ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಚಿತ್ರದುರ್ಗ ಜು. 05 : ಚಿತ್ರದುರ್ಗ ಲೋಕಸಭಾ ಸದಸ್ಯರು ಹಾಗೂ ಮಾಜಿ ಉಪ ಮುಖ್ಯಮಂತ್ರಿಗಳಾದ ಗೋವಿಂದ ಕಾರಜೋಳರವರ ಆಪ್ತ ಸಹಾಯಕನಾಗಿ ಸರ್ಕಾರದಿಂದ ಆದೇಶ ಪಡೆದು ಕರ್ತವ್ಯಕ್ಕೆ ನಿಯೋಜನೆಗೊಂಡಿರುತ್ತೇನೆ ಎಂದು ದಾವಣಗೆರೆಯ ಫಾರ್ಮಸಿ ಅಧಿಕಾರಿ ಸಿ.ಹೆಚ್.ದೇವರಾಜ್ ತಿಳಿಸಿದ್ದಾರೆ.
ಈ ಬಗ್ಗೆ ಹೇಳಿಕೆಯನ್ನು ನೀಡಿರುವ ಅವರು, ಕಳೆದ 20 ವರ್ಷಗಳಿಂದ ದಾವಣಗೆರೆ ಲೋಕಸಭಾ ಸದಸ್ಯರ ಆಪ್ತ ಸಹಾಯಕನಾಗಿ ನಾನು ಕೆಲಸ ಮಾಡಿದ್ದೇನೆ. ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಕೇಂದ್ರ ಪುರಸ್ಕೃತ ಯೋಜನೆ ಗಳಾದ ಸ್ಮಾರ್ಟ್ಸಿಟಿ ಯೋಜನೆ, ಕುಡಿಯುವ ನೀರಿನ ಜಲಸಿರಿ ಯೋಜನೆ, ಕೇಂದ್ರಿಯ ವಿದ್ಯಾಲಯ, ದಾವಣಗೆರೆ ಹಾಗೂ ಹರಿಹರದಲ್ಲಿ ನೂತನ ರೈಲ್ವೆ ನಿಲ್ದಾಣಗಳ ನಿರ್ಮಾಣ, ಕೆರೆ ತುಂಬಿಸುವ ಯೋಜನೆಗಳು, ಈ ರೀತಿ ಅನೇಕ ಯೋಜನೆಗಳನ್ನು ದಾವಣಗೆರೆಗೆ ತರುವಲ್ಲಿ ಸಂಸದರ ಜೊತೆಗೂಡಿ ಶ್ರಮಿಸಿದ್ದೇನೆ, ಇದೇ ಉತ್ಸುಕತೆಯಲ್ಲಿ ಚಿತ್ರದುರ್ಗದಲ್ಲಿಯೂ ಕೂಡ ಕೆಲಸ ಮಾಡುವ ಉಮ್ಮೇದಿನಲ್ಲಿದ್ದೇನೆ, ಮುಂಬರುವ ದಿನಗಳಲ್ಲಿ ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಅಭಿವೃದ್ಧಿ ವಿಚಾರದಲ್ಲಿ ತಮ್ಮೆಲ್ಲರ ಸಲಹೆ, ಸಹಕಾರ, ಮಾರ್ಗದರ್ಶನ ಬಯಸುತ್ತೇನೆ ಎಂದು ತಿಳಿಸಿದ್ದಾರೆ.
ಸಾರ್ವಜನಿಕರು ಸಂಸದರ ಕಾರ್ಯಕ್ರಮಗಳು, ಅವರ ದಿನಚರಿಯ ಬಗ್ಗೆ ಮಾಹಿತಿಯನ್ನು ಪಡೆಯಲು ನನ್ನ ದೂರವಾಣಿ ಸಂಖ್ಯೆ 9448488022ನ್ನು ಸಂಪರ್ಕ ಮಾಡಬಹುದಾಗಿದೆ ಎಂದಿದ್ದಾರೆ.