ಚಿತ್ರದುರ್ಗ|ಮನಸ್ಸನ್ನು ಹಗುರಾಗಿಸುವ ಶಕ್ತಿ ಸಂಗೀತಾ ಮತ್ತು ಚಿತ್ರಕಲೆಯಲ್ಲಿದೆ : ಶರಣ ಸಾಹಿತ್ಯ ಪರಿಷತ್‍ನ ರಾಜ್ಯ ಉಪಾಧ್ಯಕ್ಷರಾದ ಡಾ.ಕೆ.ಎಂ.ವಿರೇಶ್.

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಚಿತ್ರದುರ್ಗ ನ. 29 : ಮಾನವನ ಮನಸ್ಸು ಕೆಟ್ಟಾಗ ಸಂಗೀತವನ್ನು ಆಲಿಸುವುದು, ಚಿತ್ರವನ್ನು ಬಿಡಿಸುವುದು ಮಾಡಿದಾಗ ಮನಸ್ಸು ಹಗುರವಾಗುತ್ತದೆ ಇಂತಹ ಶಕ್ತಿ ಸಂಗೀತ ಮತ್ತು ಚಿತ್ರಕಲೆಯಲ್ಲಿ ಇದೆ ಎಂದು ಶರಣ ಸಾಹಿತ್ಯ ಪರಿಷತ್‍ನ ರಾಜ್ಯ ಉಪಾಧ್ಯಕ್ಷರಾದ ಡಾ.ಕೆ.ಎಂ.ವಿರೇಶ್ ತಿಳಿಸಿದರು.

ಕಲಾ ಚೈತನ್ಯ ಸೇವಾ ಸಂಸ್ಥೆ, ಸಾಂಸ್ಕøತಿಕ ಕಲಾ ಸಂಘ ಚಿತ್ರದುರ್ಗ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಬೆಂಗಳೂರು ಇವರ ಸಂಯುಕ್ತಾಶ್ರಯದಲ್ಲಿ 69ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ನಗರದ ಪತ್ರಿಕಾ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಚಿತ್ರಕಲಾ ಪ್ರದರ್ಶನ ಹಾಗೂ ಗಾನ ಮತ್ತು ಚಿತ್ರ ಸಂಗಮ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕಲಾವಿದರನ್ನು ಗೌರವಿಸುವ ಕಾರ್ಯವನ್ನು
ಮಾಡಬೇಕಿದೆ ಅವರ ಕಲೆಗೆ ಬೆಲೆಯನ್ನು ಕಟ್ಟಲಾಗದು ಆದರೆ ಅದನ್ನು ಪ್ರೋತ್ಸಾಹಿಸುವ ಕಾರ್ಯವನ್ನು ಎಲ್ಲರು ಮಾಡಬೇಕಿದೆ. ಈ
ಚಿತ್ರಕಲಾವಿದರಲ್ಲಿ ಹಲವಾರು ಜನ ಉನ್ನತವಾದ ಶಿಕ್ಷಣವನ್ನು ಪಡೆದವರು ಇದ್ಧಾರೆ ಅವರು ಸಹಾ ತಮ್ಮ ಬಿಡುವಿನ ವೇಳೆಯಲ್ಲಿ
ಚಿತ್ರಕಲೆಯನ್ನು ಮೈಗೂಡಿಸಿಕೊಂಡು ಅದರಲ್ಲಿ ತಲ್ಲೀನರಾಗಿದ್ಧಾರೆ, ಇದರಿಂದ ಅವರಿಗೆ ನೆಮ್ಮದಿ ಶಾಂತಿ ಸಿಗುತ್ತದೆ ಎಂದರು.

ಮಾನವನಾದವನಿಗೆ ತನ್ನ ಜೀವನದಲ್ಲಿ ಕಲಾತ್ಮಕವಾದ ಜೀವನವನ್ನು ರೂಪಿಸಿಕೊಳ್ಳದಿದ್ದರೆ ಜೀವನೇ ಇಲ್ಲ ಎನ್ನುವರಾಗುತ್ತದೆ. ಮಾನವರಾದ ಮೇಲೆ ತಮ್ಮ ಬದುಕಿನಲ್ಲಿ ಯಾವುದಾರೊಂದು ಕಲೆಯನ್ನು ಆಳವಡಿಸಿಕೊಳ್ಳಬೇಕಿದೆ, ಸಂಗೀತ, ನಾಟ್ಯ, ಚಿತ್ರಕಲೆ, ಭರತನಾಟ್ಯ, ಓದುವುದು, ಬರೆಯುವುದು, ಸೇರಿದಂತೆ ಇತರೆ ಹವ್ಯಾಸಗಳನ್ನು ನಮ್ಮ ಬದುಕಿನಲ್ಲಿ ಇರಬೇಕಿದೆ, ಇದ್ಧಾಗ ಮಾತ್ರ ನಮ್ಮ ಬದುಕು ಹಸನಾಗಲು ಸಾಧ್ಯವಿದೆ ಎಂದ ಅವರು, ಮುಂದಿನ ದಿನದಲ್ಲಿ ಚಿತ್ರದುರ್ಗದಲ್ಲಿ ಆಖಿಲ ಭಾರತ ಶರಣ ಪರಿಷತ್ ವತಿಯಿಂದ ಸಮ್ಮೇಳನವನ್ನು ಆಯೋಜಿಸಲಾಗುವುದು ಮುರು ದಿನಗಳ ಕಾಲ ನಡೆಯುವ ಈ ಸಮ್ಮೇಳನದಲ್ಲಿ ಚಿತ್ರಕಲೆಯನ್ನು ಪ್ರದರ್ಶನ ಮಾಡಲು ಅವಕಾಶವನ್ನು ಕಲ್ಪಿಸಿಕೊಡಲಾಗುವುದು ಎಂದರು.

ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ದಿನೇಶ್ ಗೌಡಗೆರೆ ಮಾತನಾಡಿ, ಪ್ರತಿಭೆ ಯಾರ ಸೋತ್ತು ಅಲ್ಲ ಅದು ಸಾಧಕನ ಸೋತ್ತಾಗಿದೆ. ಇದಕ್ಕೆ ಸತತವಾದ ಪ್ರಯತ್ನ ಬೇಕಿದೆ ಪ್ರಯತ್ನದಿಂದ ಮಾತ್ರ ಯಶಸ್ಸು ಸಿಗಲು ಸಾಧ್ಯವಿದೆ. ನನ್ನ ಅವಧಿಯಲ್ಲಿ ಇಂತಹ ಕಾರ್ಯಕ್ರಮಗಳಿಗೆ ಸದಾ ಪ್ರೋತ್ಸಾಹ ನೀಡಲಾಗುವುದೆಂದು ತಿಳಿಸಿದರು.
ರಾಜ್ಯ ಲಲಿತಾ ಕಲಾ ಆಕಾಡೆಮಿಯ ಸದಸ್ಯರಾದ ಸಿ.ಕಣ್ಮೇಶ್ ಮಾತನಾಡಿ, ಯುವ ಕಲಾವಿದರನ್ನು ಗುರುತಿಸಿ ಅವರಿಗೆ ಪ್ರೋತ್ಸಾಹ ನೀಡುವುದು ಇಂದಿನ ದಿನಮಾನದಲ್ಲಿ ಅಗತ್ಯವಾಗಿದೆ. ಕೈಯಲ್ಲಿ ಕಲೆ ಇದೆ ಆದರೆ ಅದನ್ನು ಬೇರೆಯವರಿಗೆ ತೋರಿಸಲು ಅಗತ್ಯವಾದ ವೇದಿಕೆ ಇಲ್ಲವಾಗಿದೆ ಇಂತಹರಿಗೆ ಈ ರೀತಿಯ ಕಾರ್ಯಕ್ರಮಗಳಲ್ಲಿ ಅವಕಾಶ ನೀಡುವುದರಿಂದ ಅವರಿಗೂ ಸಹಾ ಸಹಾಯವಾಗುತ್ತದೆ ಎಂದರು.
ಕಲಾ ಚೈತನ್ಯ ಸೇವಾ ಸಂಸ್ಥೆಯ ಕಾರ್ಯದರ್ಶಿ ನಾಗರಾಜ್ ಬೇದ್ರೇ ಮಾತನಾಡಿ, ನಮ್ಮ ಚಿತ್ರದುರ್ಗದಲ್ಲಿ ಹಲವಾರು ಜನ
ಚಿತ್ರಕಲಾವಿದರು ಇದ್ದಾರೆ ಅವರಲ್ಲಿ ಪ್ರತಿಭೆ ಇದೆ ಆದರೆ ಅದನ್ನು ಹೂರ ಹಾಕುವ ಕೆಲಸವಾಗುತ್ತಿಲ್ಲ ತಾವು ಬರೆದ ಚಿತ್ರವನ್ನು ಎಲ್ಲಿ
ಪ್ರದರ್ಶನ ಮಾಡಬೇಕೆಂದು ತಿಳಿಯದೆ ಸುಮ್ಮನಿದ್ದಾರೆ ಇಂತಹರಿಗೆ ಒಂದು ಆರ್ಟ್ ಗ್ಯಾಲರಿಯನ್ನು ಸರ್ಕಾರದವತಿಯಿಂದ ನಿರ್ಮಾಣ
ಮಾಡಿಕೊಡಬೇಕೆಂದು ಸರ್ಕಾರಕ್ಕೆ ಮನವಿ ಮಾಡಿದರು.

Leave a Reply

Your email address will not be published. Required fields are marked *