ಚಿತ್ರದುರ್ಗ ಮಾ. 26
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ನಗರದ ವಾಸವಿ ಶಾಲೆ ಬಳಿಯಲ್ಲಿನ ತ್ಯಾಗರಾಜ ಬೀದಿಯಲ್ಲಿನ ಶ್ರೀ ಪೇಟೆ ಆಂಜನೇಯಸ್ವಾಮಿ ದೇವಸ್ಥಾನಕ್ಕೆ 100 ವರ್ಷ(1926- 2026)ತುಂಬಿದ ಈ ಹಿನ್ನಲೆಯಲ್ಲಿ ಮಾ. 26 ರಿಂದ 28ರವರೆಗೆ ಮೂರು ದಿನಗಳ ಕಾಲ ಶ್ರೀ ರಾಮೋತ್ಸವ ಸಂಭ್ರಮಾಚರಣೆ ಹಿನ್ನಲೆಯಲ್ಲಿ ಸಡಗರ ಶ್ರದ್ದಾ ಭಕ್ತಿಗಳಿಂದ ಶ್ರೀ ರಾಮನವಮಿ ಶತಮಾನೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಪ್ರಾರಂಭದ ದಿನವಾದ ಇಂದು ದೇವಾಲಯದಲ್ಲಿ ವಿಶೇಷವಾದ ಪೂಜೆಯನ್ನು ನಡೆಸಲಾಯಿತು ದೇವಾಲಯವನ್ನು ವಿವಿಧ ಹೂಗಳಿಂದ ಅಲಂಕಾರವನ್ನು ಮಾಡಲಾಗಿತ್ತು.
ಇಂದು ಮುಂಜಾನೆಯಿಂದಲೇ ದೇವಾಲಯದಲ್ಲಿ ಅಂಜನೇಯ ಸ್ವಾಮಿಗೆ ಅಭೀಷೇಕವನ್ನು ಮಾಡುವುದರ ಮೂಲಕ ವಿಶೇಷವಾದ ಅರ್ಚನೆಯನ್ನು ಮಾಡಲಾಯಿತು. ತದ ನಂತರ ದೇವಾಲಯದಲ್ಲಿ ಹೋಮವನ್ನು ನೇರವೇರಿಸಿ ಪೂರ್ಣಾಹುತಿಯನ್ನುನೀಡಲಾಯಿತು.
ಈ ಸಂದರ್ಭದಲ್ಲಿ ದೇವಾಲಯಕ್ಕೆ ಆಗಮಿಸಿ ಬಿಜೆಪಿ ಮುಖಂಡ ರಘುಚಂದನ್ ಸ್ವಾಮಿಯ ದರ್ಶನವನ್ನು ಪಡೆದು
ಪ್ರಸಾದ ತೀರ್ಥವನ್ನು ಸ್ವೀಕಾರ ಮಾಡಿದರು.