ಚಿತ್ರದುರ್ಗ|ಕರ್ನಾಟಕದ ಮೊತ್ತ ಮೊದಲ ಸಾಮ್ರಾಜ್ಯಸ್ಥಾಪಕ ಮಯೂರವರ್ಮ ಮತ್ತು ಚಿತ್ರದುರ್ಗ, ರಾಜ್ಯ ಮಟ್ಟದ ವಿಚಾರ ಸಂಕಿರಣ.

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಚಿತ್ರದುರ್ಗ ಸೆ. 27: ಪ್ರಸ್ತತ ಸಮಾಜ ಕಾಣುತ್ತಿರುವ ಅನೇಕ ಸಮಸ್ಯೆಗಳಿಗೆ ಚರಿತ್ರೆಯಲ್ಲಿ ಹಿರಿಯರು ಪರಿಹಾರವನ್ನು ಸೂಚಿಸಿದ್ದಾರೆ. ಅದನ್ನು ನೋಡುವ ವ್ಯವಧಾನ ನಮ್ಮಲ್ಲಿ ಇಲ್ಲವಾಗಿದೆ. ಇದನ್ನು ನೋಡಿ ಕಿಂಚಿತ್ತಾದರೂ ಅನುಸರಿಸುವ ತಾಳ್ಮೆ ಸಹನೆ ನಮ್ಮಲ್ಲಿ ಇಲ್ಲವಾಗಿದೆ ಎಂದು ಹಂಪಿಯ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ.ಪರಮಶಿವಮೂರ್ತಿ ತಿಳಿಸಿದ್ದಾರೆ.


ಸಂಸ್ಕಾರ ಭಾರತಿ ಕರ್ನಾಟಕ ಚಿತ್ರದುರ್ಗ ಜಿಲ್ಲಾ ಸಮಿತಿ ಮತ್ತು ಶಿಕ್ಷಕರ ಸರ್ಕಾರಿ ಶಿಕ್ಷಣ ಮಹಾ ವಿದ್ಯಾಲಯ ಚಿತ್ರದುರ್ಗ ಇವರ
ಸಂಯುಕ್ತಾಶ್ರಯದಲ್ಲಿ ನಗರದ ಶಿಕ್ಷಕರ ಸರ್ಕಾರಿ ಶಿಕ್ಷಣ ಮಹಾ ವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಕರ್ನಾಟಕ ಮೊತ್ತ ಮೊದಲ ಸಾಮ್ರಾಜ್ಯ
ಸ್ಥಾಪಕ ಮಯೂರವರ್ಮ ಮತ್ತು ಚಿತ್ರದುರ್ಗ ಇದರ ರಾಜ್ಯ ಮಟ್ಟದ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದ ಅವರು. ನಮ್ಮ
ಇಂದಿನ ಜಾಗತಿಕ ವಿದ್ಯಾಮಾನದಲ್ಲಿ ಸ್ಥಳೀಯರ ಆತ್ಮಾ ವಿಶ್ವಾಸ ಕುಸಿಯುತ್ತಿದೆ. ಇದಕ್ಕೆ ಅನೇಕ ಸಾಮಾಜಿಕ, ಅರ್ಥಿಕ, ಧಾರ್ಮಿಕ
ಕಾರಣಗಳು ಸಹಾಯ ಮಾಡುತ್ತಿವೆ. ಈ ರೀತಿ ಸಮಯದಲ್ಲಿ ಸ್ಥಳಿಯವಾದ ಇಂತಹ ಇತಿಹಾಸವನ್ನು ಆಳವಾಗಿ ಅಧ್ಯಯನ ಮಾಡುವುದರ
ಮೂಲಕ ಆತ್ಮಾಭೀಮಾನದ ಅಂಶಗಳನ್ನು ಮತ್ತೇ ಅದನ್ನು ಹುಡುಕಿ ನಮ್ಮ ಮುಂದಿನ ಭವಿಷ್ಯದ ಘಟನೆಗಳಿಗೆ ಅದನ್ನು ಬೆಸೆಯುವ
ಮೂಲಕ ನಮ್ಮ ಆತ್ಮಾ ವಿಶ್ವಾಸವನ್ನು ಹೆಚ್ಚಿಸಿಕೊಳ್ಳುವ ಕೆಲಸ ಹಿಂದಿಗಿಂತಲೂ ಇಂದು ಮತ್ತೇ ಮುಂದೆ ಜರೂರಾಗಿ ಆಗಬೇಕಾದ
ಕೆಲಸವಾಗಿದೆ ಎಂದರು.


