ಚಿತ್ರದುರ್ಗ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ ಇದರ, ಅಧ್ಯಕ್ಷರಾದ ಎ,ಈಶ್ವರಪ್ಪ ಉಪಾಧ್ಯಕ್ಷರಾಗಿ ಎಸ್.ಜಯ್ಯಪ್ಪ

ಚಿತ್ರದುರ್ಗ ಜು. 04 ಚಿತ್ರದುರ್ಗ ನಗರದ ಚಿತ್ರದುರ್ಗ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ ಇದರ ನೂತನ ಅಧ್ಯಕ್ಷ ಉಪಾಧ್ಯಕ್ಷರ ಹುದ್ದೆಗೆ ಶುಕ್ರವಾರ ಆಯ್ಕೆ ಪ್ರತ್ರಿಯೆ ನಡೆದಿದ್ದು, ಅಧ್ಯಕ್ಷರಾದ ಎ,ಈಶ್ವರಪ್ಪ ಉಪಾಧ್ಯಕ್ಷರಾಗಿ ಎಸ್.ಜಯ್ಯಪ್ಪ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿಗಳಾದ ಸಜೀವರಾಂ ತಿಳಿಸಿದ್ದಾರೆ.


ಚಿತ್ರದುರ್ಗ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತಕ್ಕೆ ಕಳೆದ 22 ರಂದು ಚುನಾವಣೆ ನಡೆದಿದ್ದು 12 ಸ್ಥಾನಗಳಲ್ಲಿ ಮೂರು ಸ್ಥಾನಗಳು ಅವಿರೋಧವಾಗಿ ಆಯ್ಕೆಯಾಗಿದ್ದು ಉಳಿದ 9 ಸ್ಥಾನಗಳಿಗೆ ಚುನಾವಣೆ ನಡೆದಿದ್ದು, 9 ಸ್ಥಾನಗಳಿಗೆ 19 ಜನ ಸ್ಫರ್ಧಾ ಕಣದಲ್ಲಿದ್ದರು ಅಂತಿಮವಾಗಿ ಮತದಾರರು ಎ.ಈಶ್ವರಪ್ಪ ಮತ್ತು ನಿಶಾನಿ ಜಯ್ಯಣ್ಣ ರವರು ಗಂಪಿನ ಸದಸ್ಯರನ್ನು ಆಯ್ಕೆ ಮಾಡಿದರು.


ಇಂದು ಚಿತ್ರದುರ್ಗ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತದ ಕಚೇರಿಯಲ್ಲಿ ನಡೆದ ನಿರ್ದೆಶಕರ ಸಭೆಯಲ್ಲಿ ಅಧ್ಯಕ್ಷ-ಉಪಾಧಕ್ಷ ಸ್ಥಾನಕ್ಕೆ ಅವಿರೋದ ಆಯ್ಕೆ ನಡೆದಿದ್ದು ಅಧ್ಯಕ್ಷರಾದ ಎ,ಈಶ್ವರಪ್ಪ ಉಪಾಧ್ಯಕ್ಷರಾಗಿ ಎಸ್.ಜಯ್ಯಪ್ಪ ಆಯ್ಕೆಯಾಗಿದ್ದಾರೆ. ಈ ಸಂದರ್ಭದಲ್ಲಿ ಚಿತ್ರದುರ್ಗ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತದ ನಿರ್ದೇಶಕರುಗಳಾದ ನಿಶಾನಿ ಜಯ್ಯಣ್ಣ, ಎಸ್.ತಿಮ್ಮಪ್ಪ, ಸೂರ್ಯ ಪ್ರಕಾಶ್, ಮಲ್ಲಿಕಾರ್ಜನ್, ಲಕ್ಷ್ಮೀದೇವಿ, ಪಾಪೇಶ್, ಶೇಖಮ್ಮ, ಮೂರ್ತಿ, ನರಸಿಂಗನ್ ಡಿ, ಏಕಾಂತಪ್ಪ ಭಾಗವಹಿಸಿದ್ದರು. 


ಚಿತ್ರದುರ್ಗ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತದ ಮುಖ್ಯ ಕಾರ್ಯ ನಿರ್ವಹಕ ಅಧಿಕಾರಿ ರಾಮಕೃಷ್ಣಪ್ಪ ಭಾಗವಹಿಸಿದ್ದರು. ಚಿತ್ರದುರ್ಗ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತದ ನೂತನ ಅಧ್ಯಕ್ಷರಾದ ಎ,ಈಶ್ವರಪ್ಪ ಉಪಾಧ್ಯಕ್ಷರಾಗಿ ಎಸ್.ಜಯ್ಯಪ್ಪ ಆಯ್ಕೆಯಾಗಿದ್ದಕ್ಕೆ ಅಭಿಮಾನಿಗಳು ಪಟಾಕಿಯನ್ನು ಸಿಡಿಸಿ ಸಿಹಿಯನ್ನು ಹಂಚುವುದರ ಮೂಲಕ ತಮ್ಮ ನಾಯಕ ಗೆಲುವು ಸಾಧಿಸಿದ್ದಕ್ಕೆ ಸಂತಸವನ್ನು ಹಂಚಿಕೊಂಡರು. 

Leave a Reply

Your email address will not be published. Required fields are marked *