ಚಿತ್ರದುರ್ಗ| ಭಾರತೀಯ ಜೀವ ವಿಮಾ ಸಂಸ್ಥೆ ದೇಶದಲ್ಲಿಯೇ ಅತ್ಯುತ್ತಮ ವಿಶ್ವಾಸವುಳ್ಳ ವಿಮಾ ಸಂಸ್ಥೆ: ಶಾಖಾ ವ್ಯವಸ್ಥಾಪಕ ಎಸ್. ಹನುಮಂತ ನಾಯಕ.

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ನಂತರ ಮಾತನಾಡಿ ಭಾರತೀಯ ಜೀವ ವಿಮಾ ಸಂಸ್ಥೆ ದೇಶದಲ್ಲಿಯೇ ಏಕೈಕ ಅತ್ಯುತ್ತಮ ವಿಶ್ವಾಸವುಳ್ಳ ವಿಮಾ ಸಂಸ್ಥೆಯಾಗಿದೆ, ದೇಶದ ಬಹುತೇಕ ಜನರು ಈ ವಿಮಾ ಸಂಸ್ಥೆಯ ಬಗ್ಗೆ ಅತ್ಯಂತ ವಿಶ್ವಾಸವನ್ನು ಇಟ್ಟುಕೊಂಡಿದ್ದು ವಿಮಾ ಪಾಲಿಸಿದಾರರಾಗಿದ್ದಾರೆ. ಹಾಗಾಗಿ ನಾವುಗಳೆಲ್ಲಾರು ಸಹಕಾರ ಸಹಬಾಳ್ವೆಯಿಂದ ವಿಮಾ ಸಂಸ್ಥೆಯ ಅಭಿವೃದ್ಧಿಗೆ ಶ್ರಮಿಸೋಣಾ ಎಂದರು.

ನಾನು ಈ ಶಾಖೆಗೆ ಹೊಸದಾಗಿ ಹಿರಿಯ ಶಾಖಾ ವ್ಯವಸ್ಥಾಪಕರಾಗಿ ಅಧಿಕಾರ ವಹಿಸಿಕೊಂಡಿದ್ದೇನೆ ನಿಮ್ಮಗಳ ಸಹಕಾರ ಬಹಳ ಮುಖ್ಯವಾಗಿದೆ ವ್ಯವಸ್ಥಾಪಕ ಮತ್ತು ಸಿಬ್ಬಂದಿ ವರ್ಗ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ನಿಮ್ಮಗಳ ಸಹಕಾರದಿಂದ ನನ್ನ ಸೇವಾ ಅವಧಿಯಲ್ಲಿ ನಮ್ಮ ಶಾಖೆ ವಿಭಾಗ ಮಟ್ಟದಲ್ಲಿ ಅತ್ಯುನ್ನತ ಗುರಿ ಮತ್ತು ಶ್ರೇಣಿ ತಲುಪುವುದಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಹೇಳಿ ಎಲ್ಲರಿಗೂ ವಿಮಾ ಸಪ್ತಾಹದ ಶುಭಾಶಯಗಳನ್ನು ತಿಳಿಸಿದರು.

ಈ ಸಂದರ್ಭದಲ್ಲಿ ಸಹಾಯಕ ಶಾಖ ವ್ಯವಸ್ಥಾಪಕ ಲಕ್ಷ್ಮಿಕಾಂತ್, ಹಿರಿಯ ಆಡಳಿತ ಅಧಿಕಾರಿ ಸೀತಾ ಲಕ್ಷ್ಮಿ ಅಭಿವೃದ್ಧಿ ಅಧಿಕಾರಿ ಮಹೇಶ್ ಎ. ಓ. ಶ್ಯಾಮಣ್ಣ ಎ. ಎ.ಓ. ಯತೀಶ್ ಸಾಂಸ್ಕøತಿಕ ಮತ್ತು ಕ್ರೀಡಾ ಕಾರ್ಯದರ್ಶಿ ಚಂದ್ರು ಎಚ್.ಜಿ.ಎ.ಗಳಾದ ರೇಣುಕಾ, ಇಂದಿರಾ,ಮಮತಾ, ನಿರ್ಮಲ, ಸುಮಾ, ಗೀತಾ, ಗಿರಿವಾಣಿ, ಶೇಷದ್ರಿ, ಶ್ರೀನಿವಾಸ್ ಮಹಿಳಾ ಪ್ರತಿನಿಧಿ ಕೆ. ಸುಜಾತ ತ್ರಿವೇಣಿ,ವೀಣಾ ದೇವರಾಜ್ ವಿವಿಧ ಶ್ರೇಣಿಯ ವಿಮಾ ಪ್ರತಿನಿಧಿಗಳು ಭಾಗವಹಿಸಿದ್ದರು.

Leave a Reply

Your email address will not be published. Required fields are marked *