ಇತಿಹಾಸ ಎಂದರೆ ಈಗ ನಡೆಯಿತು ಹಿಂದೆ ನಡೆಯಿತು ಎಂದು ಅಲ್ಲ, ಇತಿಹಾಸ ನಮ್ಮ ಸಂಸ್ಕøತಿಯ ಪ್ರತಿಬಿಂಬ ಇದರಿಂದ ಅನೇಕ
ಕಾರಣಗಳಿಂದ ನಮ್ಮ ಪೂರ್ವ ಕಾಲದಿಂದ ವಸಹಾತುಶಾಹಿ, ವಿದ್ವಾಂಸರು, ಕಾಲದಿಂದ ನಮ್ಮ ಚರಿತ್ರೆಯ ರಚನೆ ನಡೆದುಕೊಂಡು
ಬಂದಿದೆ. ಭಾರತದಲ್ಲಿ ಬೇರೆ ರಾಜ್ಯಗಳಿಗೆ ಹೊಲಿಸಿದರೆ ನಮ್ಮ ಕರ್ನಾಟಕದಲ್ಲಿ ಚರಿತ್ರೆಯ ಆಕರಗಳು, ಚರಿತೆಯ ರಚನೆ, ಚರಿತ್ರೆಯ
ಪುನಾರಚನೆ, ತುಂಬಾ ಮುಂಚೂಣಿಯಲ್ಲಿ ಇವೆ. ನಿಜವಾಗಿ ನೆಲವನ್ನು ಪ್ರೀತಿಸುವವರು ಸಂಸ್ಕøತಿಯನ್ನು ಇಷ್ಟಪಡುವವರಿಗೆ ನಮ್ಮ ಈಗಿನ
ಇತಿಹಾಸ ರಚನೆಯ ದೊಡ್ಡ ಚರಿತ್ರೆಯನ್ನು ನೋಡಿದಾಗ ನಿರಾಸೆ ಮತ್ತು ಬೇಸರ ಉಂಟು ಮಾಡುತ್ತದೆ. ಈವರೆಗಿನ ಚರಿತ್ರೆ
ಇತಿಹಾಸಕಾರರ ಸ್ವಹಿತಾಸಕ್ತಿಯ ಅನುಗುಣವಾಗಿ ಅಥವಾ ಅವರ ಮೇಲೆ ಬಿದ್ದ ಪ್ರಭಾವದಿಂದ ರಚನೆಯಾಗಿರುವುದನ್ನು
ಕಾಣಬಹುದಾಗಿದೆ ಎಂದು ತಿಳಿಸಿದರು.


ಸ್ಥಳೀಯ ಚರಿತ್ರೆಗೆ ಸರಿಯಾದ ನ್ಯಾಯ ಇದುವರೆವಿಗೂ ದೊರಕಿಲ್ಲ, ಈ ಕಾರಣದಿಂದ ಸ್ಥಳಿಯ ಚರಿತೆಯ ಬಗ್ಗೆ ಹೆಚ್ಚು ಹೆಚ್ಚು ಅಧ್ಯಯನಗಳು
ಇನ್ನು ಮುಂದಿನ ದಿನದಲ್ಲಿ ನಡೆಯಬೇಕಿದೆ. ಭಾರತ ವೈವಿದ್ಯಮಯ ಸಂಸ್ಕøತಿಯನ್ನು ಹೊಂದಿದ ದೇಶವಾಗಿದೆ. ವೈವಿಧೈತೆಯಲ್ಲಿ
ಏಕತೆಯನ್ನು ಕಾಣುತ್ತೇವೆ. ವೈವಿದೈತೆಯಲ್ಲಿ ಸ್ಥಳಿಯ ಚರಿತೆಯನ್ನು ಆಧಾರವಿಲ,್ಲ ಕಟ್ಟುಕಥೆ, ಬೇರೆ ಬೇರೆ ಕಾರಣಗಳಿಂದ ನಿರ್ಲಕ್ಷ
ಮಾಡಲಾಗಿದೆ. ವೈವಿದೈತೆಯಲ್ಲಿ ಏಕತೆಯನ್ನು ಕಾಣಬೇಕಾದರೆ ಸ್ಥಳಿಯ ಚರಿತ್ರೆಯ ಮೂಲಕ ರಾಷ್ಟ್ರೀಯ ಚರಿತ್ರೆಯನ್ನು
ಕಟ್ಟುಕೊಳ್ಳಬೇಕಿದೆ. ಇದನ್ನು ಮುಖ್ಯವಾಗಿ ಗಮನಿಸಬೇಕಿದೆ.

