ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಚಿತ್ರದುರ್ಗ, ಫೆಬ್ರವರಿ. 07 :
ನಗರದ ಜೆಸಿಆರ್ ಬಡಾವಣೆ ನಿವಾಸಿ ಹಾಗೂ ನಿವೃತ್ತ ಶಿಕ್ಷಕ ಪಿ. ತಿಪ್ಪೇಶಾಚಾರ್ಯ (85 ವರ್ಷ) ಅವರು ಶನಿವಾರ ಇಂದು ಬೆಳಿಗ್ಗೆ ಸುಮಾರು 11:50 ರ ವೇಳೆಗೆ ನಿಧನರಾದರು. ಮೃತರು ಪತ್ನಿ, ಇಬ್ಬರು ಪುತ್ರರು, ಓರ್ವ ಪುತ್ರಿ ಸೇರಿದಂತೆ ಅಪಾರ ಬಂಧುಬಳಗದವರನ್ನು ಅಗಲಿದ್ದಾರೆ.
ಚಿತ್ರದುರ್ಗ ವಿಶ್ವಕರ್ಮ ಸಮಾಜದ ಜಿಲ್ಲಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ನಿಧನದ ನಂತರ ಕಣ್ಣುಗಳನ್ನು ನಗರದ ಬಸವೇಶ್ವರ ಆಸ್ಪತ್ರೆಯ ಶ್ರೀ ಬಸವೇಶ್ವರ ಪುನರ್ ಜ್ಯೋತಿ ಐ ಬ್ಯಾಂಕ್ ಗೆ ನೇತ್ರದಾನ ಮಾಡಿ ಮಾನವೀಯತೆ ಮೆರೆದಿದ್ದಾರೆ.
ಅಂತ್ಯಕ್ರಿಯೆ ನಗರದ ಜೋಗಿಮಟ್ಟಿ ರಸ್ತೆಯ ಮುಕ್ತಿಧಾಮದಲ್ಲಿ ನಾಳೆ (ಫೆಬ್ರವರಿ. 08, ಭಾನುವಾರ) ಬೆಳಿಗ್ಗೆ 11 ಗಂಟೆಗೆ ನೆರವೇರಿಸಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಸಂತಾಪ : ಮೃತರ ನಿಧನಕ್ಕೆ ಚಿತ್ರದುರ್ಗ ಜಿಲ್ಲಾ ವಿಶ್ವಕರ್ಮ ಸಮಾಜ, ನಿವೃತ್ತ ನೌಕರರ ಸಂಘ ಸೇರಿದಂತೆ ಜೆಸಿಆರ್ ಬಡಾವಣೆಯ ನಾಗರೀಕರು ಸಂತಾಪ ಸೂಚಿಸಿದ್ದಾರೆ.