ಚಿತ್ರದುರ್ಗ,ಸೆ.25 : ಮುಡಾ ಹಗರಣದಲ್ಲಿ ಸಿಲುಕಿರುವ ಮುಖ್ಯಮಂತ್ರಿ ಸಿದ್ಧರಾಮಯ್ಯ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ ಬುಧವಾರ ಬಿಜೆಪಿ ಕಾರ್ಯಕರ್ತರು ನಗರದ ಒನಕೆ ಓಬವ್ವ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಇನ್ನೂ ಮೂಡಾ ಹಗರಣದಲ್ಲಿ ರಾಜ್ಯಪಾಲರು ಸಿ ಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿದ್ದು ಹೈಕೋರ್ಟ್ ಕೂಡ
ರಾಜ್ಯಪಾಲರ ಅನುಮತಿಯನ್ನ ಎತ್ತಿ ಹಿಡಿದು ಸಿ ಏಂ ಸಿದ್ದರಾಮಯ್ಯ ವಿರುದ್ಧ ಮೂಡಾ ಹಗರಣದ ಕುರಿತು ತನಿಖೆ ನಡೆಸಲು ಅನುಮತಿ
ನೀಡಿದ್ದು ಈ ಹಿನ್ನೆಲೆ ಚಿತ್ರದುರ್ಗ ಜಿಲ್ಲಾ ಬಿಜೆಪಿ ವತಿಯಿಂದ ಸಂಸದ ಗೋವಿಂದ ಕಾರಜೋಳ ನೇತೃತ್ವದಲ್ಲಿ ನಗರದ ಓಬವ್ವ ವೃತ್ತದಲ್ಲಿ
ಪ್ರತಿಭಟನೆ ನಡೆಸಿದ್ದು ಸಿದ್ದರಾಮಯ್ಯ ವಿರುದ್ಧ ಘೋಷಣೆಗಳನ್ನ ಕೂಗಿ ಆಕ್ರೋಷ ವ್ಯಕ್ತಪಡಿಸಿದ್ದು ಸಿದ್ದರಾಮಯ್ಯ ರಾಜೀನಾಮೆ ನೀಡುವಂತೆ
ಆಗ್ರಹ ಮಾಡಿದ್ದಾರೆ.
ಈ ವೇಳೆ ಸಂಸದ ಗೋವಿಂದ ಕಾರಜೋಳ ಮಾತನಾಡಿ, ನ್ಯಾಯಾಲಯ ಸಿದ್ದರಾಮಯ್ಯ ಅವರ ವಿರುದ್ದ ತೀರ್ಪು ನೀಡಿದ ಹಿನ್ನೆಲೆಯಲ್ಲಿ
ಕಳಂಕ ರಹಿತ ಮುಖ್ಯಮಂತ್ರಿ ಎಂಬ ಹೆಸರನ್ನು ಪಡೆಯಬೇಕಿದೆ. ಇಲ್ಲವಾದಲ್ಲಿ ತಮ್ಮ ಕುಟುಂಬ ರಾಜಕಾರಣದಲ್ಲಿ ಸಿಲುಕಿ, ಕಳಂಕಿತ
ಮುಖ್ಯಮಂತ್ರಿ ಎಂಬ ಬಿರುದನ್ನು ಪಡೆಯಬೇಕಾಗುತ್ತದೆ ಎಂದು ವಾಗ್ದಾಳಿ ನಡೆಸಿದರು.
ಮುಡಾದಲ್ಲಿ ಸಿದ್ದರಾಮಯ್ಯ ಅವರು ತಮ್ಮ ಪತ್ನಿಯ ಹೆಸರಿನಲ್ಲಿ 3.5 ಲಕ್ಷಕ್ಕೆ ಜಮೀನು ಖರೀದಿ ಮಾಡಿ ಅದರಿಂದ 67 ಕೋಟಿ ರೂ.ಗಳನ್ನು
ಕಬಳಿಸಿದ್ದಾರೆ. ಇದು ಪ್ರಜಾಸತ್ತಾತ್ಮಕವಾಗಿ ಮಾಡಿದ ದ್ರೋಹವಾಗಿದ್ದು, ಇದನ್ನು ರಾಜ್ಯದ ಜನತೆ ಒಪ್ಪುವುದಿಲ್ಲ. ನ್ಯಾಯಾಲಯ ನೀಡಿದ
ತೀರ್ಪಿನ ಹಿನ್ನೆಲೆಯಲ್ಲಿ ಇಂದು ಸಂಜೆ ಒಳಗಾಗಿ ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು ಇಲ್ಲವಾದಲ್ಲಿ ಉಗ್ರ
ಹೋರಾಟ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.
