ಚಿತ್ರದುರ್ಗ ಸೆ. 12
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಭಾರತೀಯ ಜನತಾ ಪಾರ್ಟಿಯ ಜಿಲ್ಲಾಧ್ಯಕ್ಷರಾದ ಕೆ.ಟಿ.ಕುಮಾರಸ್ವಾಮಿ ಹಾಗೂ ಮಾಜಿ ಶಾಸಕರಾದ ಜಿ.ಎಚ್.ತಿಪ್ಪಾರೆಡ್ಡಿಯವರ ಮಾರ್ಗದರ್ಶನದಲ್ಲಿ ಚಿತ್ರದುರ್ಗ ಗ್ರಾಮಾಂತರ ಮಂಡಲದ ಅಧ್ಯಕ್ಷರಾದ ಕೆ.ನಾಗರಾಜ್ ರವರ ತಮ್ಮ ಮಂಡಲಕ್ಕೆ ವಿವಿಧ ಪದಾಧಿಕಾರಿಗಳನ್ನು ನೇಮಕ ಮಾಡಿ ಆದೇಶವನ್ನು ಹೊರಡಿಸಿದ್ದಾರೆ.
ಇದರಲ್ಲಿ ಉಪಾಧ್ಯಕ್ಷರಾಗಿ 7 ಜನ, ಪ್ರಧಾನ ಕಾರ್ಯದರ್ಶಿಗಳಾಗಿ ಇಬ್ಬರು, ಕಾರ್ಯದರ್ಶಿಗಳಾಗಿ 6 ಜನ ಹಾಗೂ ಒಬ್ಬರನ್ನು ಕೋಶಾಧ್ಯಕ್ಷರಾಗಿ ನೇಮಕ ಮಾಡಿದ್ದಾರೆ.
ಉಪಾಧ್ಯಕ್ಷರಾಗಿ ಸಿಂಗಾಪುರದ ಶ್ರೀಧರ್ ಜೆ, ವಿದ್ಯಾನಗರದ ಪೂಜಾ ಸಿದ್ದೇಶ್, ವಿ.ವಿ.ಪಾಳ್ಯದ ನವೀನ್, ಕಾಸವರಹಟ್ಟಿಯ ಆರ್.ಎನ್.ವೇಣು, ಡಿ.ಕೆ.ಹಟ್ಟಿಯ ಜಿ.ಎಂ.ಮಹಲಿಂಗಪ್ಪ, ಬೊಮ್ಮನಹಳ್ಳಿಯ ಮಂಜುನಾಥ್ ಎನ್, ಜಿ.ಆರ್.ಹಳ್ಳಿಯ ನವೀನ್, ಪ್ರಧಾನ ಕಾರ್ಯದರ್ಶಿಗಳಾಗಿ ಗೂಡಬನಹಾಳ್ನ ಸಚಿನ್ ಜಿ.ಎನ್, ಜೋಡಿಚಿಕ್ಕೇನಹಳ್ಳಿ ಗೊಲ್ಲರಹಟ್ಟಿಯ ಟಿ.ಶಿವಪ್ರಸಾದ್ ಕಾರ್ಯದರ್ಶಿಗಳಾಗಿ ಮಾಳಪ್ಪನಹಟ್ಟಿಯ ಸುರೇಶ್ ಆರ್, ಕಸವನಹಳ್ಳಿಯ ರಾಜಪ್ಪ ಸಿ, ಉಪ್ಪನಾಯಕನಹಳ್ಳಿಯ ಉಮೇಶ್ ಟಿ, ಹಳಿಯೂರಿನ ತಿಪೇಸ್ವಾಮಿ, ಬಿ. ಮದಕರಿಪುರದ ತಿಪ್ಪೇಸ್ವಾಮಿನಾಯ್ಕ್, ಕಲ್ಲಹಳ್ಳಿಗೊಲ್ಲರಹಟ್ಟಿಯ ನಿಜಲಿಂಗಪ್ಪ ಎಂ. ಹಾಗೂ
ಕೋಶಾಧ್ಯಕ್ಷರಾಗಿ, ಮಲ್ಲಾಪುರ ಗೊಲ್ಲರಹಟ್ಟಿಯ ಎಂ.ಎಸ್.ಮಹಂತೇಶ್ರವರನ್ನು ನಾಗರಾಜ್ ನೇಮಕ ಮಾಡಿ ಚಿತ್ರದುರ್ಗ ಗ್ರಾಮಾಂತರ ಮಂಡಲದ ಅಧ್ಯಕ್ಷರಾದ ಕೆ.ನಾಗರಾಜ್ ರವರ ಆದೇಶವನ್ನು ಹೊರಡಿಸಿದ್ದಾರೆ.
ಈಗ ನೇಮಕವಾಗಿರುವ ಪದಾಧಿಕಾರಿಗಳು ಪಕ್ಷದ ಸಂಘಟನೆ ಹಾಗೂ ಗ್ರಾಮಾಂತರ ಪ್ರದೇಶದಲ್ಲಿ ಪಕ್ಷವನ್ನು ಬಲ ಪಡಿಸುವಲ್ಲಿ ತಮ್ಮ ಸಮಯವನ್ನು ನೀಡಿ ಕ್ರಿಯಾಶೀಲರಾಗುವಂತೆ ಸೂಚಿಸಿದ್ದಾರೆ.