರುವ ನೀರಾವರಿ ಯೋಜನೆ ಪ್ರಮಾಣ ಏನೆಂಬುದ ಮೊದಲು ಅರಿಯಲಿ ಎಂದು ಜಿಲ್ಲಾ ನೀರಾವರಿ ಅನುಷ್ಠಾನ ಹೋರಾಟ ಸಮಿತಿ ಕಾರ್ಯಾಧ್ಯಕ್ಷರಾದ ಬಿ.ಎ.ಲಿಂಗಾರೆಡ್ಡಿ ದಾವಣಗೆರೆ ರೈತ ಸಮೂದಾಯಕ್ಕೆ ಕಿವಿ ಮಾತು ಹೇಳಿದ್ದಾರೆ.
ಚಿತ್ರದುರ್ಗ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ತೆಗೆಯುತ್ತಿರುವುದ ಜಿಲ್ಲಾ ನೀರಾವರಿ ಅನುಷ್ಠಾನ
ಹೋರಾಟ ಸಮಿತಿ ಕಾರ್ಯಾಧ್ಯಕ್ಷರಾದ ಬಿ.ಎ.ಲಿಂಗಾರೆಡ್ಡಿ ಚಿತ್ರದುರ್ಗ ಜಿಲ್ಲೆಯ ನೀರಾವರಿ ಹಾಗೂ ಕುಡಿಯುವ ನೀರಿನ ಯೋಜನೆ
ಜಾರಿ ವಿಚಾರದಲ್ಲಿ ನೆರೆಯ ದಾವಣಗೆರೆ ಜಿಲ್ಲೆ ಸದಾ ಒಂದಿಲ್ಲೊಂದು ಕ್ಯಾತೆ ತೆಗೆಯುತ್ತಿರುವುದನ್ನು ಜಿಲ್ಲಾ ನೀರಾವರಿ ಅನುಷ್ಠಾನ
ಹೋರಾಟ ಸಮಿತಿ ಉಗ್ರವಾಗಿ ಖಂಡಿಸಿದ್ದು, ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ,ಚಿಕ್ಕಮಗಳೂರು ಜಿಲ್ಲೆಯ ತರಿಕೆರೆ, ಅಜ್ಜಂಪುರ
ಪ್ರದೇಶದ ಸುಮಾರು 518 ಗ್ರಾಮಗಳಿಗೆ ಕುಡಿವ ನೀರು ಪೂರೈಕೆ ಮಾಡಲು 830 ಕೋಟಿ ರು ವೆಚ್ಚದ ಯೋಜನೆ ರೂಪಿಸಲಾಗಿದೆ.
ಯೋಜನೆಯಡಿ ಹೊಸದುರ್ಗ ಪಟ್ಟಣ ಸೇರಿದಂತೆ ತಾಲೂಕಿನ 346 ಹಳ್ಳಿಗಳಿಗೆ ಕುಡಿವ ನೀರು ಪೂರೈಕೆ ಮಾಲಾಗುತ್ತಿದೆ. ಕಾಮಗಾರಿ
ಬಹುತೇಕ ಪೂರ್ಣಗೊಂಡಿದ್ದು ನೀರು ಪೂರೈಕೆ ಟ್ರಯಲ್ ಮಾಡುವಾಗ ದಾವಣಗೆರೆ ಜಿಲ್ಲೆ ರೈತರು ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎಂದು
ದೂರಿದರು.
ತಮ್ಮ ಜಿಲ್ಲೆಯ ಕುಡಿಯುವ ನೀರು ಯೋಜನೆಗಳಿಗೆ ಭದ್ರಾ ಕಾಲುವೆಯಿಂದ ನೀರು ಪೂರೈಕೆಗೆ ಸಮ್ಮತಿಸುವ ದಾವಣಗೆರೆ ರೈತರು.
