ಚಿತ್ರದುರ್ಗ ಅ. 13 : ರಾಜವೀರ ಮದಕರಿ ನಾಯಕ ಯಾವೊಂದು ಜಾತಿಗೆ ಸೀಮಿತವಾಗದೆ, ಜಾತ್ಯಾತೀತ ನಾಯಕನಾಗಿದ್ದ ಎಂದು ವಾಲ್ಮೀಕಿ ಗುರಪೀಠದ ಶ್ರೀವಾಲ್ಮಿಕಿ ಪ್ರಸನ್ನಾನಂದ ಶ್ರೀಗಳು ತಿಳಿಸಿದರು.
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಚಿತ್ರದುರ್ಗ ನಗರದ ಮೆಜೆಸ್ಟಿಕ್ ವೃತ್ತದಲ್ಲಿನ ರಾಜ ವೀರ ಮದಕರಿನಾಯಕ ಪ್ರತಿಮೆ ಬಳಿ ಭಾನುವಾರ ನಡೆದ ರಾಜ ವೀರ ಮದಕರಿ
ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮದಕರಿ ಪ್ರತಿಮೆ ಪುಷ್ಪಾರ್ಚಣೆ ಸಲ್ಲಿಸಿ ಮಾತನಾಡಿದ ಶ್ರೀಗಳು, ನಾಡಿನಾದ್ಯಂತ ಇಂದು
ಚಿತ್ರದುರ್ಗವನ್ನು ಆಳಿದ ನಾಡದೂರೆ ರಾಜ ವೀರ ಮದಕರಿನಾಯಕಯ ಜಂಯತೋತ್ಸವವನ್ನು ಅತಂತ್ಯ ಸಡಗರ ಸಂಭ್ರಮದಿಂದ ಆಚರಣೆ
ಮಾಡಲಾಗುತ್ತಿದೆ. ಬಹುತೇಕ ದಕ್ಷಿಣ ಭಾರತದಲ್ಲಿ ಮೊಗಲರ ಧಾಳಿಯನ್ನು ಸಮರ್ಥವಾಗಿ ಎದುರಿಸಿದ ತನ್ನ ಸುತ್ತಾ-ಮುತ್ತಲ್ಲಿನ
ವೈರಿಗಳನ್ನು ಹಿಮೆಟ್ಟಿಸಿ ಚಿತ್ರದುರ್ಗವನ್ನು ಮದಕರಿ ನಾಯಕ 25 ವರ್ಷಗಳ ಆಳ್ವಿಕೆಯನ್ನು ನಡೆಸಿ ಒಬ್ಬ ಹಿರೋ ಜಾತ್ಯಾತೀತ ನಾಯಕ
ಮದಕರಿ ನಾಯಕ ಈ ಸಮಯದಲ್ಲಿ ಯಾವುದೇ ರೀತಿಯ ತಾರತಮ್ಯ ಮಾಡದೆ ಎಲ್ಲಾ ಜಾತಿಯವರನ್ನು ಸಮಾನಾಗಿ ಕಾಣುವುದರ
ಮೂಲಕ ರಾಜ್ಯಭಾರವನ್ನು ನಡೆಸಿದ್ದಾನೆ ಎಂದರು.
ಈ ವ್ಯಕ್ತಿಯ ಜಯಂತಿಯನ್ನು ಪ್ರತಿ ವರ್ಷ ಚಿತ್ರದುರ್ಗದಲ್ಲಿ ಅದ್ದೂರಿಯಿಂದ ಆಚರಣೆ ಮಾಡಲಾಗುತ್ತಿದೆ. ಈ ವರ್ಷ ಸಾಂಕೇತಿಕವಾಗಿ
ಆಚರಣೆ ಮಾಡಲಾಗುತ್ತಿದೆ. ಮುಂದಿನ ವರ್ಷ ಮದಕರಿ ನಾಯಕ ಜಯಂತಿಯನ್ನು ಅದ್ದೂರಿಯಾಗಿ ಆಚರಿಸಲಾಗುವುದು ಈಗ ದಸರಾ
ಶರಣ ಸಂಸ್ಕೃತಿ ಉತ್ಸವ ನಡೆದಿದೆ. ನಿನ್ನೆ ಅದರ ಮೆರವಣಿಗೆ ಆಗಿದೆ. ಮದಕರಿ ಜಯಂತಿಯ ಅದ್ದೂರಿ ಅಚರಣೆಯ ಬಗ್ಗೆ ತೀರ್ಮಾನ
ತೆಗೆದುಕೊಂಡು ಎಲ್ಲರನ್ನು ಜೊತೆಗೂಡಿಸಿ ಆಚರಣೆ ಮಾಡಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ನಾಯಕ ಸಮಾಜದ ಅಧ್ಯಕ್ಷರಾದ ಹೆಚ್.ಜೆ.ಕೃಷ್ಣಮೂರ್ತಿ, ಮದಕರಿ ನಾಯಕ ವಿದ್ಯಾ ಸಂಸ್ಥೆಯ ಅಧ್ಯಕ್ಷರಾದ
ಸಂದೀಪ್, ಜೆಡಿಎಸ್‌ನ ಜಿಲ್ಲಾ ಮಹಾ ಪ್ರಧಾನ ಕಾರ್ಯದರ್ಶಿ ಗೋಪಾಲಸ್ವಾಮಿ ನಾಯಕ್, ಬಿಜೆಪಿ ಮುಖಂಡರಾದ ಶ್ರೀಮತಿ
ರತ್ನಮ್ಮ, ಸೋಮು, ಪತ್ರಕರ್ತರ ಸಂಘದ ಅಧ್ಯಕ್ಷರಾದ ದಿನೇಶ್ ಗೌಡಗೆರೆ, ಕಾಟೇಹಳ್ಳಿ ಕರಿಯಣ್ಣ, ಜಿ.ಟಿ,ರಾಜೇಶ್, ನಗರಸಭಾ
ಮಾಜಿ ಸದಸ್ಯರಾದ ತಿಪ್ಪೇಸ್ವಾಮಿ, ಅಹೋಬಳ ಕಂಪನಿಯ ಅರುಣ್, ಅಜೇಯ ಮದಕರಿ, ದರ್ಶನ್, ತಿಪ್ಪೇಸ್ವಾಮಿ, ರಾಜ ಮದಕರಿ
ನಾಯಕ, ಕಿರಣ್, ಶಿರುವಾಲಪ್ಪ ಸೇರಿದಂತೆ ಇತರರು ಭಾಗವಹಿಸಿದ್ದರು.