ಚಿತ್ರದುರ್ಗ ಟೌನ್ ಕೋ-ಆಪರೇಟಿವ್ ಸೊಸೈಟಿ ಲಿ.ಗೆ ಅಧ್ಯಕ್ಷರಾಗಿ ನಿಶಾನಿ ಜಯ್ಯಣ್ಣ ಹಾಗೂ ಉಪಾಧ್ಯಕ್ಷರಾಗಿ ಎನ್.ಎಂ.ಪುಷ್ಟವಲ್ಲಿ ಆಯ್ಕೆ.

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಚಿತ್ರದುರ್ಗ ಫೆ. 06 : ಚಿತ್ರದುರ್ಗ ನಗರದ ವಾಸವಿ ವೃತ್ತದಲ್ಲಿನ ಚಿತ್ರದುರ್ಗ ಟೌನ್ ಕೋ-ಆಪರೇಟಿವ್ ಸೊಸೈಟಿ ಲಿ.ಗೆ ಮುಂದಿನ 5 ವರ್ಷಕ್ಕೆ ಅಧ್ಯಕ್ಷರಾಗಿ ನಿಶಾನಿ ಜಯ್ಯಣ್ಣ ಹಾಗೂ ಉಪಾಧ್ಯಕ್ಷರಾಗಿ ಶ್ರೀಮತಿ ಎನ್.ಎಂ.ಪುಷ್ಟವಲ್ಲಿ ಇಂದು ನಡೆದ ಕಾರ್ಯಕಾರಿಣಿ ಸಭೆಯಲ್ಲಿ
ಆಯ್ಕೆಯಾಗಿದ್ದಾರೆ ಎಂದು ಚಿತ್ರದುರ್ಗ ಟೌನ್ ಕೋ-ಆಪರೇಟಿವ್ ಸೊಸೈಟಿ ಲಿ.,ನ ಚುನಾವಣಾ ಅಧಿಕಾರಿಗಳು, ಹಾಗೂ ಅಧೀಕ್ಷರು, ಸಹಕಾರ ಸಂಘಗಳ ಸಹಾಯಕ ನಿಬಂಧಕರ ಕಚೇರಿ, ಚಿತ್ರದುರ್ಗ ಉಪ ವಿಭಾಗದ ಅಧೀಕ್ಷಕರಾದ ಎಸ್.ಮೊಹಮ್ಮದ್ ಯೂನುಸ್ ಪರ್ವೀಜ್ ತಿಳಿಸಿದ್ದಾರೆ.

ಕಳೆದ ಮಾಹಿ 27 ರಂದು ನಡೆದ ಚುನಾವಣೆಯಲ್ಲಿ ಸೊಸೈಟಿಯ 12 ಜನ ನಿರ್ದೆಶಕ ಸ್ಥಾನಕ್ಕೆ ನಿಶಾನಿ ಜಯ್ಯಣ್ಣರವರ ನೇತೃತ್ವದ ತಂಡ ಅವಿರೋಧವಾಗಿ ಆಯ್ಕೆಯಾಗಿತ್ತು. ಈ ಆಯ್ಕೆಯಲ್ಲಿ ಕುರುಬ, ಬಣಜಿಗ, ಮರಾಠ, ಲಿಂಗಾಯತ,ಹರಿಜನ ನಾಯಕ ಒಬಿಸಿಗೆ
ಅವಕಾಶವನ್ನು ನೀಡಲಾಗಿದೆ. ಈ ಚುನಾವಣೆಯಲ್ಲಿ 06 ಸಾಮಾನ್ಯ ಸ್ಥಾನದಿಂದ ಎಂ.ನಿಶಾನಿ ಜಯ್ಯಣ್ಣ, ಲಿಯಾಕತ್ ಅಲಿ ಖಾನ್,
ಸಾಧೀಖ್ ಬಾಷಾ, ಜಿ.ಸುರೇಶ್ ಕುಮಾರ್ (ಭಾಫ್ನಾ) ಜೆ.ಆರ್.ಹರೀಶ್, ಜೆ.ನಿಶಾನಿ ಧಶರಥ್, ಒಂದು ಪರಿಶಿಷ್ಟ ಜಾತಿ ಮೀಸಲು
ಸ್ಥಾನದಿಂದ ಚಂದ್ರಪ್ಪ, ಒಂದು ಪರಿಶಿಷ್ಟ ಪಂಗಡ ಮೀಸಲು ಸ್ಥಾನದಿಂದ ಓ.ತಿಪ್ಪೇಸ್ವಾಮಿ, ಒಂದು ಹಿಂದುಳಿದ ವರ್ಗಗಳ (ಪ್ರವರ್ಗ-
ಎ) ಮೀಸಲು ಸ್ಥಾನ, ಶ್ರೀನಿವಾಸ್ ಮೂರ್ತಿ, ಒಂದು ಹಿಂದುಳಿದ ವರ್ಗಗಳ (ಪ್ರವರ್ಗ-ಬಿ) ಮೀಸಲು ಸ್ಥಾನದಿಂದ ಸೂರ್ಯ ಪ್ರಕಾಶ್
ಹಾಗೂ ಎರಡು ಮಹಿಳಾ ಮೀಸಲು ಸ್ಥಾನದಿಂದ ಎನ್.ಎಂ.ಪುಷ್ಪವಲ್ಲಿ ಮತ್ತು ಎ. ಚಂಪಕಾ ರವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಇಂದು ಸೊಸೈಟಿಯ ಸಭಾಂಗಣದಲ್ಲಿ ನಡೆದ ಕಾರ್ಯಕಾರಿ ಸಮಿತಿಯ ಸಭೆಯಲ್ಲಿ ಮುಂದಿನ 5 ವರ್ಷದ ಅವಧಿಗೆ ಅಧ್ಯಕ್ಷರಾಗಿ
ನಿಶಾನಿ ಜಯ್ಯಣ್ಣ ಹಾಗೂ ಉಪಾಧ್ಯಕ್ಷರಾಗಿ ಶ್ರೀಮತಿ ಎನ್.ಎಂ.ಪುಷ್ಪವಲ್ಲಿ ರವರು ಆಯ್ಕೆಯಾಗಿದ್ದಾರೆ.

ನಿಶಾನಿ ಜಯ್ಯಣ್ಣ ರವರು ಟೌನ್ ಕೋ-ಆಪರೇಟಿವ್ ಸೊಸೈಟಿ ಅಧ್ಯಕ್ಷರಾಗಿ ಆಯ್ಕೆಯಾಗುತ್ತಿದ್ದಂತಯೇ ಅವರು ಅಭಿಮಾನಿಗಳು
ಸಂಘ ಸಂಸ್ಥೆಯ ಪದಾಧಿಕಾರಿಗಳು ಹಿತೈಷಿಗಳು ಆಗಮಿಸಿ ಅವರಿಗೆ ಶಾಲು, ಹಾರ ತುರಾಯಿಯನ್ನು ನೀಡಿ ಸಿಹಿಯನ್ನು ತಿನ್ನಿಸಿ ಶುಭ
ಕೋರಿದರು. ಇದೇ ಸಂದರ್ಭದಲ್ಲ ಸೊಸೈಟಿಯ ಮುಭಾಗದಲ್ಲಿ ಪಟಾಕಿಯನ್ನು ಸಿಡಿಸಿ, ಅಲ್ಲಿದ್ದವರಿಗೆಲ್ಲಾ ಸಿಹಿಯನ್ನು ಹಂಚಲಾಯಿತು.

Leave a Reply

Your email address will not be published. Required fields are marked *