ಚಿತ್ರದುರ್ಗ: ಮಾದಿಗ-ಹೊಲೆಯರಿಗೆ ಪ್ರತ್ಯೇಕ ಜಾತಿ ಪ್ರಮಾಣ ಪತ್ರ ನೀಡುವಂತೆ ಮನವಿ

ಚಿತ್ರದುರ್ಗ ಸೆ 26

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ನಮ್ಮದು ಮೂಲ ಜಾತಿ ಮಾದಿಗ ಅಥವಾ ಹೊಲೆಯ ಈ ಹಿನ್ನಲೆಯಲ್ಲಿ ನಮಗೆ ಜಾತಿ ಪ್ರಮಾಣ ಪತ್ರವನ್ನು ಮಾದಿಗ ಅಥವಾ ಹೊಲೆಯ ಎಂದು ನೀಡುವಂತೆ ಅಂಬೇಡ್ಕರ್ ಸಂವಿಧಾನ ಸಂರಕ್ಷಣಾ ಸಮಿತಿ ಚಿತ್ರದುರ್ಗ ಜಿಲ್ಲಾ ಸಮಿತಿ ವತಿಯಿಂದ ಶುಕ್ರವಾರ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.

ಪರಿಶಿಷ್ಟ ಜಾತಿಯಲ್ಲಿ ಜಾರಿಯಾಗಿರುವ ಒಳಮೀಸಲಾತಿ ಜಾರಿ ಸಂಬಂಧ,ಪ್ರವರ್ಗ 1.ಪ್ರವರ್ಗ 2. ಹಾಗೂ ಪ್ರವರ್ಗ 3. ಅನ್ವಯ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಕ್ರಮವಹಿಸಿ ಈ ಮೊದಲು ನೀಡಿರುವ ,ಜಾತಿ ಪ್ರಮಾಣಪತ್ರ ಜಾತಿಯಲ್ಲಿ. (ಪರಿಶಿಷ್ಟ ಜಾತಿ) ಉಪಜಾತಿಯಲ್ಲಿ. (ಆದಿ ಕರ್ನಾಟಕ ಆದಿ ದ್ರಾವಿಡ ಹಾಗೂ ಇತರೇ) ಇರುತ್ತದೆ.

ದಯಮಾಡಿ ತಾವು ಸಾರ್ವಜನಿಕರ ಹಿತಾಸಕ್ತಿಯಿಂದ. ಆರು ತಾಲ್ಲೂಕುಗಳ ಸಂಬಂಧಪಟ್ಟ ಅಧಿಕಾರಿಗಳಿಗೆ ಸದರಿ ಪ್ರಮಾಣ ಪತ್ರವನ್ನು ಮಾದಿಗ ಅಥವಾ ಹೊಲೆಯ ಎಂದು ನೀಡುವಂತೆ ಅದೇಶಿಸಬೇಕು, ಅವರನ್ನು ಅನಾವಶ್ಯಕವಾಗಿ ಕಛೇರಿಗೆ ಅಥವಾ ಅಧಿಕಾರಿಗಳ ಹಿಂದೆ ಅಲೆದಾಡಿಸದೇ.ಮಾದಿಗ ಅಥವಾ ಹೊಲೆಯ.ಅಥವಾ ಆದಿ ಕರ್ನಾಟಕ ಆದಿ ದ್ರಾವಿಡ ಎಂದು ಒಳಮೀಸಲಾತಿಯಲ್ಲಿ ವಿಂಗಡಿಸಿರುವಂತೆ ಬದಲಾಯಿಸಿ ಕೊಡಬೇಕೆಂದು, ಸಂಬಂಧಪಟ್ಟ ಇಲಾಖೆಗೆ ತಿಳಿಸಲು ಕೋರಿ ಜಿಲ್ಲಾಧಿಕಾರಿಗಳ ಕಚೇರಿ ಆಫೀಸ್ ಅಸಿಸ್ಟೆಂಟ್ ಸುಜಾತ ಮೇಡಂ ಇವರಿಗೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಅಂಬೇಡ್ಕರ್ ಸಂವಿಧಾನ ಸಂರಕ್ಷಣಾ ಸಮಿತಿಯ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ರಾಮಚಂದ್ರ ಕೆ, ರಾಜ್ಯ ಪ್ರಧಾನ ಕಾರ್ಯದರ್ಶಿಯಾದ ರಾಘವೇಂದ್ರ ಆರ್, ಚಿತ್ರದುರ್ಗ ಜಿಲ್ಲಾ ಅಧ್ಯಕ್ಷರಾದ ಶಿವರಾಜ್ ಕುಮಾರ್, ಜಿಲ್ಲಾ ಉಪಾಧ್ಯಕ್ಷರಾದ ಲಕ್ಷ್ಮಣ್ ರಾವ್, ಹಿರಿಯೂರು ತಾಲ್ಲೂಕು ಅಧ್ಯಕ್ಷರಾದ ಓಂಕಾರ ಮೂರ್ತಿ ಕೆ, ಚಿತ್ರದುರ್ಗ ತಾಲೂಕು ಅಧ್ಯಕ್ಷರಾದ ನಾಗರಾಜ್,ಯುವ ಘಟಕ ಜಿಲ್ಲಾ ಅಧ್ಯಕ್ಷರಾದ ಮಳ್ಳಪ್ಪ, ಹಾಗೂ ಇನ್ನೂ ಉಪಸ್ಥಿತರಿದ್ದರು

Leave a Reply

Your email address will not be published. Required fields are marked *