
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಚಿತ್ರದುರ್ಗ ಫೆ. 19 : ಸರಿಗಮ ಸಂಗೀತ ಪಾಠಶಾಲೆ ಚಿತ್ರದುರ್ಗ ವತಿಯಿಂದ ಪರಮರತ್ನ ಸಂಗೀತ ಸಂಸ್ಥೆ ಅರ್ಪಿಸುವ ಗಾನಯೋಗಿ ಪಂಡಿತ ಪಂಚಾಕ್ಷರಿ ಗವಾಯಿಗಳವರ ಜಯಂತ್ಯೋತ್ಸವ ಅಂಗವಾಗಿ ನಗರದ ತರಾಸು ರಂಗಮಂದಿರದಲ್ಲಿ ಫೆ. 22 ಮತ್ತು 23 ರಂದು ಸಂಜೆ 4.30ಕ್ಕೆ
ಸರಿಗಮ ಸಂಗೀತ ನಾಟಕೋತ್ಸವ ಆಯೋಜಿಸಲಾಗಿದೆ ಎಂದು ಸರಿಗಮ ಸಂಗೀತ ನಾಟಕೋತ್ಸವ ಸಮಿತಿ ಕಾರ್ಯದರ್ಶಿ ಸುಜೀತ
ಕುಲಕರ್ಣಿ ತಿಳಿಸಿದರು.
ನಗರದ ಪತ್ರಿಕಾಭವನದಲ್ಲಿ ಬುಧವಾರ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು. ಫೆ. 22 ರಂದು ಉದ್ಘಾಟನಾ
ಸಮಾರಂಭದಲ್ಲಿ ಮಾದರ ಚೆನ್ನಯ್ಯ ಗುರುಪೀಠದ ಶ್ರೀ ಬಸವಮೂರ್ತಿ ಮಾದರ ಚೆನ್ನಯ್ಯ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸುವರು.
ಮುಖ್ಯ ಅತಿಥಿಗಳಾಗಿ ಶಾಸಕ ಕೆ. ಸಿ. ವೀರೇಂದ್ರ ಪಪ್ಪಿ, ರಾಜ್ಯ ಪ್ರಶಸ್ತಿ ಪುರಸ್ಕೃತ ರಂಗಕಾರ್ಮಿಗಳ ಚಳ್ಳಕೆರೆ ಕೆ.ಪಿ. ಭೂತಯ್ಯ,
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ. ಬಿ. ಎಂ. ಗುರುನಾಥ್, ರಿಯಲ್ ಎಸ್ಟೇಟ್ ಉದ್ಯಮಿ ಸೈಟ್ ಬಾಬಣ್ಣ
ಭಾಗವಹಿಸುವರು. ಸರಿಗಮ ಸಂಗೀತ ನಾಟಕೋತ್ಸವ ಅಧ್ಯಕ್ಷ ಸತ್ಯನಾರಾಯಣ ರೆಡ್ಡಿ ಅಧ್ಯಕ್ಷತೆ ವಹಿಸುವರು. ಶ್ರೀ ಕಂಠಶಾಸ್ತ್ರಿ
ಅಮರಾರ್ಯ ಹಿರೇಮಠ ವಿರಚಿತ ಪೌರಾಣಿಕ ನಾಟಕ ಸಂಪೂರ್ಣ ಹೇಮರೆಡ್ಡಿ ಮಲ್ಲಮ್ಮ ಪ್ರದರ್ಶನವಾಗಲಿದೆ.
ಫೆ. 23 ರಂದು ಸಮಾರೋಪ ಸಮಾರಂಭದಲ್ಲಿ ಮುರುಘಾ ಮಠದ ಆಡಳಿತ ಮಂಡಳಿ ಸದಸ್ಯರಾದ ಡಾ. ಬಸಕುಮಾರ ಸ್ವಾಮೀಜಿ
ದಿವ್ಯ ಸಾನಿಧ್ಯ ವಹಿಸುವರು. ಮುಖ್ಯ ಅತಿಥಿಗಳಾಗಿ ರಾಜ್ಯ ಪ್ರಶಸ್ತಿ ಪುರಸ್ಕೃತ ರಂಗಕಾರ್ಮಿಗಳ ಬಿ. ಕುಮಾರಸ್ವಾಮಿ, ನಗರಸಭೆ
ಅಧ್ಯಕ್ಷೆ ಬಿ. ಎನ್. ಸುಮಿತ ರಾಘವೇಂದ್ರ, ಕೆಡಿಪಿ ಸದಸ್ಯ ಕೆ. ಸಿ.ನಾಗರಾಜ್, ಮೈಸೂರು ಮುಖ್ಯ ಅಗ್ನಿಶಾಮಕ ಅಧಿಕಾರಿ ಪ್ರೊ.ಟಿ.
ಜಯರಾಮ್ ಭಾಗವಹಿಸುವರು. ಹೂವಿನ ಹಡಗಲಿ ನಿವೃತ್ತ ಪೋ. ಟಿ. ಪರಮೇಶ್ವರಪ್ಪ ಅಧ್ಯಕ್ಷತೆ ವಹಿಸುವರು, ಈ ದಿನ ಶ್ರೀ
ಮಹಾದೇವ ಹೂಸೂರು ವಿರಚಿತ ಸಾಮಾಜಿಕ ನಾಟಕ ಅಕ್ಕ ಅಂಗಾರ ತಂಗಿ ಬಂಗಾರ ನಾಟಕ ಪ್ರದರ್ಶನವಾಗಲಿದೆ.
ಪತ್ರಿಕಾಗೋಷ್ಠಿಯಲ್ಲಿ ಸರಿಗಮ ಸಂಗೀತ ನಾಟಕೋತ್ಸವ ಸಮಿತಿ ಅಧ್ಯಕ್ಷ ಸತ್ಯನಾರಾಯಣ ರೆಡ್ಡಿ, ಉಪಾಧ್ಯಕ್ಷರು ಡಾ.ಟಿ.ಭವ್ಯರಾಣಿ,
ಸದಸ್ಯ ಸಿ. ಮಂಜುನಾಥ್ ಇದ್ದರು.
Views: 0