
ಚಿತ್ರದುರ್ಗ ಮಾ. 05 : ಕಾಂಗ್ರೆಸ್ ಸರ್ಕಾರದ ಯೋಜನೆಗಳಾದ ಪಂಚಗ್ಯಾರಂಟಿ ಯೋಜನೆಗಳು ಕನ್ನಡ ನಾಡಿನ ಜನತೆಗೆ ಸರಿಯಾಗಿ ವಿತರಣೆ
ಆಗುತ್ತಿಲ್ಲ ಇದರ ವಿರುದ್ಧ ಜಿಲ್ಲಾ ಜೆಡಿಎಸ್ ಘಟಕದ ವತಿಯಿಂದ ಮಾ. 06 ರ ಗುರುವಾರ ಬೆಳಗ್ಗೆ 11ಗಂಟೆಗೆ ಹೋರಾಟವನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಜೆಡಿಎಸ್ ಘಟಕದ ಜಿಲ್ಲಾ ಮಹಾಪ್ರಧಾನ ಕಾರ್ಯದರ್ಶಿ ಡಿ.ಗೋಪಾಲಸ್ವಾಮಿ ನಾಯಕ ತಿಳಿಸಿದ್ದಾರೆ.
ಪಕ್ಷದವತಿಯಿಂದ ಪ್ರತಿಭಟನೆಯನ್ನು ಚಿತ್ರದುರ್ಗ ನಗರದಲ್ಲಿನ ಓನಕೆ ಓಬವ್ವ ಸರ್ಕಲ್ (ಡಿ.ಸಿ.ಸರ್ಕಲ್) ನಿಂದ ಜಿಲ್ಲಾಧಿಕಾರಿಗಳ ಕಛೇರಿವರೆಗೆ ಹಮ್ಮಿಕೊಳ್ಳಲಾಗಿದೆ ಈ ಪ್ರತಿಭಟನೆಯಲ್ಲಿ ಜಿಲ್ಲಾ ಜೆ ಡಿ ಎಸ್ ಘಟಕದ ಅಧ್ಯಕ್ಷರಾದ ಎಂ ಜಯಣ್ಣ,ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ.ಕಾಂತರಾಜ್ ಜಿಲ್ಲಾ ಕಾರ್ಯಧ್ಯಕ್ಷರಾದ ಜಿಬಿ ಶೇಖರ್, ಮಾಜಿ ಜಿಲ್ಲಾ ಅಧ್ಯಕ್ಷರಾದ ಡಿ.ಯಶೋಧರ ಕಳೆದ ವಿಧಾನಸಭಾ ಪರಾಜಿತ ಅಭ್ಯರ್ಥಿ ಗಳಾದ ರವೀಂದ್ರಪ್ಪ, ರವೀಶ್, ವೀರಭದ್ರಪ್ಪ,ತಿಪ್ಪೇಸ್ವಾಮಿ, ತಾಲ್ಲೂಕ್ ಘಟಕದ ಅಧ್ಯಕ್ಷರಾದ ಸಣ್ಣತಿಮ್ಮಪ್ಪ ಹನುಮಂತರಾಯಪ್ಪ, ಪಿ,ಟಿ, ತಿಪ್ಪೇಸ್ವಾಮಿ, ಕರಿಬಸಪ್ಪ,ಪರಮೇಶ್ವರಪ್ಪ ಗಣೇಶಮೂರ್ತಿ ವಿವಿಧ ಘಟಕದ ಅಧ್ಯಕ್ಷರಾದ ಗೀತಮ್ಮ, ಲಲಿತಾಕೃಷ್ಣ ಮೂರ್ತಿ,ಪ್ರತಾಪ್ ಜೋಗಿ ಅಬ್ಬು
ಲಿಂಗರಾಜ್ ಮಠದಹಟ್ಟಿ ವೀರಣ್ಣ ಭಾಗವಹಿಸುವರು ಎಂದು ತಿಳಿಸಿದ್ದಾರೆ.
Views: 0