ಚಿತ್ರದುರ್ಗ| ಇತಿಹಾಸ ಹಾಗೂ ಗಣಿತಶಾಸ್ತ್ರ ವಿಷಯಗಳ ಪುನಶ್ಚೇತನ ಹಾಗೂ ಪ್ರಶ್ನೆ ಪತ್ರಿಕೆ ತರಬೇತಿ ಕಾರ್ಯಾಗಾರ.

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಚಿತ್ರದುರ್ಗ ಜ. 28: ಪ್ರಶ್ನೆ ಪತ್ರಿಕೆ ಸಿದ್ಧಪಡಿಸುವಾಗ ಕೇವಲ ನಗರಗಳಲ್ಲಿ ಕಲಿಯುವ ಮಕ್ಕಳ ಕಲಿಕಾ ಮಟ್ಟವನ್ನಷ್ಟೇ ಪರಿಗಣಿಸದೆ ಗ್ರಾಮೀಣ ಪ್ರದೇಶದಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳ ಕಲಿಕಾ ಮಟ್ಟವನ್ನು ಸಹ ಪರಿಗಣಿಸಿ ಪ್ರಶ್ನೆ ಪತ್ರಿಕೆ ಸಿದ್ದಪಡಿಸಬೇಕು ಎಂದು ಚಿತ್ರದುರ್ಗ ಜಿಲ್ಲಾ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಆರ್.ಪುಟ್ಟಸ್ವಾಮಿ ಕರೆ ನೀಡಿದರು.

ನಗರದ ನಮ್ಮ ಎಕ್ಸ್ ಪರ್ಟ್ ಪದವಿ ಪೂರ್ವ ಕಾಲೇಜಿನಲ್ಲಿ ಸೋಮವಾರ ಆಯೋಜಿಸಿದ್ದ “ಇತಿಹಾಸ ಹಾಗೂ ಗಣಿತಶಾಸ್ತ್ರ
ವಿಷಯಗಳ ಸರ್ಕಾರಿ ಉಪನ್ಯಾಸಕರುಗಳ ಪುನಶ್ಚೇತನ ಹಾಗೂ ಪ್ರಶ್ನೆ ಪತ್ರಿಕೆ ತರಬೇತಿ ಕಾರ್ಯಾಗಾರದ ಉದ್ಘಾಟನಾ
ಸಮಾರಂಭ” ದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.

ಉತ್ತಮ ಉಪನ್ಯಾಸಕ ವಿದ್ಯಾರ್ಥಿಗಳ ಹಿತ ಬಯಸುವ ಪೋಷಕನ ಪಾತ್ರ ನಿರ್ವಹಿಸಿದಾಗ ಮಾತ್ರ ನಿರೀಕ್ಷಿತ ಫಲಿತಾಂಶ ಪಡೆಯಲು
ಸಾಧ್ಯವಾಗುತ್ತದೆ ಎಂದರು. ಆರಂಭದಲ್ಲಿ ಪ್ರಾಂಶುಪಾಲರ ಸಂಘದ ಅಧ್ಯಕ್ಷರಾದ ಎಸ್.ದೇವೇಂದ್ರಪ್ಪ ಪ್ರಾಸ್ತಾವಿಕವಾಗಿ
ಮಾತನಾಡುತ್ತಾ ಇಲಾಖೆಯು ಪ್ರತಿ ಉಪನ್ಯಾಸಕರ ಮತ್ತು ಪ್ರಾಂಶುಪಾಲರ ಕರ್ತವ್ಯ ನಿಷ್ಠೆ, ನಂಬಿಕೆ,ಬದ್ದತೆ ಮತ್ತು ಪ್ರಾಮಾಣಿಕ
ಸೇವೆಯನ್ನು ಗುರುತಿಸಿ ಇಲಾಖಾ ಗೌಪ್ಯ ಕೆಲಸಗಳನ್ನು ನಿರ್ವಹಿಸುವಂತೆ ಸೂಚಿಸುತ್ತದೆ.ಹೀಗಾಗಿ ಪ್ರತಿ ಉಪನ್ಯಾಸಕರುಗಳು ತಮ್ಮ
,ಆತ್ಮಸಾಕ್ಷಿಗೆ ಅನುಗುಣವಾಗಿ ತಮ್ಮಲ್ಲಿರುವ ಜ್ಞಾನವನ್ನು ವಿದ್ಯಾರ್ಥಿಗಳಿಗೆ ಧಾರೆಯೆರೆಯಲು ಮುಂದಾಗಬೇಕು ಎಂದರು.