ಚಿತ್ರದುರ್ಗದ ಪ್ರಶ್ನೆ ಬಂದಾಗ ಮಾತ್ರ ವಿರೋಧಿಸುತ್ತಾರೆ. ಪ್ರತಿ ಹಂತದಲ್ಲೂ ಚಿತ್ರದುರ್ಗ ಜಿಲ್ಲೆಯ ನೀರಾವರಿ ಹಾಗೂ ಕುಡಿಯುವ
ನೀರಿನ ಯೋಜನಗಳಿಗೆ ಅಡ್ಡಗಾಲು ಹಾಕುವ ದಾವಣಗೆರೆ ರೈತರು ಭದ್ರಾ ಜಲಾಶಯದಿಂದ ಸರ್ಕಾರ ಕಲ್ಪಿಸಿರುವ ನೀರಾವರಿ
ಯೋಜನೆ ಪ್ರಮಾಣ ಏನೆಂಬುದ ಮೊದಲು ಅರಿಯಲಿ. ಒಂದು ಅರೆ ನೀರಾವರಿ ಬೆಳೆಗೆ ಮಾತ್ರ ಭದ್ರಾ ಜಲಾಶಯದಿಂದ ನೀರು
ಪೂರೈಕೆ ಎಂಬ ನಿಬಂಧನೆ ಇದ್ದರೂ ಭತ್ತ ಬೆಳೆಯಲು ಎರಡು ಬೆಳೆಗಳಿಗೆ ನೀರು ಪಡೆಯುತ್ತಿದ್ದಾರೆ. ಟೇಲ್ ಎಂಡ್‍ಗೆ ನೀರು
ಪೂರೈಕೆಯಾಗದಿದ್ದರೆ ಅದಕ್ಕೆ ಚಿತ್ರದುರ್ಗ ಜಿಲ್ಲೆ ಅಥವಾ ಇಲ್ಲಿ ಅನುಷ್ಟಾನಗೊಳಿಸಲಾಗುತ್ತಿರುವ ಕುಡಿಯುವ ನೀರು ಯೋಜನೆಗಳು
ಕಾರಣವಲ್ಲ ಎಂದಿದ್ದಾರೆ.
ನಾವುಗಳು ಕುಡಿಯುವ ನೀರು ಯೋಜನೆಗೆ ಅಡ್ಡಿ ಪಡಿಸುತ್ತಿಲ್ಲ. ಆದರೆ ಭದ್ರಾ ಕಾಲುವೆ ಸೀಳಿ ನೀರು ಎತ್ತುವುದು ಬೇಡ, ಬದಲಿ ಮೂಲ
ಹುಡುಕಿಕೊಳ್ಳಿ ಎಂದು ಹೋರಾಟ ಆರಂಭಿಸಿದ್ದಾರೆ. ಬಲದಂಡೆ ಕಾಲುವೆಯಿಂದ ನೀರು ಎತ್ತಿದರೆ ಕಡೇ ಗ್ರಾಮಗಳಿಗೆ ನೀರು
ಹೋಗುವುದಿಲ್ಲ. ರೈತರು ತೊಂದರೆ ಅನುಭವಿಸುತ್ತಾರೆ ಎಂಬ ಅವೈಜ್ಞಾನಿಕ ಸಂಗತಿಗಳ ಮುಂದಿಟ್ಟುಕೊಂಡು ಬೀದಿಗಿಳಿದಿದ್ದಾರೆ.
ಭದ್ರಾ ಜಲಾಶಯದ ಮುಂಭಾಗ ಪ್ರತಿಭಟನೆ ಕೂಡಾ ನಡೆಸಿ ದಾವಣಗೆರೆ ಬಂದ್‍ಗೂ ಕರೆ ಕೊಟ್ಟಿದ್ದಾರೆ. ಕುಡಿಯುವ ನೀರು
ರಾಷ್ಟ್ರೀಯ ಹಕ್ಕು. ಯಾರೂ ಕೂಡಾ ಇದು ನಮ್ಮದೇ ಎಂದು ಪ್ರತಿಪಾದನೆ ಮಾಡುವಂತಿಲ್ಲ. ಜನ ಸಮುದಾಯಗಳಿಗೆ ನೀರು
ಪೂರೈಕೆ ಮಾಡುವ ಜವಾಬ್ದಾರಿ ಸರ್ಕಾರದ್ದಾಗಿದ್ದು ಜಲ ಮೂಲಗಳ ಆಧರಿಸಿ ವೈಜ್ಞಾನಿಕ ನೆಲೆಗಟ್ಟಿನಲ್ಲಿ ಯೋಜನೆ ರೂಪಿಸಿ
ಕಾರ್ಯರೂಪಕ್ಕೆ ತರುತ್ತದೆ. ಹೊಸದುರ್ಗ ಪಟ್ಟಣ ಹಾಗೂ ತಾಲೂಕಿಗೆ ಕುಡಿವ ನೀರು ಆ ಭಾಗದ ಜನರ ಜೀವನ್ಮರಣದ
ಪ್ರಶ್ನೆಯಾಗಿದ್ದು ಸರ್ಕಾರದ ಇಚ್ಚಾ ಶಕ್ತಿಫಲವಾಗಿ ಜಾರಿಯಾಗುತ್ತಿದೆ ಎಂದರು.
