ಚಿತ್ರದುರ್ಗ ಜಿಲ್ಲೆಯ ಮಳೆ ವರದಿ : ಬಬ್ಬೂರಿನಲ್ಲಿ ಹೆಚ್ಚು ಮಳೆ

 

ಚಿತ್ರದುರ್ಗ, (ಮೇ.22) : ಮೇ.22 ರಂದು ಸುರಿದ ಮಳೆಯ ವಿವರದನ್ವಯ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಬಬ್ಬೂರಿನಲ್ಲಿ 32 ಮಿ.ಮೀ ಮಳೆಯಾಗಿದೆ.

ಇದು ಜಿಲ್ಲೆಯ ಅತ್ಯಧಿಕ ಮಳೆಯಾಗಿದೆ.

ಹಿರಿಯೂರು ತಾಲ್ಲೂಕಿನ ಹಿರಿಯೂರಿನಲ್ಲಿ 31 ಮಿ.ಮೀ, ಇಕ್ಕನೂರಿನಲ್ಲಿ 4.6 ಮಿ.ಮೀ, ಈಶ್ವರಗೆರೆ 12 ಮಿ.ಮೀ, ಸೂಗೂರಿನಲ್ಲಿ 23.2 ಮಳೆಯಾಗಿದೆ.

ಹೊಳಲ್ಕೆರೆ ತಾಲ್ಲೂಕಿನ ಚಿಕ್ಕಜಾಜೂರಿನಲ್ಲಿ 6.8 ಮಿ.ಮೀ, ತಾಳ್ಯ 2.4 ಮಿ.ಮೀ ಮಳೆಯಾಗಿದೆ.

ಚಳ್ಳಕೆರೆ ತಾಲ್ಲೂಕಿನ ಪರಶುರಾಂಪುರ 15.4 ಮಿ.ಮೀ, ಡಿ.ಮರಿಕುಂಟೆ 25.4 ಮಿ.ಮೀ, ನಾಯಕನಹಟ್ಟಿಯಲ್ಲಿ 15.4 ಮಿ.ಮೀ ಮಳೆಯಾಗಿದೆ.

ಹೊಸದುರ್ಗ ತಾಲ್ಲೂಕಿನ ಹೊಸದುರ್ಗದಲ್ಲಿ 8.2 ಮಿ.ಮೀ, ಮತ್ತೋಡು 4.3 ಮಿ.ಮೀ, ಶ್ರೀರಾಂಪುರದಲ್ಲಿ 5.2 ಮಿ.ಮೀ ಮಳೆಯಾಗಿದೆ.

ಮೊಳಕಾಲ್ಮುರು ತಾಲ್ಲೂಕಿನಲ್ಲಿ ಮೊಳಕಾಲ್ಮುರಿನಲ್ಲಿ 1.4 ಮಿ.ಮೀ, ರಾಯಾಪುರ 3.8 ಮಿ.ಮೀ ಹಾಗೂ ದೇವಸಮುದ್ರದಲ್ಲಿ 3.2 ಮಿ.ಮೀ ಮಳೆಯಾಗಿದೆ.

ಚಿತ್ರದುರ್ಗ ತಾಲ್ಲೂಕಿನ ಚಿತ್ರದುರ್ಗ-1ರಲ್ಲಿ 7.8 ಮಿ.ಮೀ, ಚಿತ್ರದುರ್ಗ-2ರಲ್ಲಿ 1.8 ಮಿ.ಮೀ, ಐನಹಳ್ಳಿ 7.2 ಮಿ.ಮೀ, ಭರಮಸಾಗರ 8.2 ಮಿ.ಮೀ, ಸಿರಿಗೆರೆ 8.8 ಮಿ.ಮೀ, ತುರುವನೂರು 16.4 ಮಿ.ಮೀ ಮಳೆಯಾಗಿದೆ ಎಂದು ಜಿಲ್ಲಾಧಿಕಾರಿ ಕಚೇರಿ ಪ್ರಕಟಣೆ ತಿಳಿಸಿದೆ.

The post ಚಿತ್ರದುರ್ಗ ಜಿಲ್ಲೆಯ ಮಳೆ ವರದಿ : ಬಬ್ಬೂರಿನಲ್ಲಿ ಹೆಚ್ಚು ಮಳೆ first appeared on Kannada News | suddione.

from ಚಿತ್ರದುರ್ಗ – Kannada News | suddione https://ift.tt/afVwYQ3
via IFTTT

Leave a Reply

Your email address will not be published. Required fields are marked *