ಹೈಕೋರ್ಟ್‍ನಲ್ಲಿ ಸಿದ್ದರಾಮಯ್ಯ ಅರ್ಜಿ ವಜಾ ಆಗಿ ರಾಜ್ಯಪಾಲರ ಆದೇಶ ಎತ್ತಿ ಹಿಡಿದಿದೆ. ಈ ಮೂಲಕ ಸಿದ್ದರಾಮಯ್ಯ ಹಗರಣದಲ್ಲಿ
ಇರುವುದು ಸಾಬೀತಾಗಿದೆ. ಆದೇಶ ಬಂದ ಕೂಡಲೆ ಕೋರ್ಟ್ ಅವದಿ ಮುಗಿಯುವ ವಳೆಗೆ ಸಿದ್ದರಾಮಯ್ಯ ರಾಜೀನಾಮೆ ಕೊಡುವುದಾಗಿ
ನಾಡಿನ ಜನ ಅಂದುಕೊಂಡಿದ್ದು ಸಿದ್ದರಾಮಯ್ಯ ಬಂಡತನ ಪ್ರದರ್ಶನ ಮಾಡಿ ಕುತಂತ್ರದಿಂದ ಮೋದಿ ಮೋಲೆ ಸಂಚಿನ ಆರೋಪ
ಮಾಡುತ್ತಿದ್ದು ತಮ್ಮನ್ನ ತಾವು ಆರೋಪಿ ಎಂದು ಸಾಬೀತು ಮಾಡುತ್ತಿದ್ದಾರೆ. ನರೇಂದ್ರ ಮೋದಿಯವರು ಕುತಂತ್ರ ರಾಜಕಾರಣ
ಮಾಡುವುದಿಲ್ಲ. ಆದ್ದರಿಂದ ಸಿದ್ದರಾಮಯ್ಯ ಅವರು ತಪ್ಪಿತಸ್ಥರ ಸ್ಥಾನದಲ್ಲಿದ್ದು ರಾಜೀನಾಮೆ ಕೊಟ್ಟು ತನಿಖೆಗೆ ಆದೇಶ ಮಾಡಬೇಕು
ಹಾಗಾಗಿ ಕಳಂಕ ಶಾಶ್ವತವಾಗಿ ಅಂಟಿಕೊಳ್ಳುತ್ತದೆ. ಹಾಗಾಗಿ ಸಿದ್ದರಾಮಯ್ಯ ಅವರು ಸಂಜೆಯೊಳಗೆ ಸಿದ್ದರಾಮಯ್ಯ ಅವರು ರಾಜೀನಾಮೆ
ಕೊಡಬೇಕು ಎಂದು ಗೋವಿಂದ ಕಾರಜೋಳ ಆಗ್ರಹ ಮಾಡಿದ್ದಾರೆ
ಈ ಹಿಂದೆ ಇದ್ದಂತಹ ಮುಖ್ಯಮಂತ್ರಿಗಳು ತಮ್ಮ ಮೇಲೆ ಆರೋಪ ಬಂದಾಗ ಅವರುಗಳು ಸಹ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ
ನಿಷ್ಪಕ್ಷಪಾತ ತನಿಖೆ ನಡೆಯಲು ಅವಕಾಶ ಕಲ್ಪಸಿದ್ದರು. ಅದೇ ರೀತಿ ಸಿದ್ದರಾಮಯ್ಯ ರಾಜೀನಾಮೆ ನೀಡಿ ತನಿಖೆಗೆ ಒಳಗಾಗಬೇಕು.
ತನಿಖೆಯಲ್ಲಿ ತಪ್ಪಿತಸ್ಥರು ಅಲ್ಲ ಎಂದು ತಿಳಿದ ಮೇಲೆ ಅಧಿಕಾರವನ್ನು ಬೇಕಾದರೆ ಪುನಃ ಪಡೆಯಲಿ ಎಂದು ಸಲಹೆ ನೀಡಿದರು.
ಪ್ರತಿಭಟನೆಯಲ್ಲಿ ಜಿಲ್ಲಾಧ್ಯಕ್ಷ ಮುರುಳಿ, ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್, ಮಾಜಿ ಶಾಸಕ ಎಸ್.ಕೆ.ಬಸವಾರಾಜನ್, ಸೌಭಾಗ್ಯ
ಬಸವರಾಜನ್, ಬಿಜೆಪಿ ನಗರಾಧ್ಯಕ್ಷ ನವೀನ್ ಚಾಲುಕ್ಯ, ಗ್ರಾಮಾಂತರ ಅಧ್ಯಕ್ಷ ಕಲ್ಲೇಶಯ್ಯ, ಅನಿಲ್ ಕುಮಾರ್, ಡಾ.ಸಿದ್ದಾರ್ಥ
ಗುಂಡಾರ್ಪಿ, ದಗ್ಗೆ ಶಿವಪ್ರಕಾಶ್, ನಾಗರಾಜ್ ಬೇದ್ರೆ ವೆಂಕಟೇಶ್ ಯಾದವ್, ಮಲ್ಲಿಕಾರ್ಜನ್, ಶಿವಣ್ಣಚಾರ್,ಮಹಿಳಾ ಘಟಕದ ಅಧ್ಯಕ್ಷ
ಶ್ರೀಮತಿ ಶೈಲಜ ರೆಡ್ಡಿ, ಬಸಮ್ಮ, ನಂದಿ ನಾಗರಾಜ್, ಸೇರಿದಂತೆ ಇತರರು ಭಾಗವಹಿಸಿದ್ದರು.