ಚಿತ್ರದುರ್ಗ ನಗರಸಭೆ ನೂತನ ಅಧ್ಯಕ್ಷೆ ಎಂ.ಪಿ. ಅನಿತಾ ರಮೇಶ್ ಅಧಿಕಾರ ಸ್ವೀಕಾರ – ಸಹಕಾರದ ಮಹತ್ವ ಒತ್ತಿ ಹೇಳಿದರು.

ಚಿತ್ರದುರ್ಗ, ಸೆ 15 

ವರದಿ ಪೋಟೋ ಸುರೇಶ್ ಪಟ್ಟಣ್


ಅಭಿವೃದ್ಧಿ ವಿಚಾರದಲ್ಲಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಸಹಕಾರ ಮುಖ್ಯವಾಗುತ್ತದೆ. ಎಂದು ನಗರಸಭೆ ನೂತನ ಅಧ್ಯಕ್ಷೆ ಎಂ.ಪಿ.ಅನಿತಾರಮೇಶ್ ಅಭಿಪ್ರಾಯಪಟ್ಟರು.
ಇಲ್ಲಿನ ನಗರಸಭೆ ಕಚೇರಿಯಲ್ಲಿ ಸೋಮವಾರದಂದು ಅಧಿಕಾರ ಸ್ವಿಕಾರ ಮಾಡಿದ ಬಳಿಕ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಸಭೆಯಲ್ಲಿ ಅವರು ಮಾತನಾಡಿದ ಅವರು. ಅಧಿಕಾರಿಗಳು, ಸಿಬ್ಬಂದಿಗಳು ಮತ್ತು ಚುನಾಯಿತ ಪ್ರತಿನಿಧಿಗಳ ನಡುವೆ ಉತ್ತಮ ಬಾಂಧವ್ಯ ಇದ್ದರೆ ಮಾತ್ರ ಏನಾದರೂ ಪ್ರಗತಿ ಕಾಣಲು ಸಾದ್ಯವಾಗುತ್ತದೆ. ಎಲ್ಲರೂ ಅವರವರ ಕರ್ತವ್ಯಗಳನ್ನು ಸಮರ್ಪಕವಾಗಿ ನಿರ್ವಹಿಸಬೇಕಾಗುತ್ತದೆ. ಕಾನೂನು ಮತ್ತು ನಿಯಮಾವಳಿಗಳನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕು. ಚುನಾಯಿತ ಪ್ರತಿನಿಧಿಗಳು ಮತ್ತು ಅಧಿಕಾರಿ ವರ್ಗ ಜನರ ನೋವು ನಲಿವುಗಳನ್ನು ಅರ್ಥಮಾಡಿಕೊಂಡು ಮುನ್ನಡೆಯಬೇಕು ಎಂದರು.
ಚಿತ್ರದುರ್ಗ ನಗರಸಭೆ ದಿನದಿಂದ ದಿನಕ್ಕೆ ಬೆಳೆಯುತ್ತಿದೆ. ನಗರದ ವ್ಯಾಪ್ತಿಯೂ ವಿಸ್ತಾರಗೊಳ್ಳುತ್ತಿದ್ದು, ಸಮಸ್ಯೆಗಳೂ ಸಹ ಅಷ್ಟೇ ಪ್ರಮಾಣದಲ್ಲಿ ಉಲ್ಬಣಗೊಳ್ಳುವುದು ಸಹಜ. ಆದರೆ ಸಾರ್ವಜನಿಕ ಕ್ಷೇತ್ರದಲ್ಲಿರುವ ನಾವು ಯಾರೂ ಸಹ ನಮ್ಮ ಕರ್ತವ್ಯಗಳಿಂದ ವಿಮುಖರಾಗಕೂಡದು ಪರಸ್ಪರ ಸೇವಾ ಮನೋಭಾವಗಳಿಂದ ಮತ್ತು ಅವರವರ ಕರ್ತವ್ಯಗಳನ್ನು ಅರಿತು ಕಾರ್ಯನಿರ್ವಹಿಸಿದಾಗ ಮಾತ್ರ ವ್ಯವಸ್ಥೆಯಲ್ಲಿ ಬದಲಾವಣೆ ತರಲು ಸಾಧ್ಯವಾಗುತ್ತದೆ ಎಂದು ಎಂ.ಪಿ.ಅನಿತಾ ರಮೇಶ್ ಹೇಳಿದರು.
ನಗರಸಭೆಯ ಪ್ರಭಾರಿ ಅಧ್ಯಕ್ಷೆಯಾಗಿದ್ದ ಉಪಾಧ್ಯಕ್ಷೆ ಶಕೀಲಾಭಾನು ಅವರು ನೂತನ ಅಧ್ಯಕ್ಷೆ ಎಂ.ಪಿ.ಅನಿತಾ ರಮೇಶ್ ಅವರಿಗೆ ಅಧಿಕಾರ ಹಸ್ತಾಂತರ ಮಾಡಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಪೌರಾಯುಕ್ತರಾದ ಶ್ರೀಮತಿ ಲಕ್ಷ್ಮೀ, ಸ್ಥಾಯಿ ಸಮಿತಿ ಅಧ್ಯಕ್ಷ ನಸ್ರುಲ್ಲಾ, ನಗರಸಭೆ ಸದಸ್ಯರಾದ ಮೀನಾಕ್ಷಿ, ಹರೀಶ್, ನರಸಿಂಹಮೂರ್ತಿ, ಮಾಜಿ ಸದಸ್ಯರಾದ ಟಿ.ರಮೇಶ್, ಮೀನಾಕ್ಷಿ, ಹರೀಶ್, ನರಸಿಂಹ ಮೂರ್ತಿ, ಶ್ರೀನಿವಾಸ್, ನಗರಸಭೆ ಅಧಿಕಾರಿಗಳಾದ ಶ್ರೀಮತಿ ರೇಣುಕಾ, ಇಂಜಿನಿಯರ್ ರಾಜು, ಗುತ್ತಿಗೆದಾರ ಜೋಗಿಮಟ್ಟಿ ಈ.ಶಿವಕುಮಾರ್ ಹಾಜರಿದ್ದರು.

Views: 18

Leave a Reply

Your email address will not be published. Required fields are marked *