ಒಂದು ಸಂಸ್ಥಾನದ ಇತಿಹಾಸ ಎಂದರೆ ರಾಜ-ರಾಣಿಯವರ ಇತಿಹಾಸ ಮಾತ್ರವಲ್ಲ, ಅದು ಸಂಸ್ಥಾನದ ಕೈಕೆಳಗೆ ಇದ್ದ ಜನ ಸಾಮಾನ್ಯರಿಂದ ಮೊದಲುಗೊಂಡು ಪ್ರತಿಯೊಬ್ಬ ಅಧಿಕಾರಿಯ ಇತಿಹಾಸವಾಗಿದೆ. ಒಂದು ರಾಜ್ಯದ ಉನ್ನತಿಗೆ ಪ್ರದೇಶದ ಬೆಳವಣಿಗೆಗೆ ರಾಜರಿಗಿಂತ ಅದರ ಹೆಚ್ಚಾಗಿ ಶ್ರಮಿಸಿದವರು ಅವರ ಕೈಗೆಳಗಿನ ಮಂಡಲಿಕರು, ಮಂತ್ರಿಗಳು ಮತ್ತು ಅಧಿಕಾರಿಗಳು, ಚರಿತ್ರೆಯಲ್ಲಿ ಇಂತಹ ಎಷ್ಟೋ ಮಹಾನೀಯರ ವಿಳಾಸಗಳು ಇಲ್ಲವಾಗಿದೆ. ಅಂತಹ ಚರಿತ್ರೆಯನ್ನು ನಾವು ಹೆಚ್ಚಾಗಿ ನಂಬಿಕೊಂಡು ಬಂದಿದ್ದೇವೆ. ನಮ್ಮ ವಿದ್ಯಾರ್ಥಿಗಳಿಗೆ ಇಂತಹ ಚರಿತ್ರೆಯನ್ನೇ ಕಲಿಸುತ್ತಿದ್ದೇವೆ ಆದರೆ ಚರಿತ್ರೆ ಎಂದರೆ ಜನ ಸಾಮಾನ್ಯರು ಸಾಗಿ ಬಂದ ದಾರಿಯನ್ನು ಹೊರಳಿ ನೋಡುವುದೇ ಚರಿತ್ರೆ ಅಷ್ಟೇ ಅಲ್ಲ ಹೊರಳಿ ನೋಡುವ ಮೂಲಕ ಮುಂದಿನ ಭವಿಷ್ಯವನ್ನು ಕಟ್ಟುವಂತ ಕೆಲಸವನ್ನು ಮಾಡಲು ಚರಿತ್ರೆಯ ಅಂಶಗಳು ನೆರವಿಗೆ ಬರಬೇಕಿದೆ. ಪ್ರಸ್ತತಾ ಸಮಾಜ ಕಾಣುತ್ತಿರುವ ಅನೇಕ ಸಮಸ್ಯೆಗಳಿಗೆ ಚರಿತ್ರೆಯಲ್ಲಿ ಹಿರಿಯರು ಪರಿಹಾರವನ್ನು ಸೂಚಿಸಿದ್ದಾರೆ. ಅದನ್ನು ನೋಡುವ ವ್ಯವಧಾನ ನಮ್ಮಲ್ಲಿ ಇಲ್ಲವಾಗಿದೆ. ಇದನ್ನು ನೋಡಿ ಕಿಂಚಿತ್ತಾದರೂ ಅನುಸರಿಸುವ ತಾಳ್ಮೆ ಸಹನೆ ನಮ್ಮಲ್ಲಿ ಇಲ್ಲವಾಗಿದೆ ಎಂದರು.

