ಚಿತ್ರದುರ್ಗ|ಶ್ರೀವಾಲ್ಮೀಕಿ ಮುನಿಗಳು ಜಾತ್ಯತೀತ ವ್ಯಕ್ತಿ_ ರವಿ ಕೆ.ಅಂಬೇಕರ್ , ಯೋಗಗುರುಗಳು.


ಚಿತ್ರದುರ್ಗ: ವಾಲ್ಮೀಕಿ ಮಹರ್ಷಿ ಜಾತ್ಯತೀತ ವ್ಯಕ್ತಿ, ಐತಿಹಾಸಿಕ ವ್ಯಕ್ತಿಯೂ ಹೌದು. ಸಮಾಜ ಸುಧಾರಕ, ಶಿಕ್ಷಣ ತಜ್ಞನೂ ಹೌದು. ಲವಕುಶರು ಸಕಲ ವಿದ್ಯಾ ಪಾರಂಗತರಾಗಿದ್ದು ಇದಕ್ಕೆ ಸಾಕ್ಷಿಯಾಗಿದ್ದಾರೆ ಎಂದು ಯೋಗಗುರು ರವಿ ಕೆ.ಅಂಬೇಕರ್ ಅಭಿಪ್ರಾಯ ಪಟ್ಟಿದ್ದಾರೆ.

ಅವರು ದಿನಾಂಕ 17/10/2024ರ ಗುರುವಾರ ಶ್ರೀ ವಾಲ್ಮೀಕಿ ಮಹರ್ಷಿಗಳ ಜಯಂತಿ ಅಂಗವಾಗಿ ಚಿತ್ರದುರ್ಗ ಭಾರತೀಯ ಯೋಗ ಶಿಕ್ಷಣ ಸಂಸ್ಥೆ ಚಿತ್ರದುರ್ಗ ವತಿಯಿಂದ ಪ್ರಗತಿ ವಿದ್ಯಾಮಂದಿರ ಯೋಗ ಶಾಖೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ವಾಲ್ಮೀಕಿ ಋಷಿಗಳ ತತ್ವಾದರ್ಶಗಳು ಸಾರ್ವಕಾಲಿಕವಾಗಿ ಒಪ್ಪಿಕೊಳ್ಳುವಂತಹದ್ದಾಗಿವೆ ಅವರು ರಾಮಾಯಣದ ಮೂಲಕ ವಾಲ್ಮೀಕಿ ಮುನಿಗಳು ಬದುಕಿನ ಆದರ್ಶದ ಎಲ್ಲ ಆಯಾಮಗಳನ್ನು ಸುಂದರವಾಗಿ ರಚಿಸಿ ಚಿರನೂತನ ಹಾಗೂ ಚಿರಚೇತನವಾಗಿ ನಿರಂತರವಾಗಿ ಬಾಳಿನಲ್ಲಿ ಹಾಸುಹೊಕ್ಕಾಗಿ ಉಳಿಯುವಂತಹ ಅಮೂಲ್ಯ ಕೊಡುಗೆಯನ್ನು ಮನುಕುಲಕ್ಕೆ ಸಮರ್ಪಿಸಿ ಜನರ ಮನದಲ್ಲಿ ಚಿರಸ್ಮರಣೀಯರಾಗಿ ಉಳಿದಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮ ಉದ್ಧೇಶಿಸಿ ಮಾತನಾಡಿದ ಯೋಗ ಸಂಸ್ಥೆಯ ನಿರ್ದೇಶಕ ಹಾಗೂ ನಿವೃತ್ತ ಪೋಲಿಸ್ ಅಧಿಕಾರಿ ಮಲ್ಲಿಕಾರ್ಜುನ ಚಾರ್ ಮಾತನಾಡಿ ವಾಲ್ಮೀಕಿ ರಚಿಸಿದ ಪವಿತ್ರ ಪುಸ್ತಕ ರಾಮಾಯಣದಲ್ಲಿ ಪ್ರೀತಿ, ತ್ಯಾಗ, ದೃಢತೆ ಮತ್ತು ಖ್ಯಾತಿಯ ಭಾವನೆಗಳಿಗೆ ಪ್ರಾಮುಖ್ಯತೆ ನೀಡಿದ್ದಾರೆ ದುಃಖ ಮತ್ತು ವಿಪತ್ತುಗಳು ಮನುಷ್ಯನ ಜೀವನದ ಎರಡು ಅತಿಥಿಗಳು, ನಮ್ಮ ಎಂದು ಮಹರ್ಷಿ ವಾಲ್ಮೀಕಿಯು ತೋರಿಸಿಕೊಟ್ಟಿದ್ದಾರೆ ಎಂದು ಹೇಳಿದರು.
ಇದೇ ಸಂಧರ್ಭದಲ್ಲಿ ಕಾರ್ಯಕ್ರಮದ ಉದ್ದೇಶ ಕುರಿತು ಮಾತನಾಡಿ ವಾಲ್ಮೀಕಿ ಮಹಾಋಷಿಗಳು ಮಹರ್ಷಿ ಆಗುವುದಕ್ಕಿಂತ ಮುಂಚೆ ಒಬ್ಬ ಕಳ್ಳ ದರೋಡೆಕಾರನಾಗಿದ್ದವರು ಶ್ರೀರಾಮಚಂದ್ರರ ಸಹವಾಸದಿಂದಾಗಿ ಒಬ್ಬ ಆದರ್ಶ ವ್ಯಕ್ತಿಯಾಗಿ ಶ್ರೀರಾಮಾಯಣ ಚರಿತೆಯನ್ನು ರಚಿಸಿದ್ದು ಒಬ್ಬ ವ್ಯಕ್ತಿ ಒಳ್ಳೆಯವರ ಸಹವಾಸದಿಂದ ಹೇಗೆ ಬದಲಾಗಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಯೋಗ ಶಿಕ್ಷಕರಾದ ವಸಂತಲಕ್ಷ್ಮಿ, ಮಂಜುಳಾ, ಹಾಗೂ ಯೋಗ ಸಾಧಕರಾದ ಪಲ್ಲವಿ, ರಚನ, ಲೀಲಾವತಿ, ಶಾಂತಮ್ಮ ಹಾಗೂ ಶ್ರೀಯುತ ಜಗಜ್ಯೋತಿ ಭಾಗವಹಿದ್ಧರು.


Views: 2

Leave a Reply

Your email address will not be published. Required fields are marked *