Chitradurga Travel Guide: ರಾಜ್ಯದಲ್ಲಿರುವ ಒಂದೊಂದು ಜಿಲ್ಲೆಗಳು ಒಂದೊಂದು ವಿಶೇಷತೆಯನ್ನು ಹೊಂದಿವೆ. ಹಾಗೆಯೇ ಚಿತ್ರದುರ್ಗವನ್ನು ಕೋಟೆ ನಾಡು ಎಂದು ಕರೆಯಲಾಗುತ್ತದೆ. ಈ ಜಿಲ್ಲೆಯಲ್ಲಿ ಪ್ರಸಿದ್ಧ ಪ್ರವಾಸಿ ತಾಣಗಳನ್ನು ಕಾಣಬಹುದು. ಹಾಗಾದರೆ ಯಾವೆಲ್ಲ ಪ್ರವಾಸಿ ತಾಣಗಳನ್ನು ಒಳಗೊಂಡಿದೆ ಹಾಗೂ ತಲುಪುವ ಮಾರ್ಗಗಳ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.

ಇನ್ನೂ ಕೆಲವೇ ದಿನಗಳಲ್ಲಿ ಶಾಲಾ ವಿದ್ಯಾರ್ಥಿಗಳ ಪರೀಕ್ಷೆಗಳು ಮುಗಿಯಲಿದ್ದು, ಬೇಸಿಗೆ ರಜೆ ಘೋಷಣೆ ಮಾಡಲಾಗುತ್ತದೆ. ಈ ವೇಳೆ ಮಕ್ಕಳ ಜೊತೆ ಪ್ರವಾಸ ಮಾಡಲು ಬೆಂಗಳೂರಿನ ಬಹುತೇಕ ಮಂದಿ ಹತ್ತಿರದ ತಾಣಗಳ ಹುಡುಕಾಟದಲ್ಲಿದ್ದಾರೆ. ಹಾಗಾದ್ರೆ ಮತ್ತೇಕೆ ತಡ, ಒಂದೇ ದಿನದಲ್ಲಿ ಚಿತ್ರದುರ್ಗ ಜಿಲ್ಲೆಯಲ್ಲಿರುವ ಇತಿಹಾಸ ಪ್ರಸಿದ್ಧ ತಾಣಗಳನ್ನು ಸವಿಯಲು ಇದೇ ಸೂಕ್ತ ಸಮಯ.

ಕೋಟೆ ನಾಡು ಚಿತ್ರದುರ್ಗ ಜಿಲ್ಲೆಯಲ್ಲಿ ವಾಣಿವಿಲಾಸ ಜಲಾಶಯ, ಗಾಯಿತ್ರಿ ಜಲಾಶಯ, ಅಶೋಕ್ ಸಿದ್ದಾಪುರ ಹಾಗೂ ಚಿತ್ರದುರ್ಗದ ಕಲ್ಲಿನ ಕೋಟೆ, ಜೋಗಿ ಮಟ್ಟಿ, ಚಂದ್ರವಳ್ಳಿ ತೋಟಕ್ಕೆ ಭೇಟಿ ನೀಡಿ ನಂತರ ನಾಯಕನಹಟ್ಟಿ ಶ್ರೀ ತಿಪ್ಪೇರುದ್ರಸ್ವಾಮಿ ಹಾಗೂ ಹೊಳಲ್ಕೆರೆ ಗಣೇಶನ ದರ್ಶನ ಕೂಡ ಪಡೆಯಬಹುದಾಗಿದೆ.
ಚಿತ್ರದುರ್ಗದ ಕಲ್ಲಿನ ಕೋಟೆ: ಚಿತ್ರದುರ್ಗ ಕೋಟೆನಾಡು ಅಂತಲೇ ಪ್ರಸಿದ್ಧಿ ಪಡೆದಿದೆ. ನಾಗರಹಾವು ಅಂದರೆ ತಟ್ಟನೆ ನೆನಪಿಗೆ ಬರುವುದು ಡಾ.ವಿಷ್ಣುವರ್ಧನ್ ಅಭಿನಯದ ರಾಮಾಚಾರಿ ಚಿತ್ರ. ಡಾ. ವಿಷ್ಣುವರ್ಧನ್ ಅವರನ್ನು ಚಿತ್ರರಂಗದಲ್ಲಿ ಮಿಂಚಿಸಿದ್ದೇ ವನಿಕೆ ಓಬವ್ವ ಮೆರೆದ ಕೋಟೆ ಆಗಿದೆ. ಜಿಲ್ಲೆಯ ಪ್ರವಾಸಿ ತಾಣವಾದ ಚಿತ್ರದುರ್ಗದ ಪಾಳೆಯಗಾರರು ಆಳ್ವಿಕೆ ನಡೆಸಿರುವ ಏಳು ಸುತ್ತಿನ ಕೋಟೆಗೆ ಒಮ್ಮೆ ಭೇಟಿ ಕೊಡಿ. ಬೆಂಗಳೂರಿನಿಂದ ಚಿತ್ರದುರ್ಗಕ್ಕೆ ಕೇವಲ 201.2 ಕಿಲೋ ಮೀಟರ್ ಆಗಲಿದೆ.
ವಾಣಿ ವಿಲಾಸ ಸಾಗರ: ಇನ್ನು ಇದೀಗ ಮಧ್ಯ ಕರ್ನಾಟಕದ ಕೋಟೆ ನಾಡು ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಮಾರಿಕಣಿವೆ ಡ್ಯಾಂ ಭರ್ತಿಗೆ ಕ್ಷಣಗಣನೆ ಆರಂಭವಾಗಿದ್ದು, ಕೋಡಿ ಬೀಳುವುದು ಬಹುತೇಕ ಖಚಿತವಾಗಿದೆ. ಇದನ್ನು ಈ ವೇಳೆ ಕಣ್ತುಂಬಿಕೊಳ್ಳಲು ಉತ್ತಮ ಸಮಯವಾಗಿದೆ. ಅಣೆಕಟ್ಟಿನ ಎಡ ಮತ್ತು ಬಲ ಭಾಗದಲ್ಲಿ ಕಪ್ಪುಶಿಲೆಯ ಅಪರೂಪದ ಸುಂದರ ಮಂಟಪಗಳಿಗೆ. ಇಲ್ಲಿ ಫೋಟೋ ಕ್ಲಿಕ್ಕಿಸಲು ವಿಶೇಷ ಕೋನಗಳು ಸಿಗುತ್ತವೆ.
ಕಮಾನು ದ್ವಾರದಿಂದ ಹಸಿರುಟ್ಟ ಬೆಟ್ಟಗಳ ಸೌಂದರ್ಯವನ್ನು ಕ್ಲಿಕ್ಕಿಸುವ ಸೊಬಗೇ ಅದ್ಭುತವಾಗಿರುತ್ತದೆ. ಗುಡ್ಡಗಳ ಸಂಕೀರ್ಣವನ್ನು ಜಲಾಶಯದ ಸುತ್ತ ಒಮ್ಮೆ ಕಣ್ಣಾಡಿಸಿದರೆ, ಅಚ್ಚಹಸಿರಿನಿಂದ ಕಂಗೊಳಿಸುವ ದೃಶ್ಯವನ್ನು ಕಾಣಬಹುದಾಗಿದೆ. ಜಲಾಶಯದ ಮೇಲೆ ನಿಂತು ಮತ್ತೊಮ್ಮೆ ಕಣ್ಣಾಡಿಸಿದರೆ ಅಡಿಕೆ, ತೆಂಗು, ತೋಟಗಳ ಸೌಂದರ್ಯವನ್ನು ಸವಿಯಬಹುದಾಗಿದೆ. ಜಲಾಶಯದ ಮತ್ತೊಂದು ತುದಿಯಲ್ಲಿ ನಿಂತರೆ, ಭಾರತ ಭೂಪಟದ ಆಕಾರ ಹೊಂದುವ ದೃಶ್ಯವನ್ನು ಕಾಣಬಹುದಾಗಿದೆ. ಸೂರ್ಯಾಸ್ತ ಇಲ್ಲಿನ ಮತ್ತೊಂದು ವಿಶೇಷವಾಗಿದೆ. ಜಲಾಶಯದ ಎಡ ಭಾಗದ ಉತ್ತೆರಿಗುಡ್ಡ ಹಾಗೂ ಬಲ ಭಾಗದ ಛತ್ರಿಗುಡ್ಡಗಳ ನಡುವೆ ಮರೆಯಾಗುವ ಸೂರ್ಯನನ್ನು ಕಣ್ತುಂಬಿಸಿಕೊಳ್ಳಬಹುದಾಗಿದೆ. ಸಂಜೆ 4ರಿಂದ 5ರೊಳಗೆ ಇಲ್ಲಿದ್ದರೆ, ಸೂರ್ಯಾಸ್ತವನ್ನು ಸೆರೆ ಹಿಡಿಯಬಹುದು.

ಮಾರ್ಗಗಳ ವಿವರ: ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ವಾಣಿವಿಲಾಸಪುರ ಬಳಿ ವೇದಾವತಿ ನದಿಗೆ ಅಡ್ಡಲಾಗಿ 1907ರಲ್ಲಿ ಮೈಸೂರಿನ ನಾಲ್ವಡಿ ಕೃಷ್ಣರಾಜ ಒಡೆಯರ್ ಅಣೆಕಟ್ಟು ಕಟ್ಟಿಸಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ಬಾಬು ಬುಡನ್ ಗಿರಿ ಕಂದಕಗಳಲ್ಲಿ ಜನಿಸುವ “ವೇದಾ” ನದಿ ಕಡೂರಿನ ಬಳಿ “ಅವತಿ” ಎಂಬ ನದಿಯನ್ನು ಸೇರಿ ಮುಂದೆ ‘ವೇದಾವತಿ’ ನದಿಯಾಗಿ ಹರಿಯುತ್ತದೆ.
ವಾಣಿ ವಿಲಾಸ ಜಲಾಶಯವನ್ನು ನೋಡಲು ಬಯಸುವ ಪ್ರವಾಸಿಗರು ಹಿರಿಯೂರು ನಗರದಿಂದ ಹೊಸದುರ್ಗ ರಸ್ತೆ ಮಾರ್ಗವಾಗಿ 18 ಕಿಲೋ ಮೀಟರ್ ದೂರದ ಎಡಭಾಗಕ್ಕೆ ಜಲಾಶಯ ತಲುಪಬಹುದು. ಬೆಂಗಳೂರು, ತುಮಕೂರಿನಿಂದ ಹಿರಿಯೂರು ನಗರದ ಮೂಲಕ ಡ್ಯಾಂ ಪ್ರವೇಶಿಸಬಹುದು. ಹುಬ್ಬಳ್ಳಿ, ದಾವಣಗೆರೆಯಿಂದ ಚಿತ್ರದುರ್ಗ ರಾಷ್ಟ್ರೀಯ ಹೆದ್ದಾರಿ ನಾಲ್ಕರ ಬಲಭಾಗದ ವಿವಿ ಪುರ ಕ್ರಾಸ್ ಮೂಲಕ ಜಲಾಶಯಕ್ಕೆ ತೆರಳಬಹುದು. ಚಿಕ್ಕಮಗಳೂರು, ಶಿವಮೊಗ್ಗ ಭಾಗದ ಪ್ರವಾಸಿಗರು ಹೊಸದುರ್ಗದಿಂದ ಹಿರಿಯೂರು ಮಾರ್ಗವಾಗಿ ಬಲಭಾಗದ ಮೂಲಕ ತೆರಳಿ ಡ್ಯಾಂ ವೀಕ್ಷಿಸಬಹುದಾಗಿದೆ.

ಬೆಂಗಳೂರಿನಿಂದ ಬರುವವರಿಗೆ ಪ್ರಮುಖ ಮಾಹಿತಿ:ನಿಂದ ಹಿರಿಯೂರಿನ ಮೂಲಕ ಪ್ರಯಾಣ ಬೆಳೆಸಿದರೆ ವಾಣಿ ವಿಲಾಸ ಜಲಾಶಯ ನೋಡಬಹುದು. ನಂತರ ಹಿರಿಯೂರು ಮಾರ್ಗವಾಗಿ ಎಡಭಾಗಕ್ಕೆ ಚಿತ್ರದುರ್ಗ ತಲುಪಿ ಕೋಟೆ, ಜೋಗಿ ಮಟ್ಟಿ, ಚಂದ್ರವಳ್ಳಿ ತೋಟದ ಸೌಂದರ್ಯವನ್ನು ಸವಿಯಬಹುದಾಗಿದೆ.
Source : One India
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
WhatsApp Group:https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharehat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1
Views: 0