ಇಂದಿನ ದಿನಮಾನದಲ್ಲಿ ತಾಳ್ಮೆಸಹನೆ ಎನ್ನುವುದು ಕೆಡುತ್ತಿದೆ. ಇಂದಿನ ಯುವ ಪಡೆ ಯಾವುದನ್ನು ಆದರ್ಶವಾಗಿಟ್ಟುಕೊಂಡು ತಮ್ಮ
ಮುಂದಿನ ಜೀವನವನ್ನು ಕಟ್ಟುಕೊಳ್ಳಬೇಕೆಂಬುದು ನೋಡಿದಾಗ ತುಂಭಾ ನಿರಾಸೆಯಾಗುತ್ತಿದೆ. ಆತ್ಮ ಸ್ಥರ್ಯ ಕುಸಿಯುತ್ತಿದೆ. ನಮ್ಮಲ್ಲಿ
ನಾನೇಕೆ ಹುಟ್ಟಿದನೊ, ನಾನೇಕೆ ಬಡವನಾದೆ, ನಾನೇಕೆ ಕಲಿಯಬೇಕು, ಎಂಬ ಅಂಶಗಳೇ ನಮ್ಮನ್ನು ಕಾಡುತ್ತಿವೆ. ನನ್ನ ಜನ್ಮತಾಳಿದ್ದೇನೆ
ನಾನು ಭೂಮಿಗೆ ಏನಾದರೂ ಕಾಣಿಕೆಯನ್ನು ನೀಡಿ ಜನ್ಮವನ್ನು ಸಾರ್ಥಕ ಪಡಿಸಿಕೊಳ್ಳಬೇಕೆಂಬ ಭಾವನೆ ಯಾರಲ್ಲೂ ಸಹಾ ಇಲ್ಲವಾಗಿದೆ.
ಇದರ ಬದಲಾಗಿ ನಾವು ಏನು ಪಡೆಯಬೇಕೆಂದು ಕೇಳುತ್ತಿದೆ ಸಮಾಜಕ್ಕೆ ನಾವು ಏನು ಕೂಡಬಹುದೆ ಎಂಬುದನ್ನು ಮರೆಯಲಾಗುತ್ತಿದೆ
ಎಂದು ಪರಮಶಿವಮೂತಿ ಆತಂಕವನ್ನು ವ್ಯಕ್ತಪಡಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಕಾರ ಭಾರತಿಯ ಜಿಲ್ಲಾ ಅಧ್ಯಕ್ಷರಾದ ಶ್ರೀಮತಿ ಸುಜಾತ ಲಿಂಗಾರೆಡ್ಡಿ ವಹಿಸಿದ್ದರು. ಸಮಾರಂಭದಲ್ಲಿ
ಶಿಕ್ಷಕರ ಸರ್ಕಾರಿ ಶಿಕ್ಷಣ ಮಹಾ ವಿದ್ಯಾಲಯದ ಪದ ನಿಮಿತ್ತ ಸಹ ನಿರ್ದೆಶಕರಾದ ಶ್ರೀಮತಿ ಲೀಲಾವತಿ, ಇತಿಹಾಸ ತಜ್ಞರಾದ
ಡಾ.ರಾಜಶೇಖರಪ್ಪ, ಹಿರಿಯೂರಿನ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ತಿಪ್ಪೇಸ್ವಾಮಿ, ಢಾ.ಯಶೋಧಾ ರಾಜಶೇಖರಪ್ಪ, ಸಂಸ್ಕಾರ
ಭಾರತೀಯ ಮಾಜಿ ಪ್ರಧಾನ ಕಾರ್ಯದರ್ಶಿಗಳಾದ ಡಾ.ರಾಜೀವ ಲೋಚನ, ಕಾರ್ಯದರ್ಶಿಗಳಾದ ಮಾರುತಿ ಮೋಹನ್, ಉಮೇಶ್
ತುಪ್ಪದ್ ಸಂಘಟನಾ ಕಾರ್ಯದರ್ಶಿ ರಾಮಚಂದ್ರ, ಪ್ರಧಾನ ಕಾರ್ಯದರ್ಶಿ ಹೇಮಂತ ರಾವ್, ಭಾಗವಹಿಸಿದ್ದರು.
ಗುರುರಾಜ್ ಪ್ರಾರ್ಥಿಸಿದರೆ, ನಾಗರಾಜ್ ಸ್ವಾಗತಿಸಿದರು, ಚಂದ್ರಿಕಾ ಸುರೇಶ್ ಕಾರ್ಯಕ್ರಮ ನಿರೂಪಿಸಿ ಪ್ರಸ್ತಾವಿಕವಾಗಿ
ಮಾತನಾಡಿದರು.

Leave a Reply

Your email address will not be published. Required fields are marked *