ಯಾದವ ರೆಡ್ಡಿ ಮಾತನಾಡಿ ಬಹು ಗ್ರಾಮ ಕುಡಿಯುವ ನೀರಿಗಾಗಿ ಭದ್ರಾ ಜಲಾಶಯದಿಂದ ನಿತ್ಯ 30 ಕ್ಯೂಸೆಕ್ಸ್ ನೀರು
ಮೇಲೆತ್ತಲಾಗುತ್ತದೆ. ಚಿಕ್ಕಮಗಳೂರು, ಚಿತ್ರದುರ್ಗ ಜಿಲ್ಲೆಗಳ ತಾತ್ಕಾಲಿಕ ಬೇಡಿಕೆ ಇದಾಗಿದೆ. ಭದ್ರಾ ಕಾಲುವೆ ಸೀಳಿ ನೀರು
ಮೇಲೆತ್ತಬೇಡಿ ಎಂಬ ಕೂಗು ಎಬ್ಬಿಸಿರುವ ದಾವಣಗೆರೆ ಜಿಲ್ಲೆಯ ರೈತರು ಅನಗತ್ಯ ಗೊಂದಲ ಸೃಷ್ಟಿಸುತ್ತಿದ್ದಾರೆ. ಭದ್ರಾ
ಕಾಲುವೆಯಿಂದ ಇದೇ ಮೊದಲ ಬಾರಿಗೆ ಕುಡಿವ ನೀರಿನ ಯೋಜನೆಗಳ ರೂಪಿಸಿಲ್ಲ. ಭದ್ರಾವತಿ ತಾಲೂಕಿನ ಕೂಡ್ಲಿಗಿರಿ ಹಾಗು ಇತರೆ
ಹದಿನೆಂಟು ಗ್ರಾಮ, ಚೆನ್ನಗಿರಿ ತಾಲೂಕಿನ 4 ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಹಾಗೂ ದಾವಣಗೆರೆ ತಾಲೂಕಿನ 9
ಬಹುಗ್ರಾಮ ಕುಡಿಯುವ ನೀರು ಯೋಜನೆಗೆ ಭದ್ರಾ ಕಾಲುವೆಯಿಂದ ನೀರು ಪಡೆಯಲಾಗುತ್ತಿದೆ ಎಂದು ತಿಳಿಸಿದರು.
ದಾವಣಗೆರೆ ಜಿಲ್ಲೆಯ ರೈತರು ಹಾಗೂ ಅಲ್ಲಿನ ರಾಜಕಾರಣಿಗಳು ವಾಸ್ತವಾಂಶ ಅರಿತು ನಡೆದುಕೊಳ್ಳಲಿ. ಪದೇ ಪದೆ ಬಯಲು ಸೀಮೆ
ರೈತಾಪಿ ಸಮುದಾಯ, ಜನರ ಕೆಣಕುವುದು ಬೇಡ. ಭದ್ರಾ ಜಲಾಶಯದಲ್ಲಿನ ನೀರಿನ ಮೇಲೆ ನೆರೆ ಜಿಲ್ಲೆಯ ಜನರ ಎಲ್ಲರ ಹಕ್ಕು ಇದೆ
ಎಂಬುದ ಮನವರಿಕೆ ಮಾಡಿಕೊಳ್ಳಲಿ ಎಂದು ನೀರಾವರಿ ಅನುಷ್ಟಾನ ಹೋರಾಟ ಸಮಿತಿ ಸಲಹೆ ಮಾಡಿದೆ.
ಗೋಷ್ಟಿಯಲ್ಲಿ ರೈತರಾದ ಧನಂಜಯ, ಭೂತಯ್ಯ, ಸುರೇಶ್ ಬಾಬು, ಚಿಕ್ಕಪ್ಪನಹಳ್ಳಿ ರುದ್ರಸ್ವಾಮಿ, ಸೇರಿದಂತೆ ಇತರರು
ಭಾಗವಹಿಸಿದ್ದರು.