ಉಪನ್ಯಾಸಕರ ಸಂಘದ ಅಧ್ಯಕ್ಷರಾದ ಬಿ.ಆರ್.ಮಲ್ಲೇಶ್ ರವರು ಮಾತನಾಡಿ ಈ ಹಿಂದೆ ಉಪನ್ಯಾಸಕರು ತರಗತಿಗಳಲ್ಲಿ
ಬೋಧಿಸುವುದು ಮಾತ್ರ ನಮ್ಮ ಪ್ರಮುಖ ಕರ್ತವ್ಯವೆಂದು ಭಾವಿಸಿದ್ದರು.ಆದರೆ ಇತ್ತೀಚಿನ ವರ್ಷಗಳಲ್ಲಿ ಬೋಧನೆ ಸಹಿತ ಇಲಾಖೆಯ
ಬದಲಾದ ಮಾರ್ಗಸೂಚಿಗಳನ್ವಯ ಇನ್ನಿತರ ಕೆಲಸಕಾರ್ಯಗಳನ್ನು ನಿರ್ವಹಿಸುವುದರೊಂದಿಗೆ ಜಿಲ್ಲೆಯ ಫಲಿತಾಂಶ ಸುಧಾರಣೆಗೆ
ಹೆಚ್ಚಿನ ಒತ್ತುಕೊಡಬೇಕಾಗಿದೆ ಎಂದರು.

ನಮ್ಮ ಎಕ್ಸ್‍ಪರ್ಟ್ ಪ.ಪೂ ಕಾಲೇಜಿನ ಪ್ರಾಂಶುಪಾಲರಾದ ಪಿ.ಅರುಣ್ ಕುಮಾರ್ ಮಾತಾನಾಡಿ ಕಲಿಕೆಯಲ್ಲಿ ಹಿಂದುಳಿದ ಮಕ್ಕಳು
ಹೆಚ್ಚಾಗಿ ಸರ್ಕಾರಿ ಕಾಲೇಜುಗಳಲ್ಲಿ ಪ್ರವೇಶಾತಿ ಪಡೆದು ಫಲಿತಾಂಶ ಹಿನ್ನಡೆಗೆ ಕಾರಣರಾಗುತ್ತಾರೆ.ಅಂತಹ ಮಕ್ಕಳನ್ನು ಗುರುತಿಸಿ
ಅವರಲ್ಲಿ ಕಲಿಕಾಸಕ್ತಿಯನ್ನು ಮೂಡಿಸುವ ಕಲೆಗಾರಿಕೆಯನ್ನು ಪುನಶ್ಚೇತನ ತರಬೇತಿಗಳು ಒದಗಿಸಿಕೊಡುತ್ತವೆ ಎಂದರು.

ಕಾರ್ಯಾಗಾರದಲ್ಲಿ ಇತಿಹಾಸ ವಿಷಯದ ಸಂಪನ್ಮೂಲ ವ್ಯಕ್ತಿಗಳಾದ ಡಾ.ಬಿ.ಕೃಷ್ಣಪ್ಪ, ಹೆಚ್.ಎಸ್. ಮೈಲಾರಲಿಂಗಮ್, ಎನ್.
ತಿಮ್ಮಪ್ಪ, ಗಣಿತಶಾಸ್ತ್ರ ವಿಷಯದ ಸಂಯೋಜಕರಾದ ಕೃಷ್ಣಮೂರ್ತಿ, ಸಂಪನ್ಮೂಲ ವ್ಯಕ್ತಿಗಳಾದ ಡಾ.ತಿಮ್ಮಾರೆಡ್ಡಿ,ಡಿ.ವೀರಣ್ಣ,
ಮಂಜುನಾಥ್ ಮತ್ತು ಉಮೇಶ್ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಯರಾದ ಕುಮಾರಿ ಭೂಮಿಕ & ದಿಶಾ ಪ್ರಾರ್ಥಿಸಿದರು,

ಉಪನ್ಯಾಸಕಿ ಶ್ರೀಮತಿ ಪದ್ಮ ಆರ್.ಜೈನ್ ಕಾರ್ಯಕ್ರಮ ನಿರ್ವಹಣೆ ಮಾಡಿದರು. ದಾವಣಗೆರೆ ಹಾಗೂ ಚಿತ್ರದುರ್ಗ ಜಿಲ್ಲೆಯ ಸರ್ಕಾರಿ
ಕಾಲೇಜುಗಳ ಗಣಿತ ಮತ್ತು ಇತಿಹಾಸ ವಿಷಯದ ಸರ್ಕಾರಿ ಕಾಲೇಜುಗಳ ಉಪನ್ಯಾಸಕರುಗಳು ಕಾರ್ಯಾಗಾರದಲ್ಲಿ
ಭಾಗವಹಿಸಿದ್ದರು.

Leave a Reply

Your email address will not be published. Required fields are marked *