ಚಿತ್ರದುರ್ಗ| ಸಿ.ಟಿ.ರವಿ ವಿರುದ್ದ ಲಕ್ಷ್ಮಿಹೆಬ್ಬಾಳ್ಕರ್ ಅಭಿಮಾನಿಗಳ ಸಂಘದಿಂದ ಪ್ರತಿಭಟನೆ.

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಚಿತ್ರದುರ್ಗ ಡಿ. 21: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿಹೆಬ್ಬಾಳ್ಕರ್‍ಗೆ ಅಸಾಂವಿಧಾನಿಕ ಮಾತುಗಳನ್ನಾಡಿರುವ ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ವಿರುದ್ದ ಲಕ್ಷ್ಮಿಹೆಬ್ಬಾಳ್ಕರ್ ಅಭಿಮಾನಿಗಳ ಸಂಘದಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಶನಿವಾರ ಪ್ರತಿಭಟನೆ
ನಡೆಸಲಾಯಿತು.

ಪ್ರವಾಸಿ ಮಂದಿರದಿಂದ ಮೆರವಣಿಗೆ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ ಪ್ರತಿಭಟನಾಕಾರರು ಸಿ.ಟಿ.ರವಿ ವಿರುದ್ದ
ಧಿಕ್ಕಾರಗಳನ್ನು ಕೂಗಿದರು.

ಬೆಳಗಾವಿಯ ಸುವರ್ಣಸೌಧದಲ್ಲಿ ಚಳಿಗಾಲದ ಕೊನೆಯ ದಿನದ ಅಧಿವೇಶನದಲ್ಲಿ ಸಿ.ಟಿ.ರವಿ ಆಡಿರುವ ಮಾತು ಲಕ್ಷ್ಮಿಹೆಬ್ಬಾಳ್ಕರ್
ಮನಸ್ಸಿಗೆ ಘಾಸಿಯುಂಟು ಮಾಡಿದೆ. ಆದ್ದರಿಂದ ಸಿ.ಟಿ.ರವಿಯನ್ನು ವಿಧಾನಪರಿಷತ್ ಸದಸ್ಯತ್ವ ಸ್ಥಾನದಿಂದ ವಜಾಗೊಳಿಸಿ
ಜೈಲಿಗಟ್ಟಬೇಕೆಂದು ಸರ್ಕಾರವನ್ನು ಒತ್ತಾಯಿಸಿದರು.

ಪ್ರತಿಭಟನೆ ನೇತೃತ್ವ ವಹಿಸಿದ್ದ ಪಂಚಮಸಾಲಿ ಅಧ್ಯಕ್ಷ ಹೆಚ್.ಎಂ.ಮಂಜುನಾಥ್ ದಾಳಿಂಬೆ ಮಾತನಾಡಿ ಕೇಂದ್ರ ಗೃಹ ಸಚಿವ
ಅಮಿತ್‍ಷಾ ಅಂಬೇಡ್ಕರ್ ಹೆಸರೇಳುವ ಬದಲು ದೇವರ ಹೆಸರು ಜಪಿಸಿ ಸ್ವರ್ಗ ಪ್ರಾಪ್ತಿಯಾಗುತ್ತದೆಂದು ಹೇಳಿರುವ ಬೆನ್ನ ಹಿಂದೆಯೆ
ಸಿ.ಟಿ.ರವಿ ಅಸಭ್ಯವಾಗಿ ಮಾತನಾಡಿರುವುದನ್ನು ನೋಡಿದರೆ ಇವರಿಬ್ಬರು ಮನುಸ್ಮøತಿಯವರು ಎನ್ನುವುದು ಗೊತ್ತಾಗುತ್ತದೆ.
ಹಾಗಾಗಿ ಇವರುಗಳು ತಕ್ಷಣವೆ ರಾಜಿನಾಮೆ ನೀಡಬೇಕೆಂದು ಒತ್ತಾಯಿಸಿದರು.

ಕರವೇ ರಮೇಶ್, ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ಶ್ರೀರಾಮ್, ಹನೀಸ್, ಕಾರ್ತಿಕ್, ಮೋಕ್ಷರುದ್ರಸ್ವಾಮಿ, ಮುನಿರಾ
ಎ.ಮಕಾಂದಾರ್, ವಿಜಯಕುಮಾರ್, ನೇತ್ರಾವತಿಕುಮಾರ್, ಗಿರೀಶ್, ಜಗದೀಶ್, ದರ್ಶನ್, ಸುನಿತ ಇನ್ನು ಅನೇಕರು
ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *